ಬೆಂಗಳೂರು: ಸರ್ಕಲ್ ಇನ್ಪೆಕ್ಟರ್ ನನ್ನನ್ನು ವೈಯಕ್ತಿಕವಾಗಿ ತೇಜೋವಧೆ ಮಾಡುತ್ತಿದ್ದಾರೆ. ನನಗೆ ಯಾವುದೇ ರೀತಿಯಲ್ಲಿ ಸ್ಪಂದನೆ ಕೊಡುತ್ತಿಲ್ಲ. ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದು ಗುರುಮಿಠಕಲ್ ಶಾಸಕ ಶರಣಗೌಡ ಕಂದಕೂರ ತಮ್ಮ ಅಳಲು ತೋಡಿಕೊಂಡ ಬೆಳವಣಿಗೆ ವಿಧಾನಸಭೆಯಲ್ಲಿ ಸೋಮವಾರ ಕಂಡು ಬಂದಿತು.
ಗಮನ ಸೆಳೆಯುವ ಸೂಚನೆಯ ವೇಳೆ ಈ ವಿಚಾರ ಪ್ರಸ್ತಾಪ ಮಾಡಿದ ಅವರು, ಜನವರಿಯಲ್ಲಿ ಕ್ಷೇತ್ರದ ಅಂಕೂರ ಎಂಬ ಗ್ರಾಮದಲ್ಲಿ 30 ವಿದ್ಯಾರ್ಥಿಯರಿಗೆ ಲೈಂಗಿಕ ದೌರ್ಜನ್ಯ ಆಗುತ್ತದೆ. ಶಿಕ್ಷಕರ ವಿರುದ್ಧ ಕೇವಲ ಕೇಸ್ ದಾಖಲು ಆಗುತ್ತದೆ. ಸಿಐಗೆ ಫೋನ್ ಮಾಡಿದಾಗ ರೇಪ್ ಆಗಿಲ್ಲ ಎಂದು ಉತ್ತರ ನೀಡುತ್ತಾರೆ. ಡಿಸಿ ಆದೇಶದ ಬಳಿಕ ಪೋಸ್ಕೋ ಪ್ರಕರಣ ದಾಖಲಾಗುತ್ತದೆ.
ಸಿಐ ನಡೆಯ ಹಿನ್ನೆಲೆಯಲ್ಲಿ ಮಹಿಳಾ ಅಯೋಗದ ನೋಟಿಸ್ ಇಶ್ಯೂ ಮಾಡಿದ ಬಳಿಕ ಪೊಲೀಸ್ ಅಧಿಕಾರಿ ನನಗೆ ಸ್ಪಂದನೆ ಕೊಡುತ್ತಿಲ್ಲ. ತನ್ನ ಆಪ್ತ ಸಹಾಯಕ ಫೋನ್ ಮಾಡಿದರೂ ಸ್ಪಂದನೆ ಮಾಡುತ್ತಿಲ್ಲ. ಸಿಐ ತನನ್ನು ವೈಯಕ್ತಿವಾಗಿ ತೇಜೋವಧನೆ ಮಾಡುತ್ತಿದ್ದಾರೆ, ನಾನು ರಾಜೀನಾಮೆ ಕೊಡುತ್ತೇನೆ ಎಂದು ಗಮನ ಸೆಳೆದರು.
