ಸಾಂದರ್ಭಿಕ ಚಿತ್ರ 
ರಾಜ್ಯ

ಎಚ್ಚರ: ಆನ್‌ಲೈನ್ ಟ್ರೇಡಿಂಗ್ ಪ್ಲಾಟ್‌ಫಾರ್ಮ್‌ ಉದ್ಯೋಗಿಗಳ ಸೋಗಿನಲ್ಲಿ ಸೈಬರ್ ವಂಚನೆ

ಸೈಬರ್ ವಂಚಕರು ದಿನಕಳೆದಂತೆ ತಮ್ಮ ವಂಚನೆಗಾಗಿ ಹೊಸ ಹೊಸ ಮಾರ್ಗಗಳನ್ನು ಹುಡುಕಿಕೊಳ್ಳುತ್ತಿದ್ದು ಇದೀಗ ಆನ್‌ಲೈನ್ ಟ್ರೇಡಿಂಗ್ ಪ್ಲಾಟ್‌ಫಾರ್ಮ್‌ಗಳ ಉದ್ಯೋಗಿಗಳಂತೆ ನಟಿಸಿ ಗ್ರಾಹಕರಿಕೆ ವಂಚಿಸುತ್ತಿರುವ ಘಟನೆ ಬೆಳಕಿಗೆ ಬಂದಿದೆ.

ಬೆಂಗಳೂರು: ಸೈಬರ್ ವಂಚಕರು ದಿನಕಳೆದಂತೆ ತಮ್ಮ ವಂಚನೆಗಾಗಿ ಹೊಸ ಹೊಸ ಮಾರ್ಗಗಳನ್ನು ಹುಡುಕಿಕೊಳ್ಳುತ್ತಿದ್ದು ಇದೀಗ ಆನ್‌ಲೈನ್ ಟ್ರೇಡಿಂಗ್ ಪ್ಲಾಟ್‌ಫಾರ್ಮ್‌ಗಳ ಉದ್ಯೋಗಿಗಳಂತೆ ನಟಿಸಿ ಗ್ರಾಹಕರಿಕೆ ವಂಚಿಸುತ್ತಿರುವ ಘಟನೆ ಬೆಳಕಿಗೆ ಬಂದಿದೆ.

ಹೌದು.. ಈ ವರ್ಷದ ಆರಂಭದಲ್ಲೇ, ವಂಚಕರು ಶೂನ್ಯ-ದಲ್ಲಾಳಿ ಅನ್ಲೈನ್ ಟ್ರೇಡಿಂಗ್ ಸೈಟ್‌ಗಳ ಉದ್ಯೋಗಿಗಳಂತೆ ಸೋಗು ಹಾಕಿಕೊಂಡು ಗ್ರಾಹಕರಿಗೆ ವಂಚಿಸುತ್ತಿದ್ದಾರೆ. ಇದೇ ರೀತಿ ಇತ್ತೀಚೆಗೆ ಸಾಫ್ಟ್‌ವೇರ್ ವೃತ್ತಿಪರರಿಗೆ 2 ಕೋಟಿ ರೂ.ವರೆಗೆ ವಂಚಿಸಿದ ಕನಿಷ್ಠ ಮೂರು ಪ್ರಕರಣಗಳು ವರದಿಯಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. 

