ರಾಜ್ಯ

ನಿತೀಶ್ ಕುಮಾರ್ ಮಹಾಘಟಬಂಧನ್ ತೊರೆಯುವ ಬಗ್ಗೆ ಮುಂಚೆಯೇ ಗೊತ್ತಿತ್ತು: ಖರ್ಗೆ

Nagaraja AB

ಕಲಬುರಗಿ: ನಿತೀಶ್ ಕುಮಾರ್ ಮಹಾಘಟಬಂಧನ್ ತೊರೆಯುವ ಬಗ್ಗೆ ಮುಂಚೆಯೇ ಗೊತ್ತಿತ್ತು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾನುವಾರ ಹೇಳಿದ್ದಾರೆ.

ಬಿಹಾರ ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಖರ್ಗೆ,  ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಹಾಗೂ ಅವರ ಮಗ ತೇಜಸ್ವಿ ಯಾದವ್ ಅವರೊಂದಿಗೆ ಮಾತನಾಡುವಾಗ ನಿತೀಶ್ ಮಹಾಘಟಬಂಧನ್ ತೊರೆಯುವ ಬಗ್ಗೆ ಮಾಹಿತಿ ನೀಡಿದ್ದರು. ಅದು ಇಂದು ನಿಜವಾಗಿದೆ. ಆಯಾರಾಮ್ ಗಯಾರಾಮ್ ಸಂಸ್ಕೃತಿವುಳ್ಳ ಅನೇಕ ರಾಜಕಾರಣಿಗಳು ದೇಶದಲ್ಲಿದ್ದಾರೆ ಎಂದರು. 

ನಿತೀಶ್ ಕುಮಾರ್ ಇಂಡಿಯಾ ಮೈತ್ರಿಕೂಟ ತೊರೆಯುತ್ತಿರುವ ಬಗ್ಗೆ ಮುಂಚೆಯೇ ಗೊತ್ತಿದ್ದರಿಂದ ಅವರೊಂದಿಗೆ ಮಾತುಕತೆಗೆ ಯತ್ನಿಸಿದ್ದೇವು. ಅಂತಿಮವಾಗಿ ಅವರು ಮೈತ್ರಿಕೂಟ ಬಿಡುವುದು ನಿಜವಾಗಿದೆ. ಅವರು ಇರಲು ಬಯಸಿದ್ದರೆ ಇರುತ್ತಿದ್ದರು. ಆದರೆ, ಅವರ ಹೊರ ಹೋಗಲು ಬಯಸಿದ್ದರಿಂದ ಮೈತ್ರಿ ತೊರೆದಿದ್ದಾರೆ. ಆದರೆ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ತಿಳಿಸಿದರು. 

ಮುಂಬರುವ ಲೋಕಸಭಾ ಚುನಾವಣೆ ಸೀಟು ಹಂಚಿಕೆ ಕುರಿತು ಇಂಡಿಯಾ ಮೈತ್ರಿಕೂಟದ ಇತರ ಪಕ್ಷಗಳೊಂದಿಗೆ ಚರ್ಚಿಸಲು ಆರು ಜನರ ಸಮಿತಿ ರಚಿಸಲಾಗಿದೆ. ವಿವಿಧ ಪಕ್ಷಗಳೊಂದಿಗೆ ಸೀಟು ಹಂಚಿಕೆ ಕುರಿತು ಚರ್ಚೆ ನಡೆದಿದೆ. ಕೆಲವು ಕಡೆ ಒಮ್ಮತಕ್ಕೆ ಬರಲಾಗಿದೆ. ಇನ್ನೂ ಕೆಲವೆಡೆ ಬಂದಿಲ್ಲ ಎಂದು ಅವರು ಹೇಳಿದರು.

SCROLL FOR NEXT