ಬೆಂಗಳೂರು ಪ್ರೆಸ್ ಕ್ಲಬ್ ನ ನೂತನ ತಂಡ 
ರಾಜ್ಯ

ಬೆಂಗಳೂರು ಪ್ರೆಸ್ ಕ್ಲಬ್ ಚುನಾವಣೆ: ಅಧ್ಯಕ್ಷರಾಗಿ ಆರ್. ಶ್ರೀಧರ್, ಪ್ರಧಾನ ಕಾರ್ಯದರ್ಶಿಯಾಗಿ ಬೆಳ್ಳಿತಟ್ಟೆ ಆಯ್ಕೆ

ಪ್ರೆಸ್ ಕ್ಲಬ್ ನ ಅಧ್ಯಕ್ಷ ಸ್ಥಾನಕ್ಕಾಗಿ ಆರ್. ಶ್ರೀಧರ್, ಧ್ಯಾನ್ ಪೂಣಚ್ಚ ಹಾಗೂ ಸುಭಾಷ್ ಹೂಗಾರ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು.ಆದರೆ, ಅಂತಿಮವಾಗಿ ಆರ್. ಶ್ರೀಧರ್ ಹೆಚ್ಚಿನ ಮತ ಗಳಿಸುವುದರೊಂದಿಗೆ ಮತ್ತೆ ಅಧ್ಯಕ್ಷರಾಗಿ ಆಯ್ಕೆಯಾದರು.

ಬೆಂಗಳೂರು: ನಗರದ ಪ್ರತಿಷ್ಠಿತ ' ಪ್ರೆಸ್ ಕ್ಲಬ್ ಆಫ್ ಬೆಂಗಳೂರಿಗೆ' ಭಾನುವಾರ ನಡೆದ ಚುನಾವಣೆಯಲ್ಲಿ ಹಿರಿಯ ಪತ್ರಕರ್ತರಾದ ಆರ್. ಶ್ರೀಧರ್ ಅಧ್ಯಕ್ಷರಾಗಿ ಪುನರ್ ಆಯ್ಕೆಯಾದರು. ಮೋಹನ್ ಕುಮಾರ್ ಉಪಾಧ್ಯಕ್ಷರಾಗಿ ಚುನಾಯಿತರಾದರೆ, ಶಿವಕುಮಾರ್ ಬೆಳ್ಳಿ ತಟ್ಟೆ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು.

ಪ್ರೆಸ್ ಕ್ಲಬ್ ನ ಅಧ್ಯಕ್ಷ ಸ್ಥಾನಕ್ಕಾಗಿ ಆರ್. ಶ್ರೀಧರ್, ಧ್ಯಾನ್ ಪೂಣಚ್ಚ ಹಾಗೂ ಸುಭಾಷ್ ಹೂಗಾರ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು.ಆದರೆ, ಅಂತಿಮವಾಗಿ ಆರ್. ಶ್ರೀಧರ್ ಹೆಚ್ಚಿನ ಮತ ಗಳಿಸುವುದರೊಂದಿಗೆ ಮತ್ತೆ ಅಧ್ಯಕ್ಷರಾಗಿ ಆಯ್ಕೆಯಾದರು.

ಇನ್ನೂ ಉಪಾಧ್ಯಕ್ಷ ಸ್ಥಾನಕ್ಕಾಗಿ ಮಹಾಂತೇಶ್ ಹಿರೇಮಠ್, ಬಿಎನ್. ಮೋಹನ್ ಕುಮಾರ್, ವಿಶ್ವನಾಥ್ ಭಾಗವತ್ ಸ್ಪರ್ಧೆಯಲ್ಲಿದ್ದರು. ಆದರೆ, ಅಂತಿಮವಾಗಿ ಮೋಹನ್ ಕುಮಾರ್ ಉಪಾಧ್ಯಕ್ಷರಾಗಿ ಚುನಾಯಿತರಾದರು. ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸಂಜೆವಾಣಿಯ ದೊಡ್ಡಬೊಮ್ಮಯ್ಯ, ವೈಎಸ್ ಎಲ್ ಸ್ವಾಮಿ, ವಿಶ್ವವಾಣಿಯ ಎಂ.ಡಿ. ಶಿವಕುಮಾರ್ ಬೆಳ್ಳಿ ತಟ್ಟೆ ಹಾಗೂ ಟಿ. ಮಂಜುನಾಥ್ ನಡುವೆ ನಡೆದ ಪೈಪೋಟಿಯಲ್ಲಿ ಅಂತಿಮವಾಗಿ ಶಿವಕುಮಾರ್ ಬೆಳ್ಳಿ ತಟ್ಟೆ ಗೆಲುವು ಸಾಧಿಸಿದರು.

ಬೆಂಗಳೂರು ಪ್ರೆಸ್ ಕ್ಲಬ್ ನ 2024-25ನೇ ಸಾಲಿಗೆ ಚುನಾಯಿತರಾದ ಪಟ್ಟಿ ಈ ರೀತಿ ಇದೆ.

ಆರ್. ಶ್ರೀಧರ್ - ಅಧ್ಯಕ್ಷರು

ಮೋಹನ್ ಕುಮಾರ್- ಉಪಾಧ್ಯಕ್ಷರು

ಶಿವಕುಮಾರ್ ಬೆಳ್ಳಿತಟ್ಟೆ- ಪ್ರಧಾನ ಕಾರ್ಯದರ್ಶಿ

ಜಿ.ವೈ. ಮಂಜುನಾಥ್- ಕಾರ್ಯದರ್ಶಿ

ಬಿ.ಎನ್. ಧರಣೇಶ್- ಜಂಟಿ ಕಾರ್ಯದರ್ಶಿ

ಜಿ. ಗಣೇಶ್- ಖಜಾಂಚಿ

ಕಾರ್ಯಕಾರಿ ಸಮಿತಿ:

* ಶಿವಣ್ಣ

* ಯಾಸಿರ್ ಮುಸ್ತಾಕ್

* ಮಮ್ತಾಜ್ ಆಲಿಮ್

* ಎ.ಎಚ್ ಶರಣಬಸಪ್ಪ

* ರೋಹಿಣಿ ವಿ. ಅಡಿಗ

ಸಿ. ಆರ್. ಮಂಜುನಾಥ್

ಮಹಿಳಾ ಮೀಸಲು ಕ್ಷೇತ್ರ

ಮಿನಿ ತೇಜಸ್ವಿನಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್