3 ಸಾವಿರಕ್ಕೂ ಹೆಚ್ಚು ಅಹವಾಲು ಆಲಿಸಿದ ಡಿಕೆಶಿ 
ರಾಜ್ಯ

'ಮನೆ ಬಾಗಿಲಿಗೆ ಬಂತು ಸರ್ಕಾರ' ಕಾರ್ಯಕ್ರಮಕ್ಕೆ ಚಾಲನೆ, 3 ಸಾವಿರಕ್ಕೂ ಹೆಚ್ಚು ಅಹವಾಲು ಆಲಿಸಿದ ಡಿಕೆಶಿ

ಜನರ ಸಂಕಷ್ಟಗಳನ್ನು ಪರಿಹಾರಿಸುವುದಕ್ಕಾಗಿ ಮನೆ ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ’ ಎಂಬ ಜನಸ್ಪಂದನ ಕಾರ್ಯಕ್ರಮಕ್ಕೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಬುಧವಾರ ಚಾಲನೆ ನೀಡಿದ್ದಾರೆ.

ಬೆಂಗಳೂರು: ಜನರ ಸಂಕಷ್ಟಗಳನ್ನು ಪರಿಹಾರಿಸುವುದಕ್ಕಾಗಿ ಮನೆ ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ’ ಎಂಬ ಜನಸ್ಪಂದನ ಕಾರ್ಯಕ್ರಮಕ್ಕೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಬುಧವಾರ ಚಾಲನೆ ನೀಡಿದ್ದಾರೆ.

ಇಂದು ಕೆಆರ್‌ಪುರಂನ ದೂರವಾಣಿ ನಗರದ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಶಾಸಕರಾದ ಬಿ.ಎ ಬಸವರಾಜು, ಮಂಜುಳ ಅರವಿಂದ ಲಿಂಬಾವಳಿ, ಮಾಜಿ ಎಂಎಲ್‌ಸಿ ನಾರಾಯಣಸ್ವಾಮಿ, ಮಾಜಿ ರಾಜ್ಯಸಭಾ ಸದಸ್ಯ ರಾಜೀವ್‌ಗೌಡ, ಬಿಬಿಎಂಪಿ ಆಯುಕ್ತ ತುಷಾರ್‌ಗಿರಿನಾಥ್ ಅವರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಜನರಿಂದ 3 ಸಾವಿರಕ್ಕೂ ಅಧಿಕ ದೂರುಗಳು ಬಂದಿವೆ. ಸಮಸ್ಯೆಗಳ ಸರಮಾಲೆ ಹೊತ್ತು ಮೂರು ಸಾವಿರಕ್ಕೂ ಅಧಿಕ ಜನರು ಬಂದಿದ್ದರು. ಟೋಕನ್ ಪಡೆದ ಒಬ್ಬೊಬ್ಬರನ್ನೇ ತಮ್ಮ ಬಳಿ ಕರೆದ ಡಿಕೆ ಶಿವಕುಮಾರ್​ ಅವರು ಅಹವಾಲು ಆಲಿಸಿದರು.

ಮಹದೇವಪುರ, ಕೆ.ಆರ್.ಪುರಂ ಎರಡು ವಿಧಾನಸಭಾ ಕ್ಷೇತ್ರದಿಂದ ಡಿಸಿಎಂಗೆ ಅಹವಾಲು ಸಲ್ಲಿಸಲು 3 ಸಾವಿರಕ್ಕೂ ಹೆಜ್ಜು ಜನ ನೋಂದಣಿ ಮಾಡಿಕೊಂಡಿದ್ದರು. ಡಿಕೆ ಶಿವಕುಮಾರ್ ಅವರು ಟೋಕನ್ ಪಡೆದ ಒಬ್ಬೊಬ್ಬರನ್ನೇ ತಮ್ಮ ಬಳಿ ಕರೆದು​ ಅಹವಾಲು ಆಲಿಸಿದ್ದಾರೆ.

ಕೆಲ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡಿದ್ದು, ಅಧಿಕಾರಿಗಳನ್ನೇ ಕರೆದು ತಕ್ಷಣ ಸಮಸ್ಯೆಗೆ ಪರಿಹಾರ ನೀಡುವಂತೆ ಸೂಚನೆ ನೀಡಿದ್ದಾರೆ. ಯಾವ ಇಲಾಖೆಯವರೂ ಸಮಸ್ಯೆ ಬಗೆಹರಿಸಬೇಕು ಎಂದು ಡಿಕೆ ಶಿವಕುಮಾರ್​ ಅವರು ಬರೆದು ಕೊಟ್ಟಿದ್ದಾರೆ. ದೂರು ನೀಡಿದ ಬಳಿಕ‌ ಆಯಾ ಡಿಪಾರ್ಟಮೆಂಟ್ ಕೌಂಟರ್ ನಲ್ಲಿ ದೂರು ನೋಂದಣಿ ಮಾಡಲಾಗಿದೆ. ಬಿಬಿಎಂಪಿ, ಜಲಮಂಡಳಿ, ಬೆಸ್ಕಾಂ ಸೇರಿದಂತೆ ಹಲವು ಸಂಸ್ಥೆಗಳಿಗೆ ಪ್ರತ್ಯೇಕ ಕೌಂಟರ್ ವ್ಯವಸ್ಥೆ ಮಾಡಲಾಗಿತ್ತು.

ಬಳಿಕ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್,​ 3,431 ದೂರುಗಳನ್ನ ಸ್ವೀಕರಿಸಿದ್ದೇನೆ. ಎರಡು ಕ್ಷೇತ್ರಗಳ ಸಮಸ್ಯೆ ಕುರಿತು ಅಹವಾಲು ಸ್ವೀಕರಿಸಿದ್ದೇನೆ. ಎಲ್ಲ ಅರ್ಜಿಗಳನ್ನ ಸಂಬಂಧಪಟ್ಟ ಇಲಾಖೆಗಳಿಗೆ ಕಳುಹಿಸಿ ಬಗೆಹರಿಸುವ ಕೆಲಸ ಮಾಡುತ್ತೇವೆ. ಅನೇಕ ದೂರುಗಳು ಬಂದಿದ್ದು, ಏನು ಕ್ರಮ ತೆಗೆದುಕೊಳ್ಳಬೇಕು ಅದನ್ನು ತೆಗೆದುಕೊಳ್ಳುತ್ತೇವೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

20 ವರ್ಷ ಸಾಕಿ ಬೆಳೆಸಿದ 'ಅಶ್ವತ್ಥ'ಕ್ಕೆ ಕಿಡಿಗೇಡಿಗಳ ಕೊಡಲಿ ಪೆಟ್ಟು, ಬಿಕ್ಕಿ ಬಿಕ್ಕಿ ಅತ್ತ 'ವೃಕ್ಷಮಾತೆ', ಇಬ್ಬರ ಬಂಧನ, video viral

2nd Test, Day 3: ಮೊದಲ ಇನ್ನಿಂಗ್ಸ್ ನಲ್ಲಿ 248 ರನ್ ಗೆ ವಿಂಡೀಸ್ ಆಲೌಟ್, ಫಾಲೋಆನ್ ಹೇರಿದ ಭಾರತ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

SCROLL FOR NEXT