ಸಂತ್ರಸ್ಥ ಸಾಫ್ಟ್ ವೇರ್ ಉದ್ಯೋಗಿಗಗಳು ಸ್ಟಾಕ್ ಮಾರುಕಟ್ಟೆ ಹೂಡಿಕೆಯ ನೆಪದಲ್ಲಿ ಮೋಸ ಹೋಗಿದ್ದಾರೆ. ಬಿಟ್‌ಕಾಯಿನ್‌ಗಳ ರೂಪದಲ್ಲಿ ಸಂಸ್ಥೆಯ ನಕಲಿ ವೆಬ್‌ಸೈಟ್‌ನ ಭಾಗವಾಗಿ ಅವರ ಇ-ವ್ಯಾಲೆಟ್‌ಗಳಲ್ಲಿ ದೈನಂದಿನ ಆದಾಯವನ್ನು ಪಡೆದು ವಂಚಿಸಿದ್ದಾರೆ ಎಂದು ಹೇಳಲಾಗಿದೆ. ಆದರೆ ನೈಜವಾಗಿ ಆ ವ್ಯಾಲೆಟ್ ನಲ್ಲಿ ಯಾವುದೇ ರೀತಿಯ ನೈಜ ನಗದು ಇರಲಿಲ್ಲ. ಅಲ್ಲದೆ ಆ ವ್ಯಾಲೆಟ್ ಕೂಡ ಯಾವುದೇ ರೀತಿಯ ಮೌಲ್ಯವನ್ನು ಹೊಂದಿರಲಿಲ್ಲ ಎಂಬುದು ಸಾಬೀತಾಗಿದೆ. ವಿಶ್ವಾಸಾರ್ಹ ಆನ್‌ಲೈನ್ ಟ್ರೇಡಿಂಗ್ ಸೈಟ್‌ಗಳ ಉದ್ಯೋಗಿಗಳೆಂದು ಹೇಳಿಕೊಳ್ಳುವ ವಂಚಕರು ನಿರ್ದಿಷ್ಟವಾಗಿ ಐಟಿ ವೃತ್ತಿಪರರನ್ನು ಗುರಿಯಾಗಿಸಿಕೊಂಡು ವಾಟ್ಸಾಪ್ ಮೂಲಕ ಅವರನ್ನು ಸಂಪರ್ಕಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಮುಖ ಆನ್ಲೈನ್ ಟ್ರೇಡಿಂಗ್ ಪ್ಲಾಟ್ ಫಾರ್ಮ್ ಗಳ ನಕಲಿ ವೆಬ್ ಸೈಟ್ ಗಳನ್ನು ಸೃಷ್ಟಿಸಿ ತಮ್ಮ ಗ್ರಾಹಕರಿಗೆ ವ್ಯಾಪಾರ ಚಟುವಟಿಕೆಗಳನ್ನು ಮಾಡಿದ ಕುರಿತು ನಕಲಿ ದಾಖಲೆಗಳನ್ನು ತೋರಿಸಿದ್ದಾರೆ. ಇದನ್ನೂ ನಂಬಿದ ಗ್ರಾಹಕರು ಹೂಡಿಕೆ ಮಾಡಿ ಮೋಸ ಹೋಗಿದ್ದಾರೆ. ವಂಚಕರು ತಮ್ಮ ವಂಚನೆಗಾಗಿ ನಕಲಿ ವೆಬ್ ಸೈಟ್ ಅನ್ನು ಅಸಲಿ ವೆಬ್ ಸೈಟ್ ನಂತೆಯೇ ಅತ್ಯಂತ ನಿಖರವಾಗಿ ವಿನ್ಯಾಸಗೊಳಿಸಿದ್ದರು. ಮಾತ್ರವಲ್ಲದೇ ಲಾಗಿನ್, ಹೂಡಿಕೆಯ ಸ್ಥಿತಿಗತಿ ಮೇಲ್ವಿಚಾರಣೆ ಮಾಡಲು ಲೈವ್ ಟ್ರ್ಯಾಕರ್ ಅನ್ನು ಕೂಡ ಸಂಯೋಜಿಸಿದ್ದರು. ಸಂತ್ರಸ್ಥರಿಗೆ ಯಾವುದೇ ರೀತಿಯಲ್ಲೂ ಸಂದೇಹಕ್ಕೆ ಅವಕಾಶವಿಲ್ಲದಂತೆ ವೆಬ್ ಸೈಟ್ ರಚಿಸಿದ್ದರು ಎನ್ನಲಾಗಿದೆ.

ಪ್ರತಿ ಹೂಡಿಕೆಯ ನಂತರ, ಇ-ವ್ಯಾಲೆಟ್‌ನಲ್ಲಿ ಬಿಟ್‌ಕಾಯಿನ್‌ಗಳ ರೂಪದಲ್ಲಿ ಆದಾಯವನ್ನು ಮನ್ನಣೆ ಮಾಡಲಾಗುತ್ತದೆ. ಸಂತ್ರಸ್ತರು, ಬಿಟ್‌ಕಾಯಿನ್‌ಗಳು ಗಣನೀಯ ಮೌಲ್ಯವನ್ನು ಹೊಂದಿವೆ ಎಂಬ ಅಭಿಪ್ರಾಯದಲ್ಲಿ, ಹೆಚ್ಚಿನ ಆದಾಯವನ್ನು ಪಡೆಯುವ ಪ್ರಯತ್ನದಲ್ಲಿ ಕ್ರಮವಾಗಿ ಸುಮಾರು 80 ಲಕ್ಷ, 24 ಲಕ್ಷ ಮತ್ತು 90 ಲಕ್ಷ ರೂ ನಂತೆ. ಗಮನಾರ್ಹ ಹೂಡಿಕೆ ಮಾಡಿದ್ದಾರೆ. ಆದರೆ ಬಳಿಕವೇ ಅವರಿಗೆ ವಂಚನೆಯ ಜಾಲ ಬಯಲಾಗಿದೆ. ಹೂಡಿಕೆ ಬಳಿಕ ಲೈವ್ ಟ್ರ್ಯಾಕರ್ ಆರಂಭದಲ್ಲಿ ಹೂಡಿಕೆಯ ಪ್ರಗತಿಯನ್ನು ಸೂಚಿಸುವುದನ್ನು ನಿಲ್ಲಿಸಿದ್ದು, ಅವರ ಲಾಗಿನ್ ಗಳನ್ನು ಸಂಪೂರ್ಣವಾಗಿ ಬದಲಾಯಿಸಲಾಗಿದೆ. ಇದು ಸಂತ್ರಸ್ಥರು ವೆಬ್ ಸೈಟ್ ಗೆ ಪ್ರವೇಶ ಮಾಡುವುದನ್ನು ತಡೆದಿದೆ. ಕೂಡಲೇ ಸಂತ್ರಸ್ಥರು ತಮ್ಮ ಇ-ವ್ಯಾಲೆಟ್ ಅನ್ನು ಪರಿಶೀಲಿಸಿದ್ದು, ಅದು ನಿರೀಕ್ಷಿತ ಬಾಕಿಯನ್ನು ಹೊಂದಿತ್ತು. ಇದರಿಂದ ಕೊಂಚ ಸಮಾಧಾನಗೊಂಡ ಸಂತ್ರಸ್ಥರು ತಮ್ಮ ಬಿಟ್‌ಕಾಯಿನ್‌ಗಳನ್ನು ಮಾರಾಟ ಮಾಡಲು ಮತ್ತು ಅವುಗಳನ್ನು ನಗದಾಗಿ ಪರಿವರ್ತಿಸಲು ಬೇರೆ ಘಟಕದಿಂದ ಇನ್ನೊಬ್ಬ ವ್ಯಕ್ತಿಯನ್ನು ಸಂಪರ್ಕಿಸಿದಾಗ, ಆತ ಅವುಗಳನ್ನು ಪರಿಶೀಲಿಸಿ ಅದಕ್ಕೆ ಯಾವುದೇ ಮೌಲ್ಯವಿಲ್ಲ ಎಂದು ಅವರು ಕಂಡುಹಿಡಿದಿದ್ದಾರೆ. 

ಡಿಜಿಟಲ್ ಆಗಿ ಮುಂದುವರಿದ ಜಗತ್ತಿನಲ್ಲಿ, ಜನರು ಶಾಪಿಂಗ್, ವ್ಯಾಪಾರ ವಹಿವಾಟುಗಳು ಮತ್ತು ಕೆಲಸಕ್ಕೆ ಸಂಬಂಧಿಸಿದ ಚಟುವಟಿಕೆಗಳು ಸೇರಿದಂತೆ ವಿವಿಧ ಉದ್ದೇಶಗಳಿಗಾಗಿ ಹಲವಾರು ವೆಬ್‌ಸೈಟ್‌ಗಳಲ್ಲಿ ಫೋನ್ ಸಂಖ್ಯೆಗಳನ್ನು ಸ್ವಇಚ್ಛೆಯಿಂದ ಹಂಚಿಕೊಳ್ಳುತ್ತಾರೆ. ಆದರೆ ಫೋನ್ ಸಂಖ್ಯೆಗಳನ್ನು ಹಂಚಿಕೊಳ್ಳುವುದರೊಂದಿಗೆ ಸಂಬಂಧಿಸಿದ ಸಂಭಾವ್ಯ ಅಪಾಯಗಳನ್ನು ಹಲವರು ಕಡೆಗಣಿಸುತ್ತಾರೆ, ಇದು ಕೇವಲ ಒಂದು ಸಂಖ್ಯೆ ಎಂದು ನಂಬುತ್ತಾರೆ, ಇದು ಬಲೆಗಳು ಮತ್ತು ಮೋಸದ ಚಟುವಟಿಕೆಗಳಿಗೆ ದಾರಿ ಮಾಡಿಕೊಡುತ್ತದೆ ಎಂದು ಅವರು ಅರಿತುಕೊಳ್ಳುವುದಿಲ್ಲ. ಆಗಾಗ್ಗೆ, ಕ್ರೆಡಿಟ್ ಕಾರ್ಡ್‌ಗಳಂತಹ ಸೇವೆಗಳನ್ನು ಹುಡುಕುವಾಗ ಜನರು ತಮ್ಮ ಫೋನ್ ಸಂಖ್ಯೆಗಳನ್ನು ಹಂಚಿಕೊಳ್ಳುವಾಗ, ನಂತರ ಒಂದೇ ರೀತಿಯ ಕರೆಗಳನ್ನು ಸ್ವೀಕರಿಸುವ ಮಾದರಿಯನ್ನು ಗಮನಿಸಬಹುದು. ನಿರ್ಣಾಯಕ ಭಾಗವೆಂದರೆ ಅಂತಹ ಕರೆಗಳನ್ನು ಸ್ವೀಕರಿಸುವಾಗ, ಜನರು ಆಗಾಗ್ಗೆ ಕರೆ ಮಾಡುವವರನ್ನು ನಂಬುತ್ತಾರೆ, ಅವರು ಕರೆಯನ್ನು ನಿಜವಾದ ಸೇವಾ ಪೂರೈಕೆದಾರರಿಂದ ಬಂದಿದೆ ಎಂದು ಭಾವಿಸಿ ಮೋಸದ ಜಾಲಕ್ಕೆ ಸಿಲುಕುತ್ತಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ವಿವರಿಸಿದರು. 

ಅಂತೆಯೇ ಒಂದು ಪ್ರಕರಣದಲ್ಲಿ 24 ಲಕ್ಷ ರೂಪಾಯಿ ಹೂಡಿಕೆ ಮಾಡಿದ ವ್ಯಕ್ತಿಯು ರಾಷ್ಟ್ರೀಯ ಸೈಬರ್‌ಕ್ರೈಮ್ ಸಹಾಯವಾಣಿ ಸಂಖ್ಯೆಯಾದ 1930 ಅನ್ನು ತಕ್ಷಣವೇ ಡಯಲ್ ಮಾಡಿದರೆ 7 ಲಕ್ಷ ರೂಪಾಯಿಗಳನ್ನು ಮರಳಿ ಪಡೆದಿದ್ದಾರೆ. ಮಾತ್ರವಲ್ಲದೇ ಇದು ಪೊಲೀಸರು ಮೊತ್ತವನ್ನು ಫ್ರೀಜ್ ಮಾಡಲು ಕಾರಣವಾಗುತ್ತದೆ ಎಂದು ಅಧಿಕಾರಿ ಒತ್ತಿ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT