ರಾಜ್ಯ

ಹೆಚ್ಚುತ್ತಿರುವ ಡೆಂಗ್ಯೂ ಪ್ರಕರಣ: ಹಾಸಿಗೆಗಳನ್ನು ಮೀಸಲಿಡಲು ಸರ್ಕಾರಿ ಆಸ್ಪತ್ರೆಗಳಿಗೆ ಸೂಚನೆ

ಜುಲೈ 17 ರ ಹೊತ್ತಿಗೆ, ರಾಜ್ಯದಲ್ಲಿ 10,973 ಡೆಂಗ್ಯೂ-ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಈ ಪೈಕಿ 4,040 ಬಿಬಿಎಂಪಿ ವ್ಯಾಪ್ತಿಯಲ್ಲಿ, 63 ಬೆಂಗಳೂರು ನಗರ ಮತ್ತು 51 ಬೆಂಗಳೂರು ಗ್ರಾಮಾಂತರದಲ್ಲಿ ವರದಿಯಾಗಿದೆ.

ಬೆಂಗಳೂರು: ರಾಜ್ಯಾದ್ಯಂತ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಂಭವಿಸಲಬಹುದಾದ ಸಾವುನೋವುಗಳನ್ನು ತಡೆಗಟ್ಟಲು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಎಚ್‌ಎಫ್‌ಡಬ್ಲ್ಯು) ತೀವ್ರ ಡೆಂಗ್ಯೂ ಪ್ರಕರಣಗಳ ಪರಿಣಾಮಕಾರಿ ನಿರ್ವಹಣೆಗೆ ಮುಂದಾಗಿದ್ದು, ನಗರದ ಹಲವಾರು ಆಸ್ಪತ್ರೆಗಳಲ್ಲಿ ಹಾಸಿಗೆಗಳನ್ನು ಕಾಯ್ದಿರಿಸಲು ಆದೇಶಿಸಿದೆ.

ಮುಂದಿನ ಸೂಚನೆ ಬರುವವರೆಗೆ ಡೆಂಗ್ಯೂ ರೋಗಿಗಳಿಗೆ ನಿರ್ದಿಷ್ಟ ಸಂಖ್ಯೆಯ ಹಾಸಿಗೆಗಳನ್ನು ಕಾಯ್ದಿರಿಸುವಂತೆ ಸೂಚಿಸಲಾಗಿದೆ. ಬೆಂಗಳೂರಿನ ಕೆಸಿ ಜನರಲ್ ಆಸ್ಪತ್ರೆ (25 ಹಾಸಿಗೆಗಳು), ಸಿವಿ ರಾಮನ್ ಆಸ್ಪತ್ರೆ (25 ಹಾಸಿಗೆಗಳು), ಸರ್ಕಾರಿ ಆಸ್ಪತ್ರೆ ಜಯನಗರ (25 ಹಾಸಿಗೆಗಳು), ಯಲಹಂಕ ತಾಲೂಕು ಆಸ್ಪತ್ರೆ (10 ಹಾಸಿಗೆಗಳು), ಮತ್ತು ಕೆಆರ್ ಪುರಂ ತಾಲೂಕು ಆಸ್ಪತ್ರೆಯಲ್ಲಿ (10 ಹಾಸಿಗೆಗಳು) ಮೀಸಲಿಡುವಂತೆ ತಿಳಿಸಲಾಗಿದೆ. ಜಿಲ್ಲಾ ಕೇಂದ್ರದ ಎಚ್‌ಎಫ್‌ಡಬ್ಲ್ಯೂ ಆಸ್ಪತ್ರೆಗಳು ತಲಾ 10 ಹಾಸಿಗೆಗಳನ್ನು ಮತ್ತು ತಾಲೂಕು ಕೇಂದ್ರ ಕಚೇರಿಯ ಎಚ್‌ಎಫ್‌ಡಬ್ಲ್ಯೂ ಆಸ್ಪತ್ರೆಗಳಲ್ಲಿ ತಲಾ ಐದು ಹಾಸಿಗೆಗಳನ್ನು ಡೆಂಗ್ಯೂ ರೋಗಿಗಳಿಗೆ ಮೀಸಲಿಡಲು ಹೆಚ್ಚುವರಿಯಾಗಿ ನಿರ್ದೇಶನ ನೀಡಲಾಗಿದೆ. ಈ ಸೂಚನೆ ಮುಂದಿನ ಆದೇಶದವರೆಗೆ ಜಾರಿಯಲ್ಲಿರುತ್ತದೆ.

ಏತನ್ಮಧ್ಯೆ, ಜುಲೈ 17 ರ ಹೊತ್ತಿಗೆ, ರಾಜ್ಯದಲ್ಲಿ 10,973 ಡೆಂಗ್ಯೂ-ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಈ ಪೈಕಿ 4,040 ಬಿಬಿಎಂಪಿ ವ್ಯಾಪ್ತಿಯಲ್ಲಿ, 63 ಬೆಂಗಳೂರು ನಗರ ಮತ್ತು 51 ಬೆಂಗಳೂರು ಗ್ರಾಮಾಂತರದಲ್ಲಿ ವರದಿಯಾಗಿದೆ. ಚಿಕ್ಕಮಗಳೂರು ರಾಜ್ಯದಲ್ಲಿ ಎರಡನೇ ಅತಿ ಹೆಚ್ಚು ಪ್ರಕರಣಗಳನ್ನು ದಾಖಲಿಸಿದ್ದು, ಒಟ್ಟು 621 ಪ್ರಕರಣಗಳು ದಾಖಲಾಗಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್