ರಾಜ್ಯ

ನರೇಗಾ ಕೂಲಿ ದಿನಗಳನ್ನು 150ಕ್ಕೆ ಹೆಚ್ಚಿಸಿ, ಇಲ್ಲವೇ ಧರಣಿ ಎದುರಿಸಿ: ಕೇಂದ್ರಕ್ಕೆ ಪ್ರಿಯಾಂಕ್ ಖರ್ಗೆ

Manjula VN

ಕಲಬುರಗಿ: ಗ್ರಾಮೀಣ ಮೂಲಸೌಕರ್ಯಗಳನ್ನು ಬಲಪಡಿಸಲು ಮತ್ತು ಸುಧಾರಿಸಲು ಕೇಂದ್ರ ಸರ್ಕಾರವು ಎಂಜಿಎನ್‌ಆರ್‌ಇಜಿ ಅಡಿಯಲ್ಲಿ ಕೂಲಿ ದಿನಗಳನ್ನು 150ಕ್ಕೆ ಹೆಚ್ಚಿಸದಿದ್ದರೆ ದೆಹಲಿಯಲ್ಲಿ ಶಾಸಕರೊಂದಿಗೆ ಧರಣಿ ನಡೆಸುವುದಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯಕ್ಕೆ 13 ಕೋಟಿ ಮಾನವ ದಿನಗಳು ದೊರೆತಿದ್ದವು. ಈಗ 12 ಕೋಟಿ ಮಾನವ ದಿನಗಳನ್ನು ಬಳಸಿದ್ದೇವೆ. ಮಾನವ ದಿನ ಸೃಜಿಸಲು ರಾಜ್ಯ ಸರ್ಕಾರ ಕೇವಲ ಶಿಫಾರಸು ಮಾಡಬಲ್ಲದು. ಅದನ್ನು ಕೇಂದ್ರ ಅನುಮೋದಿಸಬೇಕಾಗುತ್ತದೆ. ಬರಗಾಲ ಬಂದಾಗ, ನರೇಗಾ ಕೂಲಿ ದಿನ ಹೆಚ್ಚಿಸುವಂತೆ ದೆಹಲಿಗೆ ಹೋಗಿ ಅಧಿಕಾರಿಗಳನ್ನು ಭೇಟಿಯಾಗಿ ಐದು ಸಲ ಮನವಿ ಕೊಟ್ಟರೂ ಸ್ಪಂದಿಸಿಲ್ಲ’ ಎಂದು ದೂರಿದರು.

‘ನರೇಗಾ ಕೂಲಿ ಹಣವನ್ನು ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ವಿಳಂಬ ಮಾಡಿದ್ದರಿಂದ ಹಿಂದೆ ರಾಜ್ಯ ಸರ್ಕಾರವೇ ವಿತರಿಸಿದೆ. ಈಗಲೂ ಅಂದಾಜು ರೂ.470 ಕೋಟಿ ಕೇಂದ್ರದಿಂದ ರಾಜ್ಯಕ್ಕೆ ಬರಬೇಕಿದೆ’ ಎಂದು ಹೇಳಿದರು.

SCROLL FOR NEXT