ಬಸವಣ್ಣ 
ರಾಜ್ಯ

ಬಸವಣ್ಣ ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ: ಮೊದಲು ಸಲಹೆ ಮಾಡಿದ್ದು ಹಿಂದುಳಿದ ನಾಯಕ!

ಕಾಯಕ ಯೋಗಿ ಬಸವಣ್ಣ ಅವರನ್ನು ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ ಎಂದು ಗುರುವಾರ ರಾಜ್ಯ ಸರ್ಕಾರ ಘೋಷಿಸಿದ್ದರಿಂದ ಲಿಂಗಾಯಿತರು ಸಂಭ್ರಮಿಸುತ್ತಿದ್ದಾರೆ. ಆದರೆ, ಅದನ್ನು ಮೊದಲಿಗೆ ಪ್ರಸ್ತಾಪಿಸಿದ್ದು ಹಿಂದುಳಿದ ನಾಯಕ ಎಂದರೆ ನಂಬಲೇಬೇಕು.

ಬೆಂಗಳೂರು: ಕಾಯಕ ಯೋಗಿ ಬಸವಣ್ಣ ಅವರನ್ನು ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ ಎಂದು ಗುರುವಾರ ರಾಜ್ಯ ಸರ್ಕಾರ ಘೋಷಿಸಿದ್ದರಿಂದ ಲಿಂಗಾಯಿತರು ಸಂಭ್ರಮಿಸುತ್ತಿದ್ದಾರೆ. ಆದರೆ, ಅದನ್ನು ಮೊದಲಿಗೆ ಪ್ರಸ್ತಾಪಿಸಿದ್ದು ಹಿಂದುಳಿದ ನಾಯಕ ಎಂದರೆ ನಂಬಲೇಬೇಕು.

ಹೌದು. ಎಂಟು ವರ್ಷಗಳ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಬಸವಣ್ಣ ಅವರನ್ನು ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ ಎಂದು ಘೋಷಿಸಬೇಕು ಎಂದು ಹಿಂದುಳಿದ ವರ್ಗಗಳ ಮುಖಂಡ ಮತ್ತು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕನಾಥ್ ಅವರು ಸಲಹೆ ನೀಡಿದ್ದರು. 

2019 ರಲ್ಲಿ ನಿಧನರಾದ ಲಿಂಗಾಯತ ಸಮುದಾಯದ ದಿವಂಗತ ಮಾತೆ ಮಹಾದೇವಿ ಅವರು ಬಸವಣ್ಣ ಅವರನ್ನು ಸಾಂಸ್ಕೃತಿಕ ರಾಯಭಾರಿ ಎಂದು ಘೋಷಿಸಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದ್ದರು. ಕಳೆದ ತಿಂಗಳು ಲಿಂಗಾಯತ ಧಾರ್ಮಿಕ ಮುಖಂಡರ ನಿಯೋಗವೂ ಸಿದ್ದರಾಮಯ್ಯ ಅವರಿಗೆ ಇದೇ ಮನವಿ ಮಾಡಿತ್ತು. ಹಿಂದುಳಿದ ವರ್ಗಗಳಿಗೆ ಅನುಕೂಲ ಮಾಡಿಕೊಡುವ ಜಾತಿ ಗಣತಿ ವರದಿಯನ್ನು ಲಿಂಗಾಯತರು ವಿರೋಧಿಸಿದ್ದರಿಂದ ಸರ್ಕಾರದ ಈ ಘೋಷಣೆ ಮಹತ್ವ ಪಡೆದುಕೊಂಡಿದೆ.

2015ರಲ್ಲಿ ದ್ವಾರಕನಾಥ್ ಸಿದ್ದರಾಮಯ್ಯ ಅವರಿಗೆ ಬರೆದ ಪತ್ರದಲ್ಲಿ ಮಹಾರಾಷ್ಟ್ರದಲ್ಲಿ ಛತ್ರಪತಿ ಶಿವಾಜಿ, ತಮಿಳುನಾಡಿನ ತಿರುವಳ್ಳುವರ್, ಕೇರಳದ ನಾರಾಯಣ ಗುರು ಮತ್ತು ಪಶ್ಚಿಮ ಬಂಗಾಳದ ರವೀಂದ್ರನಾಥ ಟ್ಯಾಗೋರ್ ಅವರಂತೆ ದೇಶದಲ್ಲಿ ಸಾಂಸ್ಕೃತಿಕ ಅಸ್ಮಿತೆಯ ಪ್ರಜ್ಞೆ ಮಹತ್ವ ಕುರಿತು  ಹೇಳಿದ್ದರು. ಅಲ್ಲದೇ ರಾಜ್ಯದಲ್ಲಿಯೂ ಸಾಂಸ್ಕೃತಿಕ ರಾಯಭಾರಿ ಆಗಬೇಕು ಎಂದು ಹೇಳಿ ಜಗದ್ಗುರು ಬಸವಣ್ಣನವರ ಹೆಸರನ್ನು ಸೂಚಿಸಿದ್ದರು.

ಈ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ದ್ವಾರಕನಾಥ್, ಬಸವಣ್ಣ ಅವರು ಸ್ಫೂರ್ತಿ ಮತ್ತು ಅವರ ಆದರ್ಶಗಳು ಮತ್ತು ಸಂದೇಶಗಳು ಇಂದಿಗೂ ಮುಖ್ಯವಾಗಿದೆ. ಅವರ ವಚನಗಳು ಅಥವಾ ಬೋಧನೆಗಳು ಎಲ್ಲಾ ದೀನದಲಿತ ಮತ್ತು ತುಳಿತಕ್ಕೆ ಒಳಗಾದ ವರ್ಗಗಳಿಗೆ ಮುಖ್ಯವಾಗಿದೆ ಮತ್ತು ಒಂದು ಜಾತಿ ಅಥವಾ ಸಮುದಾಯವು ಈ ಮಹಾನ್ ಸುಧಾರಕನನ್ನು ತಮ್ಮವರೆಂದು ಹೇಳಿಕೊಳ್ಳುವುದು ಸೂಕ್ತವಲ್ಲ. ಸಮಾನತೆಯ ಬಗ್ಗೆ ಅವರ ಬೋಧನೆಗಳು ಪ್ರತಿಯೊಬ್ಬ ಕನ್ನಡಿಗನ ಮೂಲತತ್ವವಾಗಿದೆ ಮತ್ತು ಅವರು ನಿಜವಾಗಿಯೂ ಕನ್ನಡಿಗರಾದ ನಮ್ಮೆಲ್ಲರಿಗೂ ಸೇರಿದವರು. ಮೊದಲ ಸಂಸತ್ತಿನ ಅನುಭವ ಮಂಟಪವು ಈ ಮಹಾನ್ ಸುಧಾರಕರಿಂದ ಪ್ರಾರಂಭವಾಯಿತು ಎಂದರು. 

ಕೋಲಾರದ ಹಿಂದುಳಿದ ಬಲಿಜ ಸಮುದಾಯದಿಂದ ಬಂದಿರುವ ದ್ವಾರಕನಾಥ್, ಬಸವಣ್ಣ ಅವರಿಂದ ಕಲಿಯುವುದು ಇನ್ನೂ ಬಹಳಷ್ಟಿದೆ. ಅತ್ಯಂತ ಹಿಂದುಳಿದ ಜಾತಿ ಸಮುದಾಯದ ಮುಖಂಡರು, ಬುಡಕಟ್ಟು ಜನಾಂಗದವರು ಮತ್ತು ಅಲೆಮಾರಿಗಳೊಂದಿಗಿನ ನನ್ನ ಸಾರ್ವಜನಿಕ ಸಭೆಗಳು ಮತ್ತು ಭಾಷಣಗಳಲ್ಲಿ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ ಆಗಿ ಘೋಷಿಸುವ ಅಗತ್ಯದ ಬಗ್ಗೆ ಪ್ರಸ್ತಾಪಿಸಿದ್ದೇನೆ ಮತ್ತು ಅವರೆಲ್ಲರೂ ಇದನ್ನು ಬೆಂಬಲಿಸಿದ್ದಾರೆ ಎಂದು ತಿಳಿಸಿದರು.

ರಾಜ್ಯದಲ್ಲಿ ಅತ್ಯಂತ ಹಿಂದುಳಿದ ಜಾತಿಗಳು ರಾಜ್ಯದ ಜನಸಂಖ್ಯೆಯ  ಶೇ. 56 ರಷ್ಟು,  ಬುಡಕಟ್ಟು ಜನಾಂಗದವರು ಶೇ. 3 ರಷ್ಟು ಮತ್ತು ಅಲೆಮಾರಿಗಳು ಶೇಕಡಾ 6-8 ರಷ್ಟಿದ್ದಾರೆ. ಅವರೆಲ್ಲರಿಗೂ ಬಸವಣ್ಣ ಮತ್ತು ಅವರ ಬೋಧನೆಗಳ ಬಗ್ಗೆ ಅಪಾರ ಪ್ರೀತಿ ಮತ್ತು ಗೌರವವಿದೆ. ಅಂಚಿನಲ್ಲಿರುವ ಗುಂಪುಗಳು ಮತ್ತು ಸಮುದಾಯಗಳ ವಿರುದ್ಧದ ದಾಳಿಯ ಹಿನ್ನೆಲೆಯಲ್ಲಿ, ಬಸವಣ್ಣನ ಬೋಧನೆಗಳು ಭಯಾನಕ ಕತ್ತಲೆಯಾದ ಚಂದ್ರನಿಲ್ಲದ ರಾತ್ರಿಯಲ್ಲಿ ದೀಪಸ್ತಂಭದಂತೆ ಎದ್ದು ಕಾಣುತ್ತವೆ,'' ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

Video: 80 ಸಾವಿರ ಹಣವಿದ್ದ ಬ್ಯಾಗ್ ನಾಪತ್ತೆ, ಮೇಲಿಂದ ಕೋತಿಯಿಂದ ಹಣದ ಸುರಿಮಳೆ! ಸಿಕ್ಕಿದೆಷ್ಟು ಗೊತ್ತಾ?

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

SCROLL FOR NEXT