ಲಕ್ಕುಂಡಿಯ ಕಾಶಿ ವಿಶ್ವೇಶ್ವರ ದೇವಾಲಯದ ಶಿಲ್ಪ 
ರಾಜ್ಯ

ಗದಗ: ರಾಮಾಯಣದೊಂದಿಗೆ ಲಕ್ಕುಂಡಿಯ ನಂಟು!

ರಾಮಾಯಣ ಮಹಾಕಾವ್ಯದ ಅಪರೂಪದ ಘಟನೆಗಳನ್ನು ಬಿಂಬಿಸುವ ಶಿಲ್ಪಗಳನ್ನು ನೋಡುತ್ತಾ ಹೋದರೆ ಲಕ್ಕುಂಡಿ ಗ್ರಾಮವು ಶ್ರೀರಾಮನ ಜೊತೆಗೆ ಅವಿನಾಭಾವ ಸಂಬಂಧವನ್ನು ಹೊಂದಿರುವಂತಿದೆ. ಈ ಗ್ರಾಮವು ಹನುಮಂತನು ಮೂರು ಬೆಟ್ಟಗಳನ್ನು ಹೊತ್ತಿರುವ ಮತ್ತು ರಾವಣನು ಆನೆಯೊಂದಿಗೆ ಹೋರಾಡುವಂತಹ ರಾಮಾಯಣದ ಕೆಲವು ಶಿಲ್ಪಗಳಿಗೆ ನೆಲೆಯಾಗಿದೆ.

ಗದಗ: ರಾಮಾಯಣ ಮಹಾಕಾವ್ಯದ ಅಪರೂಪದ ಘಟನೆಗಳನ್ನು ಬಿಂಬಿಸುವ ಶಿಲ್ಪಗಳನ್ನು ನೋಡುತ್ತಾ ಹೋದರೆ ಲಕ್ಕುಂಡಿ ಗ್ರಾಮವು ಶ್ರೀರಾಮನ ಜೊತೆಗೆ ಅವಿನಾಭಾವ ಸಂಬಂಧವನ್ನು ಹೊಂದಿರುವಂತಿದೆ. ಈ ಗ್ರಾಮವು ಹನುಮಂತನು ಮೂರು ಬೆಟ್ಟಗಳನ್ನು ಹೊತ್ತಿರುವ ಮತ್ತು ರಾವಣನು ಆನೆಯೊಂದಿಗೆ ಹೋರಾಡುವಂತಹ ರಾಮಾಯಣದ ಕೆಲವು ಶಿಲ್ಪಗಳಿಗೆ ನೆಲೆಯಾಗಿದೆ.

ಈ ಶಿಲ್ಪಗಳ ಮೂಲ ಪತ್ತೆಹಚ್ಚಲು ವಿವರವಾದ ಸಂಶೋಧನೆಗೆ ಇತಿಹಾಸ ತಜ್ಞರು ಒತ್ತಾಯಿಸುತ್ತಿದ್ದಾರೆ. ಲಕ್ಕುಂಡಿ ಐತಿಹಾಸಿಕ ದೇವಾಲಯಗಳ ಕೇಂದ್ರವಾಗಿದ್ದು, ಗದಗ ಪಟ್ಟಣದಿಂದ 12 ಕಿ.ಮೀ ದೂರದಲ್ಲಿದೆ. ಗ್ರಾಮದಲ್ಲಿ ಒಂದು ಕಾಲದಲ್ಲಿ 101 ದೇವಾಲಯಗಳು ಮತ್ತು 101 ಕೆರೆಗಳು ಇದ್ದವು ಎಂದು ನಂಬಲಾಗಿದೆ, ಆದರೆ ಈಗ ಕೆಲವು ಮಾತ್ರ ಉಳಿದಿವೆ.

ಶ್ರೀರಾಮನು ತನ್ನ ವನವಾಸದ ಸಮಯದಲ್ಲಿ ಲಕ್ಕುಂಡಿ ಗ್ರಾಮವನ್ನು ಪಂಡಿತರು ಮತ್ತು ವಿದ್ವಾಂಸರಿಗೆ ನೀಡಿದನೆಂದು ಕೆಲವು ಇತಿಹಾಸಕಾರರು ಹೇಳುತ್ತಾರೆ ಮತ್ತು ಇದನ್ನು ಶ್ರೀಮದ್ ಲೊಕ್ಕಿಗುಂಡಿ ಶಾಸನದಲ್ಲಿ ಉಲ್ಲೇಖಿಸಲಾಗಿದೆ.

ಇತರ ಹಲವು ಸ್ಥಳಗಳಲ್ಲಿ ಹನುಮಂತನು ಒಂದೇ ಬೆಟ್ಟವನ್ನು ಹೊತ್ತಿರುವಂತೆ ಚಿತ್ರಿಸಲಾಗಿದೆ. ಆದರೆ, ಇಲ್ಲಿ ಹನುಮಂತನು ಮೂರು ಬೆಟ್ಟಗಳನ್ನು ಹೊತ್ತಿರುವ ಶಿಲ್ಪವು ಅಪರೂಪವಾಗಿದ್ದು,  ಹೆಚ್ಚಿನ ಸಂಶೋಧನೆಯಾಗಬೇಕೆಂಬ ಒತ್ತಾಯ ಕೇಳಿಬರುತ್ತಿದೆ.

ನಿವೃತ್ತ ಎಎಸ್ಐ ಅಧಿಕಾರಿ ವಿ ಎಸ್ ಹೊಸಮನಿ ಹೇಳುವಂತೆ, ಶ್ರೀರಾಮ ದತ್ತಿ ಮಹಾ ಅಗ್ರಹಾರ ಮತ್ತು ಶ್ರೀಮದ್ ಲೊಕ್ಕಿಗುಂಡಿ ಶಾಸನದ ಪ್ರಕಾರ, ದಶರಥನ ಮಗ ರಾಮನು ಈ ಗ್ರಾಮವನ್ನು ಪಂಡಿತರು ಮತ್ತು ವಿದ್ವಾಂಸರಿಗೆ ನೀಡಿದ್ದನು. ಇದು ಒಂದು ಕಾಲದಲ್ಲಿ ಬ್ರಾಹ್ಮಣರು ಹೆಚ್ಚು ಸಂಖ್ಯೆಯಲ್ಲಿ ವಾಸಿಸುತ್ತಿದ್ದ ದೊಡ್ಡ ಅಗ್ರಹಾರವಾಗಿತ್ತು ಮತ್ತು ಅನೇಕ ಪಂಡಿತರು ಗ್ರಾಮದಲ್ಲಿ ಜಪ ಮತ್ತು ತಪ್ಪಸ್ಸು ಮಾಡುತ್ತಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT