ಪ್ರದರ್ಶನಕ್ಕಿಡಲಾಗಿರುವ ಅಂಚೆಚೀಟಿಗಳು 
ರಾಜ್ಯ

ಬೆಂಗಳೂರು: ಅಂಚೆ ಕಚೇರಿಯಲ್ಲಿ ರಾಮಾಯಣದ ಅಪರೂಪದ ಅಂಚೆಚೀಟಿಗಳ ಪ್ರದರ್ಶನ

ಅಯೋಧ್ಯೆಯ ರಾಮಮಂದಿರದ ಶಂಕುಸ್ಥಾಪನೆಗೆ ಪೂರ್ವಭಾವಿಯಾಗಿ ಕರ್ನಾಟಕ ಅಂಚೆ ವೃತ್ತವು ಬೆಂಗಳೂರಿನ ಮ್ಯೂಸಿಯಂ ರಸ್ತೆಯಲ್ಲಿರುವ ಅಂಚೆ ಕಚೇರಿಯ ಪಕ್ಕದಲ್ಲಿರುವ ಸಂದೇಶ್ ಮ್ಯೂಸಿಯಂ ಆಫ್ ಕಮ್ಯುನಿಕೇಷನ್‌ನಲ್ಲಿ ‘ರಾಮಾಯಣ-ದಿ ಎಸೆನ್ಸ್ ಆಫ್ ಲೈಫ್’ ಪ್ರದರ್ಶನವನ್ನು ಏರ್ಪಡಿಸಿದೆ.

ಬೆಂಗಳೂರು: ಅಯೋಧ್ಯೆಯ ರಾಮಮಂದಿರದ ಶಂಕುಸ್ಥಾಪನೆಗೆ ಪೂರ್ವಭಾವಿಯಾಗಿ ಕರ್ನಾಟಕ ಅಂಚೆ ವೃತ್ತವು ಬೆಂಗಳೂರಿನ ಮ್ಯೂಸಿಯಂ ರಸ್ತೆಯಲ್ಲಿರುವ ಅಂಚೆ ಕಚೇರಿಯ ಪಕ್ಕದಲ್ಲಿರುವ ಸಂದೇಶ್ ಮ್ಯೂಸಿಯಂ ಆಫ್ ಕಮ್ಯುನಿಕೇಷನ್‌ನಲ್ಲಿ ‘ರಾಮಾಯಣ-ದಿ ಎಸೆನ್ಸ್ ಆಫ್ ಲೈಫ್’ ಪ್ರದರ್ಶನವನ್ನು ಏರ್ಪಡಿಸಿದೆ. ಇದು ಹೆಸರಾಂತ ಅಂಚೆಚೀಟಿ ಸಂಗ್ರಹಕಾರ ಮತ್ತು ಲೇಖಕಿ ಎನ್ ಶ್ರೀದೇವಿಯವರ ದಶಕಗಳ ಹಿಂದಿನ ಅಪರೂಪದ ಅಂಚೆ ಲಕೋಟೆಗಳು ಮತ್ತು ಅಂಚೆಚೀಟಿಗಳ ಸಂಗ್ರಹವನ್ನು ಪ್ರದರ್ಶಿಸುತ್ತದೆ.

66 ವರ್ಷದ ಬೆಂಗಳೂರು ಮೂಲದ ಶ್ರೀದೇವಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪ್ರತಿನಿಧಿಗಳ ಜೊತೆ ಮಾತನಾಡುತ್ತಾ, ಇಲ್ಲಿ ಪ್ರದರ್ಶಿಸಲಾದ ನನ್ನ ಸಂಗ್ರಹಣೆಯಲ್ಲಿ ಭಾರತ, ಥೈಲ್ಯಾಂಡ್, ಕಾಂಬೋಡಿಯಾ ಮತ್ತು ಇಂಡೋನೇಷ್ಯಾ, ಇತರ ಆಗ್ನೇಯ ಏಷ್ಯಾದ ರಾಷ್ಟ್ರಗಳು ಹೊರಡಿಸಿದ ರಾಮಾಯಣಕ್ಕೆ ಸಂಬಂಧಿಸಿದ ಅಂಶಗಳ ಮೇಲೆ ಅಂಚೆಚೀಟಿಗಳನ್ನು ಬಿಡುಗಡೆ ಮಾಡಲಾಗಿದೆ.

ತಮ್ಮ ಅಂಚೆಚೀಟಿ ಸಂಗ್ರಹದೊಂದಿಗೆ ಎನ್ ಶ್ರೀದೇವಿ

ನನ್ನ ಹಳೆಯ ಅಂಚೆಚೀಟಿ 1949 ರ ಹಿಂದಿನದು. ಕುವೆಂಪು ಸೇರಿದಂತೆ ವಿವಿಧ ಲೇಖಕರು ಬರೆದ ರಾಮಾಯಣದ ಹಲವು ಆವೃತ್ತಿಗಳ ಅಂಚೆಚೀಟಿಗಳು ಇಲ್ಲಿವೆ. 'ರಾಮ' ಪದವನ್ನು ಬಳಸಿ ಭಗವಾನ್ ಹನುಮಂತನ ರೇಖಾಚಿತ್ರ, 'ಕಲ್ಯಾಣ' ನಿಯತಕಾಲಿಕದ ಅನೇಕ ಚಿತ್ರಗಳ ಪ್ರದರ್ಶನಗಳು ಮತ್ತು ರಾಮಮಂದಿರದ ಪ್ರಾಣ ಪ್ರತಿಷ್ಠೆಯ ಭವ್ಯವಾದ ಆಮಂತ್ರಣವನ್ನು ಸಹ ಪ್ರದರ್ಶಿಸಲಾಗುತ್ತದೆ.

ಅಂಚೆಚೀಟಿಯನ್ನು ಕರ್ನಾಟಕ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಎಸ್ ರಾಜೇಂದ್ರ ಕುಮಾರ್ ಉದ್ಘಾಟಿಸಿದರು. ವಸ್ತುಸಂಗ್ರಹಾಲಯದ ಪ್ರವೇಶ ದ್ವಾರದ ತೆರೆದ ಜಾಗದಲ್ಲಿ ಇದನ್ನು ಆಯೋಜಿಸಲಾಗುತ್ತಿದ್ದು, ಸಾರ್ವಜನಿಕರು ಯಾವುದೇ ಸಮಯದಲ್ಲಿ ಭೇಟಿ ನೀಡಬಹುದು. ಪ್ರದರ್ಶನವು ಫೆಬ್ರವರಿ 15 ರವರೆಗೆ ಇರುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

Indian Stock Market: ಸತತ ಕುಸಿತ, ಬರೊಬ್ಬರಿ ಶೇ.1ರಷ್ಟು ಕುಸಿದ Sensex, Nifty 50, ರೂಪಾಯಿ ಮೌಲ್ಯ ಇಳಿಕೆ!

SCROLL FOR NEXT