ಶಾಸಕ Pradedp Eshwar ವಿರುದ್ಧ ಸ್ಪೀಕರ್ ಯುಟಿ ಖಾದರ್ ಗರಂ 
ರಾಜ್ಯ

Karnataka Assembly Session: 'ಕೈಗೆ ಕಬ್ಬಿಣ ಕೊಡ್ರಿ.. ತಲೆ ಸರಿ ಇಲ್ವಾ..'; Pradeep Eshwar ವಿರುದ್ಧ ಸ್ಪೀಕರ್ ಯುಟಿ ಖಾದರ್ ಗರಂ

ತಮ್ಮ ಕ್ಷೇತ್ರದ ಸಮಸ್ಯೆ ಬಗ್ಗೆ ಮಾತನಾಡದ ಪ್ರದೀಪ್ ಈಶ್ವರ್, ಬಿಜೆಪಿ ವಿರುದ್ಧ ಆಕ್ರೋಶದ ಮಾತುಗಳನ್ನು ಆಡಿದರು. ಬಿಜೆಪಿ ಅವಧಿಯಲ್ಲಿ ಹಗರಣ ನಡೆದಿದೆ ಅಂತ ಆಕ್ರೋಶ ವ್ಯಕ್ತಪಡಿಸಿ, ಏರು ದನಿಯಲ್ಲಿ ಕಿರುಚಾಡಿದ್ರು.

ಬೆಂಗಳೂರು: ವಿಧಾನಸಭೆ ಅಧಿವೇಶನದಲ್ಲಿ ಮತ್ತೆ ವಾಲ್ಮೀಕಿ ನಿಗಮದ ಹಗರಣದ ವಿಚಾರವಾಗಿ ವಾಗ್ದಾಳಿ ನಡೆದಿದ್ದು, ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ವಿರುದ್ದ ಸ್ಪೀಕರ್ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.

ವಿಧಾನಸಭೆ ಅಧಿವೇಶನದಲ್ಲಿ (Assembly Session) ಚಿಕ್ಕಬಳ್ಳಾಪುರ (Chikkaballapur) ಕಾಂಗ್ರೆಸ್ ಶಾಸಕ (Congress MLA) ಪ್ರದೀಪ್ ಈಶ್ವರ್‌ಗೆ (Pradeep Eshwar) ಸ್ಪೀಕರ್ (Speaker) ಯುಟಿ ಖಾದರ್ (UT Khadar) ಗದರಿದ ಪ್ರಸಂಗ ನಡೆಯಿತು. ಮಾತನಾಡಲು ಅವಕಾಶ ಕೇಳಿದ್ದ ಪ್ರದೀಪ್ ಈಶ್ವರ್‌ಗೆ ಸ್ಪೀಕರ್ ಖಾದರ್ ಅವಕಾಶ ಕೊಟ್ಟಿದ್ದರು.

ಆದರೆ ಈ ವೇಳೆ ಸದನದ ಬಾವಿಗಿಳಿದಿದ್ದ ಪ್ರತಿಪಕ್ಷ ಸದಸ್ಯರು ವಾಲ್ಮೀಕ ಹಗರಣದ ಕುರಿತು ಘೋಷಣೆ ಕೂಗುತ್ತಿದ್ದರು. ಇದರಿಂದ ಕೆರಳಿದ ಶಾಸಕ ಪ್ರದೀಪ್ ಈಶ್ವರ್ ಬಿಜೆಪಿ ಸರ್ಕಾರದ ಹಲವು ಹಗರಣಗಳು ನಡೆದಿದೆ ಎಂದು ಹೇಳಿ ಪಟ್ಟಿಯನ್ನೇ ನೀಡಿದರು. ಆದರೆ ಈ ವೇಳೆ ತಮ್ಮ ಕ್ಷೇತ್ರದ ಸಮಸ್ಯೆ ಬಗ್ಗೆ ಮಾತನಾಡದ ಪ್ರದೀಪ್ ಈಶ್ವರ್, ಬಿಜೆಪಿ ವಿರುದ್ಧ ಆಕ್ರೋಶದ ಮಾತುಗಳನ್ನು ಆಡಿದರು. ಬಿಜೆಪಿ ಅವಧಿಯಲ್ಲಿ ಹಗರಣ ನಡೆದಿದೆ ಅಂತ ಆಕ್ರೋಶ ವ್ಯಕ್ತಪಡಿಸಿ, ಏರು ದನಿಯಲ್ಲಿ ಕಿರುಚಾಡಿದ್ರು.

ಪ್ರದೀಪ್ ಈಶ್ವರ್ ನಿಮ್ಮ ಕೈಗೆ ಕಬ್ಬಿಣ ಕೊಡ್ಬೇಕಾ?

