ಜಾತ್ರೆಯಲ್ಲಿ ಎಲ್ಲರ ಗಮನ ಸೆಳೆದ ದುಬಾರಿ ಹೋರಿ 
ರಾಜ್ಯ

ಸಿದ್ದೇಶ್ವರ ಜಾನುವಾರು ಜಾತ್ರೆಯ ಮುಖ್ಯ ಆಕರ್ಷಣೆ: ಇದು ಖಿಲಾರಿ ಹೋರಿ... ಬೆಲೆ ಬಲು ದುಬಾರಿ...!

ತನ್ನ ಗಟ್ಟಿಮುಟ್ಟಾದ ಹೋರಿ ಪಕ್ಕದಲ್ಲಿ ನಿಂತ ಮಾಲೀಕ ವಿದ್ಯಾನಂದ ಅವಟಿ, ದೈತ್ಯ ಗಾತ್ರದ ಪ್ರಾಣಿಯನ್ನು ಹೊಂದಿದ್ದ ಅವರು ಜಾನುವಾರು ಜಾತ್ರೆಯ ಹೀರೋ, ಅವರ ಫೆರಾರಿ...ಅಲ್ಲಲ್ಲ, ಖಿಲಾರಿ ತಳಿ ಹೋರಿ ಜಾತ್ರೆಯ ಮುಖ್ಯ ಆಕರ್ಷಣೆ. ಯಾಕೆ ಅಂತೀರಾ?

ವಿಜಯಪುರ: ತನ್ನ ಗಟ್ಟಿಮುಟ್ಟಾದ ಹೋರಿ ಪಕ್ಕದಲ್ಲಿ ನಿಂತ ಮಾಲೀಕ ವಿದ್ಯಾನಂದ ಅವಟಿ, ದೈತ್ಯ ಗಾತ್ರದ ಪ್ರಾಣಿಯನ್ನು ಹೊಂದಿದ್ದ ಅವರು ಜಾನುವಾರು ಜಾತ್ರೆಯ ಹೀರೋ, ಅವರ ಫೆರಾರಿ...ಅಲ್ಲಲ್ಲ, ಖಿಲಾರಿ ತಳಿ ಹೋರಿ ಜಾತ್ರೆಯ ಮುಖ್ಯ ಆಕರ್ಷಣೆ. ಯಾಕೆ ಅಂತೀರಾ?

ಈ ಖಿಲಾರಿ ಹೋರಿಯ ಎತ್ತರ 6.5 ಅಡಿ ಎತ್ತರ ಮತ್ತು  ಉದ್ದ10 ಅಡಿ, ಇದರ ಬೆಲೆ  ಫೆರಾರಿ ಕಾರಿಗೆ ಕಮ್ಮಿಯಿಲ್ಲ.. ಬರೋಬ್ಬರಿ 50 ಲಕ್ಷ ರೂಪಾಯಿ. 

ಖಿಲಾರಿ ತಳಿಯ ಹೋರಿಯನ್ನು ಆವತಿಯವರು ಉತ್ತರ ಕರ್ನಾಟಕ ಭಾಗದ ಪ್ರಸಿದ್ಧ ದೇವಸ್ಥಾನದ ಉತ್ಸವವಾದ ಸಿದ್ದೇಶ್ವರ ಜಾತ್ರೆಯ ನಿಮಿತ್ತ ಇಲ್ಲಿ ನಡೆಯುತ್ತಿರುವ ಜಾನುವಾರು ಜಾತ್ರೆಯಲ್ಲಿ ಸೂಕ್ತ ಖರೀದಿದಾರರನ್ನು ಹುಡುಕಲು ಉಮರಾಣಿ ಗ್ರಾಮದಿಂದ ತಂದಿದ್ದಾರೆ. 

ನಿಮ್ಮ ಪ್ರಾಣಿಗೆ ಇಷ್ಟೊಂದು ದುಬಾರಿ ಬೆಲೆಯನ್ನು ಏಕೆ ಹೇಳುತ್ತಿದ್ದೀರಿ ಎಂದು ಕೇಳಿದಾಗ, ಅವತಿ ಅವರು ತಮ್ಮ ಹೋರಿಯನ್ನು ಚೆನ್ನಾಗಿ ಕಾಳಜಿ ವಹಿಸಿ ಮತ್ತು ದುಬಾರಿ ಆಹಾರ ಪದಾರ್ಥಗಳನ್ನು ಕೊಟ್ಟು ಸಾಕಿ ಸಲಹಿದ್ದೇನೆ ಎನ್ನುತ್ತಾರೆ. ಗಟ್ಟಿಮುಟ್ಟಾದ ದನಗಳ ಸಂತಾನೋತ್ಪತ್ತಿಗಾಗಿ ವೀರ್ಯವನ್ನು ಹೊರತೆಗೆಯಲು ಇಂತಹ ಎತ್ತುಗಳನ್ನು ಬಳಸಲಾಗುತ್ತದೆ. ಇಂತಹ ಎತ್ತುಗಳು ತುಂಬಾ ದುಬಾರಿಯಾಗಲು ಇದೇ ಕಾರಣ. ವೀರ್ಯವನ್ನು ಮಾರಾಟ ಮಾಡುವ ಮೂಲಕ ಅಥವಾ ಗರ್ಭಧಾರಣೆಯ ಮೂಲಕ ರೈತರು ಹೆಚ್ಚಿನ ಲಾಭವನ್ನು ಗಳಿಸಬಹುದು ಎಂದು ಅವರು ಹೇಳಿದರು.

ಆವತಿಯಂತೆ ಅಕ್ಕಪಕ್ಕದ ಜಿಲ್ಲೆಗಳ ಹಲವು ರೈತರು ಜಾತ್ರೆಯಲ್ಲಿ ಅಚ್ಚರಿ ಮೂಡಿಸುವ ಎತ್ತುಗಳನ್ನು ತಂದಿದ್ದಾರೆ. ಹೋರಿ ಸಾಕಾಣಿಕೆಯಲ್ಲಿ ಒಲವು ಹೊಂದಿರುವ ರೈತರು ವಿವಿಧೆಡೆಯಿಂದ ಪ್ರಾಣಿಗಳನ್ನು ಖರೀದಿಸಲು ಆಗಮಿಸಿದ್ದಾರೆ. ಈ ವರ್ಷ ಜಾನುವಾರುಗಳ ಮಾಲೀಕರು ವಿವಿಧೆಡೆಯಿಂದ 10 ಸಾವಿರಕ್ಕೂ ಹೆಚ್ಚು ಜಾನುವಾರುಗಳನ್ನು ಜಾತ್ರೆಗೆ ಕರೆತಂದಿದ್ದಾರೆ ಎನ್ನುತ್ತಾರೆ ಸಂಘಟಕರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಾಲ್ ಬಾಗ್ ಗೆ ರೂ.10 ಕೋಟಿ: ಸುರಂಗ ರಸ್ತೆ ಯೋಜನೆಯಿಂದ 'ಸಸ್ಯೋದ್ಯಾನ'ದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ- ಡಿಕೆ ಶಿವಕುಮಾರ್

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಒಂದಾದ ಜಾರಕಿಹೊಳಿ ಬ್ರದರ್ಸ್‌ಗೆ ಜಾಕ್‌ಪಾಟ್; ರಮೇಶ್ ಕತ್ತಿ ಬಣಕ್ಕೆ ಶಾಕ್!

Shocking: ಹೆಣ್ಣಿನ ಶವ ಎಳೆದೊಯ್ದು ಶವಾಗಾರದಲ್ಲೇ ಅತ್ಯಾಚಾರ, 25ರ ಯುವಕನಿಂದ ಪೈಶಾಚಿಕ ಕೃತ್ಯ, CCTV Video

Belagavi: ಲವರ್ ಜೊತೆ ಮಗಳು ಪರಾರಿ; ಇಡೀ ಊರಿಗೆ 'ತಿಥಿ' ಊಟ ಹಾಕಿಸಿದ ತಂದೆ!

ದ್ವಿಶತಕ ಮಿಸ್: ಗಿಲ್ ತಪ್ಪಿನಿಂದ ರನ್ ಔಟ್ ಆಗಿ ತಲೆ ಚಚ್ಚಿಕೊಂಡ ಜೈಸ್ವಾಲ್; ಮೈದಾನ ತೊರೆಯುವಂತೆ ಅಂಪೈರ್ ತಾಕೀತು; Video!

SCROLL FOR NEXT