ಕಾಟೇರ ಚಿತ್ರತಂಡದ ಪಾರ್ಟಿ 
ರಾಜ್ಯ

ಜೆಟ್ ಲ್ಯಾಗ್ ಪಬ್ ಪಾರ್ಟಿ ಪ್ರಕರಣ- 'ಕಾಟೇರ' ತಂಡ ಇಂದು ವಿಚಾರಣೆಗೆ ಬಾರದಿದ್ದರೆ ಪೊಲೀಸರಿಂದ ಮತ್ತೆ ನೊಟೀಸ್ ಜಾರಿ

'ಕಾಟೇರ' ಚಿತ್ರದ ಸಕ್ಸಸ್ ಪಾರ್ಟಿಯಲ್ಲಿ ಅವಧಿ ಮೀರಿ ಬೆಳಗಿನ ಜಾವದವರೆಗೆ ಚಿತ್ರತಂಡ ಪಾರ್ಟಿ ಮಾಡಿತ್ತು ಎಂಬ ಆರೋಪ ಮೇಲೆ ಈಗಾಗಲೇ ಬೆಂಗಳೂರಿನ ಸುಬ್ರಹ್ಮಣ್ಯನಗರ ಠಾಣೆ ಪೊಲೀಸರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೇರಿದಂತೆ 8 ಮಂದಿಗೆ ನೊಟೀಸ್ ಜಾರಿ ಮಾಡಿದ್ದು ಇಂದು ಮಂಗಳವಾರ ವಿಚಾರಣೆಗೆ ಹಾಜರಾಗಬೇಕೆಂದು ಸೂಚಿಸಿದ್ದಾರೆ.

ಬೆಂಗಳೂರು: 'ಕಾಟೇರ' ಚಿತ್ರದ ಸಕ್ಸಸ್ ಪಾರ್ಟಿಯಲ್ಲಿ ಅವಧಿ ಮೀರಿ ಬೆಳಗಿನ ಜಾವದವರೆಗೆ ಚಿತ್ರತಂಡ ಪಾರ್ಟಿ ಮಾಡಿತ್ತು ಎಂಬ ಆರೋಪ ಮೇಲೆ ಈಗಾಗಲೇ ಬೆಂಗಳೂರಿನ ಸುಬ್ರಹ್ಮಣ್ಯನಗರ ಠಾಣೆ ಪೊಲೀಸರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೇರಿದಂತೆ 8 ಮಂದಿಗೆ ನೊಟೀಸ್ ಜಾರಿ ಮಾಡಿದ್ದು ಇಂದು ಮಂಗಳವಾರ ವಿಚಾರಣೆಗೆ ಹಾಜರಾಗಬೇಕೆಂದು ಸೂಚಿಸಿದ್ದಾರೆ.

ಒಂದು ವೇಳೆ ಇಂದು ವಿಚಾರಣೆಗೆ ಹಾಜರಾಗಿ ವಿವರಣೆ ನೀಡದಿದ್ದರೆ ಮತ್ತೊಂದು ಸುತ್ತಿನ ನೊಟೀಸ್ ಜಾರಿ ಮಾಡುವ ಸಾಧ್ಯತೆಯಿದೆ. ಪ್ರಕರಣವನ್ನು ಪೊಲೀಸರು ಗಂಭೀರವಾಗಿ ತೆಗೆದುಕೊಂಡಿದ್ದು ಜೆಟ್ ಲ್ಯಾಗ್ ಪಬ್ ನ ಮಾಲೀಕರಾದ ಶಶರೇಖಾ ಜಗದೀಶ್ ಅವರ ಮೇಲೆ ಸಹ ಕೇಸು ದಾಖಲಿಸಿ ವಿಚಾರಣೆ ನಡೆಸುವ ಸಾಧ್ಯತೆಯಿದೆ.

ಹಾಗಾದರೆ ಜನವರಿ 3ರಂದು ರಾತ್ರಿ ಕಾಟೇರ ಚಿತ್ರದ ಸಕ್ಸಸ್ ಪಾರ್ಟಿಯಲ್ಲಿ ಏನೇನಾಯಿತು ಎಂಬ ಬಗ್ಗೆ ಮಲ್ಲೇಶ್ವರ ಎಸಿಪಿ ಎದುರು ವಿವರಿಸಿದ್ದಾರೆ. ಪ್ರಕರಣ ನಡೆದ ದಿನ ಮಧ್ಯರಾತ್ರಿ 12.45ಕ್ಕೆ ಜೆಟ್​ಲ್ಯಾಗ್​ಗೆ ಅವತ್ತಿನ ನೈಟ್ ರೌಂಡ್ಸ್ ಇರುವ ಎಸ್​ಐ ಮತ್ತು ಸಿಬ್ಬಂದಿ ಹೋಗಿದ್ದರು. ತಡರಾತ್ರಿ 1:10ಕ್ಕೆ ಎಸ್​ಐ ಜೆಟ್​ಲ್ಯಾಗ್ ರೆಸ್ಟೋಬಾರ್ ಕ್ಲೋಸ್ ಮಾಡಿಸಿದ್ದರು. ಸ್ಟಾರ್​ಗಳು ಒಳಗಡೆ ಇರೋದೇಕೆ ಎಂದು ಎಸ್​ಐ ಪ್ರಶ್ನೆ ಮಾಡಿದ್ದರು.

