ರಾಜ್ಯ

ಬಿಲ್ಕಿಸ್ ಬಾನೋ ಪ್ರಕರಣ: ಅಪರಾಧಿಗಳನ್ನು ಬಂಧಿಸಿ ಮತ್ತೆ ಜೈಲಿಗೆ ಕಳುಹಿಸಿ, ಮಹಿಳಾ ಕಾರ್ಯಕರ್ತರ ಆಗ್ರಹ

Nagaraja AB

ಬೆಂಗಳೂರು: ಬಿಲ್ಕಿಸ್ ಬಾನೋ ಪ್ರಕರಣದ ಅಪರಾಧಿಗಳನ್ನು ಬಂಧಿಸಿ ಮತ್ತೆ ಜೈಲಿಗೆ ಹಾಕುವಂತೆ ಗುಜರಾತ್ ಸರ್ಕಾರವನ್ನು ಒತ್ತಾಯಿಸಿ ವಿವಿಧ ಸಂಘಟನೆಗಳ ಸದಸ್ಯರು ಗುರುವಾರ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತೆ ಮಧುಭೂಷಣ್, ಸುಪ್ರೀಂಕೋರ್ಟ್ ತೀರ್ಪನ್ನು ಸ್ವಾಗತಿಸಿದರು. ಅತ್ಯಾಚಾರಕ್ಕೊಳಗಾಗಿದ್ದ ಸಂತ್ರಸ್ತೆಗೆ ಗುಜರಾತ್ ಸರ್ಕಾರ ಮಾಡಿದ ಅನ್ಯಾಯಕ್ಕೆ ಸುಪ್ರೀಂಕೋರ್ಟ್ ತೀರ್ಪು ಪರಿಹಾರವಾಗಿದೆ. ಉನ್ನತ ಕೋರ್ಟಿನ ಆದೇಶದ ನಂತರ ಈಗ  11 ಅಪರಾಧಿಗಳ ಪೈಕಿ 8 ಅಪರಾಧಿಗಳು ಕುಟುಂಬಗಳಲ್ಲಿ ಮದುವೆಯಂತಹ ಕಾರಣಗಳನ್ನು ನೀಡುವ ಮೂಲಕ ಬಂಧನ ಅವಧಿ ವಿಸ್ತರಣೆಯನ್ನು ಕೋರಿ ಸುಪ್ರೀಂಕೋರ್ಟ್ ಸಂಪರ್ಕಿಸಿದ್ದಾರೆ ಎಂದು ಅವರು ಹೇಳಿದರು.

ಅಪರಾಧಿಗಳು ಮನುಷ್ಯರಾಗಿ ತಮ್ಮ ಹಕ್ಕನ್ನು ಕಳೆದುಕೊಂಡಿದ್ದಾರೆ. ಕ್ಷಮಾಪಣೆಯಿಂದ ಜೈಲಿನಿಂದ ಹೊರಬರುತ್ತಿರುವಾಗ ಅವರನ್ನು ಸ್ವಾಗತಿಸಲಾಯಿತು. ಅವರಲ್ಲಿ ಸ್ವಲ್ಪ ಮಾನವೀಯತೆ ಉಳಿದಿದ್ದರೆ ಮತ್ತೆ ಜೈಲಿಗೆ ಹೋಗಬೇಕು'' ಎಂದು ಹೇಳಿದರು.

ಇಂತಹ ಅಪರಾಧಿಗಳನ್ನು ಬೆಂಬಲಿಸುತ್ತಿದ್ದಾರೆ ಎಂದು ಆರೋಪಿಸಿ ಗುಜರಾತ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಗೃಹ ಕಾರ್ಮಿಕರ ಹಕ್ಕುಗಳ ಮಹಿಳಾ ಸಂಘಟನೆಯ ಗೀತಾ ಮೆನನ್, ಅನೇಕ ಅಪರಾಧಿಗಳು ತಲೆಮರೆಸಿಕೊಂಡಿದ್ದಾರೆ. ಅವರನ್ನು ಮತ್ತೆ ಜೈಲಿಗೆ ಕಳುಹಿಸಲು ಸರ್ಕಾರಕ್ಕೆ ಸುಪ್ರೀಂಕೋರ್ಟ್ ಎರಡು ವಾರಗಳ ಕಾಲಾವಕಾಶ ನೀಡಿದೆ. “15 ದಿನಗಳಲ್ಲಿ ಏನು ಬೇಕಾದರೂ ಆಗಬಹುದು. ನಾವು ಇನ್ನೂ ನ್ಯಾಯ ಪಡೆಯುವ ಭರವಸೆಯಲ್ಲಿದ್ದೇವೆ ಮತ್ತು ನಾವು ಬಿಲ್ಕಿಸ್ ಬಾನೋ ಜೊತೆಗೆ  ಇದ್ದೇವೆ ಎಂದು ತಿಳಿಸಿದರು. 

SCROLL FOR NEXT