ಬೆಂಗಳೂರು: ನಗರದ ಹೊರವಲಯದಲ್ಲಿರುವ ಬೆಂಗಳೂರು-ಕೋಲಾರ ರಾಷ್ಟ್ರೀಯ ಹೆದ್ದಾರಿ-75ರಲ್ಲಿ ಯುವಕನ ಬೆನ್ನಟ್ಟಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆಯೊಂದು ಶುಕ್ರವಾರ ರಾತ್ರಿ ನಡೆದಿದೆ.
ಮೃತ ಯುವಕನನ್ನು 24 ವರ್ಷದ ಭಾರ್ಗವ್ ಎಂದು ಗುರ್ತಿಸಲಾಗದ್ದು, ಈತ ಕೋಲಾರ ಮೂಲದವರು ಎಂದು ಹೇಳಲಾಗುತ್ತಿದೆ. ವಾಹನ ವಶಪಡಿಸಿಕೊಳ್ಳುವ ಸಂಸ್ಥೆಯಲ್ಲಿ ಈತ ಕೆಲಸ ಮಾಡುತ್ತಿದ್ದ.
ಶುಕ್ರವಾರ ರಾತ್ರಿ ಭಾರ್ಗವ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ, ಹಿಂಬಾಲಿಸಿಕೊಂಡು ಬಂದಿರುವ ದುಷ್ಕರ್ಮಿಗಳು ಮಸಂದ್ರ-ಗಂಗಾಪುರ ಗ್ರಾಮದ ನಡುವಿನ ಮೈಲಾಪುರ ಗೇಟ್‌ನಲ್ಲಿ ಕಾರನ್ನು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಹತ್ಯೆ ಮಾಡಿ ಪರಾರಿಯಾಗಿದ್ದಾರೆ.
ಕೋಲಾರದಿಂದ ಕಾರೊಂದು ತಮ್ಮ ವಾಹನವನ್ನು ಹಿಂಬಾಲಿಸುತ್ತಿರುವುದನ್ನು ಭಾರ್ಗವ್ ಗಮನಿಸಿದ್ದಾರೆ. ಅಪಾಯವನ್ನು ಗ್ರಹಿಸಿದ ಅವರು ವೇಗವಾಗಿ ಓಡಲು ಪ್ರಾರಂಭಿಸಿದ್ದಾರೆ. ಆದರೆ, ಮೈಲಾಪುರ ಗೇಟ್ ಬಳಿ ದುಷ್ಕರ್ಮಿಗಳು ಕಾರನ್ನು ಅಡ್ಡಗಟ್ಟಿದ್ದಾರೆ. ಬಳಿಕ ಭಾರ್ಗವ್ ಕಾರಿನಿಂದ ಹೊರಬಂದು ಓಡಲು ಪ್ರಾರಂಭಿಸಿದ್ದು, ಈ ವೇಳೆ ಬೆನ್ನಟ್ಟಿರುವ ಆರೋಪಿಗಳು, ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿದ್ದಾರೆ. ಈ ಸಂಬಂಧ ನಂದಗುಡಿ ಪೋಲಿಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.
ಜೂನ್ 16 ರಂದು ಗಂಗಾಪುರ ಗ್ರಾಮದ 27 ವರ್ಷದ ನವೀನ್ ನಾಯ್ಕ್ ಎಂಬಾತನನ್ನು ಇದೇ ರೀತಿಯಲ್ಲಿ ಹತ್ಯೆ ಮಾಡಲಾಗಿತ್ತು