ಇದಕ್ಕೆ ಗರಂ ಆದ ಸ್ಪೀಕರ್ ಖಾದರ್, ಪ್ರದೀಪ್ ಈಶ್ವರ್‌ಗೆ ಗದರಿದ್ರು. ಪ್ರದೀಪ್ ಈಶ್ವರ್ ಕೈಗೆ ಕಬ್ಬಿಣ ಏನಾದ್ರೂ ಕೊಡ್ರಿ ಅಂತ ಖಾದರ್ ಬೈಯ್ದರು. ಕುಳಿತು ಕೊಳ್ಳುವಂತೆ ಸಾವಧಾನದಿಂದಲೇ ಸ್ಪೀಕರ್ ಹೇಳಿದ್ರು. ಆದ್ರೆ ಪ್ರದೀಪ್ ಈಶ್ವರ್ ಕೇಳಲೇ ಇಲ್ಲ. ಆಗ ಖಾದರ್ ಗರಂ ಆದ್ರು. ಪ್ರದೀಪ್ ಈಶ್ವರ್, ಕುಳಿತುಕೊಳ್ರೀ, ನಿಮ್ಮ ಕೈಗೆ ಕಬ್ಬಿಣ ಕೊಡ್ಬೇಕಾ ಅಂತ ಗದರಿಸಿದ್ರು.

ಸ್ಪೀಕರ್ ಹೇಳಿದ್ರೂ ಸುಮ್ಮನಾಗದ ಪ್ರದೀಪ್ ಈಶ್ವರ್

ಇಷ್ಟಾದರೂ ಪ್ರದೀಪ್ ಈಶ್ವರ್ ಕುಳಿತುಕೊಳ್ಳದೇ ಕೂಗಾಟ ಮುಂದುವರೆಸಿದರು. ಸ್ಪೀಕರ್ ಆದೇಶಿಸಿದ್ರೂ ಮಾತು ನಿಲ್ಲಿಸದಿದ್ದರಿಂದ ಕೊನೆಗೆ ಪ್ರದೀಪ್ ಈಶ್ವರ್ ಬಳಿ ಸರ್ಕಾರಿ ಮುಖ್ಯ ಸಚೇತಕ ಅಶೋಕ್ ಪಟ್ಟಣ್ ಹೋಗಿ ಸಮಾಧಾನ ಮಾಡಿದ್ರು. ಕುಳಿತುಕೊಳ್ಳುವಂತೆ ಕೈ ಮುಗಿದು ಮನವಿ ಮಾಡಿದರು. ನಂತರ ಪ್ರದೀಪ್ ಬಳಿ ಹೋಗಿ ಕುಳಿತುಕೊಳ್ಳುವಂತೆ ಸಚಿವ ಪ್ರಿಯಾಂಕ್ ಖರ್ಗೆ ಸೂಚಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ನೆಲದಲ್ಲೇ ಸ್ತ್ರೀದ್ವೇಷ ಪ್ರದರ್ಶಿಸಿದ ತಾಲೀಬಾನ್ ವಿದೇಶಾಂಗ ಸಚಿವ!; ಸುದ್ದಿಗೋಷ್ಠಿಗೆ ಮಹಿಳೆಯರಿಗಿಲ್ಲ ಪ್ರವೇಶ; ಭುಗಿಲೆದ್ದ ಅಸಮಾಧಾನ!

'ನನ್ನ ಪ್ರಶಸ್ತಿ ಟ್ರಂಪ್‌ಗೆ ಸಮರ್ಪಿತ...' Noble ಶಾಂತಿ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಮಾರಿಯಾ ಶಾಕಿಂಗ್ ಹೇಳಿಕೆ!

ಭಾರತದ ಹಿತಾಸಕ್ತಿಗಳ ವಿರುದ್ಧ ಅಫ್ಘಾನಿಸ್ತಾನ ನೆಲ ಬಳಕೆಯಾಗಲ್ಲ, ನೀವು ಆಟ ಆಡಬೇಡಿ- ಪಾಕಿಸ್ತಾನಕ್ಕೆ ಅಫ್ಘಾನ್ ವಿದೇಶಾಂಗ ಸಚಿವರ ನೇರ ಎಚ್ಚರಿಕೆ!

ಚಿಕ್ಕಬಳ್ಳಾಪುರ: 'Miss U Chinna'; ಅಪ್ರಾಪ್ತ ಪ್ರೇಯಸಿಯ ದುಪ್ಪಟ್ಟದಿಂದಲೇ ಯುವಕ ನೇಣಿಗೆ ಶರಣು; Instagram Post Viral

ಬೆಂಗಳೂರಿನಲ್ಲೊಂದು ಹೃದಯ ವಿದ್ರಾವಕ ಘಟನೆ: ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ

SCROLL FOR NEXT