ಇದಕ್ಕೆ ಧ್ವನಿಗೂಡಿಸಿದ ವಿರೋಧ ಪಕ್ಷದ ನಾಯಕ ಆರ್ ಅಶೋಕ, ಶರಣಗೌಡ ಕುಂದಕೂರು ಎರಡು ಬಾರಿ ಮನೆಗೆ ಬಂದಿದ್ದರು. ಸಿಐ ಹಪ್ತಾ ವಸೂಲಿ ಮಾಡುತ್ತಿದ್ದಾರೆ ಎಂದು ದೂರು ನೀಡಿದ್ದಾರೆ. ಕೆಡಿಬಿ ಸಭೆಯಲ್ಲೂ ಶಾಸಕರಿಗೆ ಸರಿಯಾದ ಉತ್ತರ ನೀಡಿಲ್ಲ. ಶಾಸಕರಿಗೆ ನ್ಯಾಯ ಸಿಕ್ಕಿಲ್ಲ ಎಂದರೆ ಎಲ್ಲಿಗೆ ಹೋಗಬೇಕು. ಕೂಡಲೇ ಅಮಾನತು ಮಾಡಿ, ಒಂದು ಸಂದೇಶ ಹೋಗಲಿ. ಅವರ ಕ್ಷೇತ್ರದಲ್ಲಿ 3 ಕೊಲೆ ಆಗಿದೆ. ರೇಪ್ ಕೇಸ್ ಆದರೆ ನೋಡೋಣ ಅಂದರೆ ಅರ್ಥ ಏನು? ಎಂದು ಧ್ವನಿಗೂಡಿಸಿದರು.
ಇದಕ್ಕೆ ಉತ್ತರ ಕೊಟ್ಟ ಗೃಹ ಸಚಿವ ಡಾ. ಜಿ ಪರಮೇಶ್ವರ್, ಅಧಿಕಾರಿಯೊಬ್ಬರಿಗಾಗಿ ತಾವು ರಾಜೀನಾಮೆ ಕೊಡಬೇಡಿ. ಅಂತಹ ಮಾತನ್ನು ಆಡಬೇಡಿ. ಸಿಐ ಸಂಜೀವ್ ಕುಮಾರ್ ಗೆ ಈಗಾಗಲೇ ನೋಟಿಸ್ ಕೊಟ್ಟಿದ್ದೇವೆ. ನೋಟಿಸ್‌ಗೆ ಅವರು ಉತ್ತರ ಕೊಟ್ಟ ಆಧಾರದಲ್ಲಿ ಕ್ರಮ ಕೈಗೊಳ್ಳಲಾಗುವುದು. ಅಧಿಕಾರಿಯಿಂದ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ. ಈ ಬಗ್ಗೆ ವರದಿಯನ್ನು ತರಿಸಿಕೊಂಡಿದ್ದೇನೆ. ಅಮಾನತು ಮಾಡಬೇಕಾದರೆ ಅಮಾನತು ಮಾಡುತ್ತೇನೆ. ಡಿಸ್ಮಿಸ್ ಮಾಡೋದಾದರೆ ಡಿಸ್ಮಿಸ್ ಮಾಡುತ್ತೇನೆಂದು ಹೇಳಿದರು.
ಗೃಹ ಸಚಿವ ಡಾ ಪರಮೇಶ್ವರ್ ಅವರು ನೀಡಿದ ಉತ್ತರದಿಂದ ತೃಪ್ತಿಯಾಗದ ಜೆಡಿಎಸ್ ಸದಸ್ಯರು ಸದನದ ಬಾವಿಗಿಳಿದರು. ಪೊಲೀಸ್ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಿ ಬಿಜೆಪಿ ಸದಸ್ಯರು ಆಗ್ರಹಿಸಿದರು. ತನಿಖೆ ನಡೆಯುವ ವರೆಗೆ ಅವರನ್ನು ಅಮಾನತಿನಲ್ಲಿಡಿ ಎಂದು ಬಿಜೆಪಿ ಸದಸ್ಯ ಸುರೇಶ್ ಕುಮಾರ್ ಒತ್ತಾಯಿಸಿದರು.
ಇನ್ನು ಜೆಡಿಎಸ್ ಹಾಗೂ ಬಿಜೆಪಿ ಸದಸ್ಯರ ಒತ್ತಡಕ್ಕೆ ಮಣಿದ ಗೃಹ ಸಚಿವರು ಆರೋಪ ಇರುವ ಸಿಐಯನ್ನು ಗುರುಮಿಠಕಲ್ ಠಾಣೆಯಿಂದ ತಕ್ಷಣ ವರ್ಗಾವಣೆ ಮಾಡುತ್ತೇನೆ ಎಂದು ಭರವಸೆ ಕೊಟ್ಟರು