ರಾಜ್ಯ

ರಾಜ್ಯಮಟ್ಟದ ಸಮಿತಿ ಅಧ್ಯಕ್ಷರಿಗೆ ‘ಸಂಪುಟ ದರ್ಜೆ’ ಸ್ಥಾನಮಾನ: ಸಿಎಂ ಸಿದ್ದರಾಮಯ್ಯ ವಿರುದ್ಧ ಬೊಮ್ಮಾಯಿ ಕಿಡಿ

Manjula VN

ಬೆಂಗಳೂರು: ರಾಜ್ಯಮಟ್ಟದ ಸಮಿತಿಯ ಅಧ್ಯಕ್ಷರಿಗೆ ‘ಸಂಪುಟ ದರ್ಜೆ’ ಸ್ಥಾನಮಾನ ನೀಡುವ ಕುರಿತು ಮುಖ್ಯಮಂತ್ರಿ ಸಿಎಂ ಸಿದ್ಧರಾಮಯ್ಯ ಅವರು ಬುಧವಾರ ಘೋಷಣೆ ಮಾಡಿದ್ದು, ಸರ್ಕಾರ ಈ ನಿರ್ಧಾರಕ್ಕೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕಿಡಿಕಾರಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳ ಈ ಘೋಷಣೆ ನಿಯಮ ಉಲ್ಲಂಘನೆ ಮಾಡಿದಂತಾಗಿದೆ. ವಿಧಾನಸಭೆಯ ಒಟ್ಟು ಬಲದ ಶೇಕಡಾ 15 ರಷ್ಟು ಮೀರುವಂತಿಲ್ಲ. ಈಗಾಗಲೇ ಸಂಪುಟದಲ್ಲಿ ಈಗಾಗಲೇ 34 ಮಂದಿ ಸಚಿವರಿದ್ದಾರೆ. ಸಿದ್ದರಾಮಯ್ಯ ಅವರಿಗೆ ಸಂಪುಟ ದರ್ಜೆಯ ಐವರು ಸಲಹೆಗಾರರಿದ್ದಾರೆ. ಸಂಪುಟ ದರ್ಜೆ ಸ್ಥಾನಮಾನವನ್ನು ಹೊಂದಿರುವ ಇಬ್ಬರು ರಾಜಕೀಯ ಕಾರ್ಯದರ್ಶಿಗಳನ್ನು ಹೊಂದಿದ್ದಾರೆ. ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾಗಿರುವ ಹಿರಿಯ ಶಾಸಕ ಆರ್.ವಿ.ದೇಶಪಾಂಡೆ ಅವರಿಗೂ ಸಂಪುಟ ದರ್ಜೆಯ ಸ್ಥಾನಮಾನವಿದೆ ಎಂದು ಹೇಳಿದ್ದಾರೆ.

ಸಿಎಂ ಘೋಷಣೆಯಿಂದ ಮತ್ತೊಬ್ಬರಿಗೆ ಸಂಪುಟ ದರ್ಜೆ ಸ್ಥಾನಮಾನ ಸಿಗಲಿದೆ. ಇದರೊಂದಿಗೆ ಒಟ್ಟು ಸಂಖ್ಯೆ 43ಕ್ಕೆ ಏರಿಕೆಯಾಗಲಿದೆ. ಅಂದರೆ,   ಸೇರ್ಪಡೆಯಾಗಲಿದ್ದು, ಒಟ್ಟು 43 ಮಂದಿ ಕ್ಯಾಬಿನೆಟ್ ದರ್ಜೆಗೆ ಏರಲಿದ್ದಾರೆ. ಅಂದರೆ ವಿಧಾನಸಭೆಯ ಒಟ್ಟು ಬಲ ಶೇ.19ಕ್ಕೆ ಏರಿಕೆ ಮಾಡಿದಂತಾಗುತ್ತದೆ. ಸರ್ಕಾರದ ಈ ನಿರ್ಧಾರ ಅಸಂವಿಧಾನಿಕ ಮತ್ತು ನಿಯಮಗಳ ಉಲ್ಲಂಘನೆಯಾಗಿದೆ ಎಂದು ತಿಳಿಸಿದ್ದಾರೆ.

SCROLL FOR NEXT