‘ದರ್ಶನ್ ಸಿನಿಮಾವೊಂದರ ಮಾತುಕತೆ ನಡೆಯುತ್ತಿದೆ. ದರ್ಶನ್ ನಮ್ಮ ಫ್ಯಾಮಿಲಿ ಫ್ರೆಂಡ್. ಮೇಲೊಂದು ಗಾಜಿನ ರೂಮ್ ಇದೆ. ಅಲ್ಲಿ ಸಿನಿಮಾಗೆ ಸಂಬಂಧಿಸಿದಂತೆ ಮಾತುಕತೆ ನಡೆಸುತ್ತಿದ್ದೇವೆ’ ಎಂದು ಜೆಟ್​ಲ್ಯಾಗ್ ಮಾಲೀಕರು ಮಾಹಿತಿ ನೀಡಿದ್ದರು. ನಟ ದರ್ಶನ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ನಿರ್ದೇಶಕ ತರುಣ್ ಸುಧೀರ್ ಮಾತ್ರ ಇದ್ದಾರೆ ಎಂದು ಜೆಟ್​ಲ್ಯಾಗ್ ಮಾಲೀಕರು ಮಾಹಿತಿ ನೀಡಿದ್ದರು.

ಈ ನಡುವೆ ಮಧ್ಯರಾತ್ರಿ 2.50ಕ್ಕೆ ಬ್ಯಾಂಕ್ ಆಫ್ ಇಂಡಿಯಾದಲ್ಲಿ ರಾಬರಿ ಆಗಿದೆ ಎಂದು ಪೊಲೀಸರಿಗೆ ಕರೆ ಬಂದಿದೆ. ರೆಸ್ಟೋಬಾರ್ ಕ್ಲೋಸ್ ಮಾಡಿಸಿ ಆ ಕೇಸ್ ಅಟೆಂಡ್ ಮಾಡಲು ಪೊಲೀಸರು ಹೋಗಿದ್ದರು. ಸೈರನ್ ಆಗಿದ್ದರಿಂದ ಬ್ಯಾಂಕ್ ರಾಬರಿ ಆಗಿದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಟೆಕ್ನಿಕಲ್ ಇಶ್ಯೂ ಆಗಿದ್ದರಿಂದ ಸೈರನ್ ಕೂಗಿತ್ತು. ಅಲ್ಲಿಗೆ ಮುಂಜಾನೆ 3 ಗಂಟೆ ಆಗಿತ್ತು. ಈ ಪ್ರಕರಣ ಮುಗಿಯುತ್ತಿದ್ದಂತೆ ಮತ್ತೆ ರೆಸ್ಟೋಬಾರ್​ನತ್ತ ಪೊಲೀಸರು ಹೋಗಿದ್ದರು.

ರೆಸ್ಟೋರೆಂಟ್ ಹೊರಗೆ ದರ್ಶನ್ ಅಭಿಮಾನಿಗಳು ತಮ್ಮ ನೆಚ್ಚಿನ ನಟ ಬರುವುದಕ್ಕೆ ಕಾಯುತ್ತಿದ್ದರು. ಈ ವೇಳೆ ದರ್ಶನ್ ಜೊತೆ ಫೋಟೋಗಾಗಿ ಅಭಿಮಾನಿಗಳು ನಿಂತಿದ್ದರು. ಹೋಗಿ ಕ್ರೌಡ್ ಕ್ಲಿಯರ್ ಮಾಡಿ ದರ್ಶನ್ ಮತ್ತು ಸಹನಟರನ್ನು ಕಳಿಸಿದ್ದಾಗಿ ಪೊಲೀಸರು ಹೇಳಿದ್ದಾರೆ. 

ಅಂದು ರಾತ್ರಿ ನಡೆದ ಘಟನೆಗಳ ಬಗ್ಗೆ ಜೆಟ್​ಲ್ಯಾಗ್ ಮಾಲೀಕರಾದ ಶಶಿರೇಖಾ ಜಗದೀಶ್ ಹೇಳಿಕೆಯಲ್ಲಿ ನಟ ದರ್ಶನ್ ಸೇರಿ ಎಂಟು ಜನರ ಹೆಸರು ಇದೆ. ಹೀಗಾಗಿ, ಅವರಿಗೆ ನೋಟಿಸ್ ನೀಡಲಾಗಿದೆ. ಸದ್ಯ ನೋಟಿಸ್​ಗೆ ಯಾವುದೇ ಉತ್ತರ ಬಾರದಿರುವುದರಿಂದ ಮತ್ತು ಇಂದು ವಿಚಾರಣೆಗೆ ಹಾಜರಾಗದಿದ್ದರೆ ಇಂದು ಎರಡನೇ ಸಲ ನೊಟೀಸ್ ನೀಡಲು ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT