ರಾಜ್ಯ

ಕನ್ನಡ- ಸಂಸ್ಕೃತಿ ಇಲಾಖೆಯಿಂದ ವಿವಿಧ ರಾಷ್ಟ್ರೀಯ, ರಾಜ್ಯ ಪ್ರಶಸ್ತಿ ಪ್ರಕಟ!

Nagaraja AB

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗುರುವಾರ ವಿವಿಧ ರಾಷ್ಟ್ರೀಯ ಮತ್ತು ರಾಜ್ಯ ಪ್ರಶಸ್ತಿ ಪ್ರಕಟಿಸಿದೆ.  ಹಿರಿಯ ಸಾಹಿತಿ, ಶಿವಮೊಗ್ಗದ ನಾ. ಡಿಸೋಜಾ ಅವರಿಗೆ 2023-24ನೇ ಸಾಲಿನ ಪಂಪ ಪ್ರಶಸ್ತಿ ಲಭಿಸಿದೆ.

ಮಹಾರಾಷ್ಟ್ರದ ಆನಂದ್ ತೆಲ್ತುಂಬಡೆ  (2022-23 ) ಮತ್ತು ಧಾರವಾಡದ ಡಾ.ಎನ್. ಜಿ. ಮಹದೇವಪ್ಪ ಬಸವ ರಾಷ್ಟ್ರೀಯ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಧಾರವಾಡದ ಜಿನದತ್ತ ದೇಸಾಯಿ, ಗುಜರಾತಿನ ಗಾಂಧಿ ಸೇವಾಶ್ರಮಕ್ಕೆ ಭಗವಾನ್ ಮಹಾವೀರ ಶಾಂತಿ ಪ್ರಶಸ್ತಿ, ನಿತ್ಯಾನಂದ ಹಳದಿಪುರ ಮತ್ತು ಕೋಲಾರದ ಶ್ರೀರಾಮುಲು ಟಿ. ಚೌಡಯ್ಯ ಪ್ರಶಸ್ತಿ,  ಪಂಡಿತ್ ಸೋಮನಾಥ್ ಮರಡೂರ, ಡಾ. ನಾಗಮಣಿ ಶ್ರೀನಾಥ್ ಗಾನಯೋಗಿ ಪಂಡಿತ್ ಪಂಚಾಕ್ಷರಿ ಗವಾಯಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕೆ. ಮರಳುಸಿದ್ದಪ್ಪ ಹಸನ್ ನಯೀ ಸುರಕೋಡ, ಕೆ ರಾಮಯ್ಯ, ವೀರಸಂಗಯ್ಯ ಬಳ್ಳಾರಿ ಅವರಿಗೆ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ, ಅಕ್ಕಮಹಾದೇವಿ ಆಶ್ರಮ ಟ್ರಸ್ಟ್, ಡಾ. ಆರ್ ಸುನಂದಮ್ಮ, ಮೀನಾಕ್ಷಿ ಭಾಳಿ, ಡಾ. ವಸುಂಧರಾ ಭೂಪತಿ ಅವರಿಗೆ ಅಕ್ಕಮಹಾದೇವಿ ಪ್ರಶಸ್ತಿ ಹಾಗೂ ಡಾ.ಲಿಂಗದಹಳ್ಳಿ ಹಾಲಪ್ಪ,ಡಾ. ಬಿ. ಶಿವರಾಮ ಶೆಟ್ಟಿ ಅವರಿಗೆ ಕನಕಶ್ರೀ ಪ್ರಶಸ್ತಿ ದೊರೆತಿದೆ.

ಈ ಎಲ್ಲಾ ಪ್ರಶಸ್ತಿಗಳು ತಲಾ 5 ಲಕ್ಷ ನಗದು, ಸ್ಮರಣಿಕೆ ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದ್ದು, ಪ್ರಶಸ್ತಿಗೆ ಭಾಜನರಾದವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದಿಸಿದ್ದಾರೆ.
 

SCROLL FOR NEXT