ಕಾಳಿಂಗ ಸರ್ಪಕ್ಕೆ ಮೈಕ್ರೋ ಚಿಪ್ ಅಳವಡಿಕೆ 
ರಾಜ್ಯ

ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಕಿಂಗ್ ಕೋಬ್ರಾ, ಇತರೆ ಪ್ರಾಣಿಗಳಿಗೆ ಮೈಕ್ರೋಚಿಪ್ ಅಳವಡಿಕೆ

ಸಸ್ತನಿಗಳು, ಪಕ್ಷಿಗಳು, ಸರೀಸೃಪಗಳು ಸೇರಿದಂತೆ 1200ಕ್ಕೂ ಹೆಚ್ಚು ಪ್ರಾಣಿಗಳನ್ನು ಪಿಲಿಕುಳ ಜೈವಿಕ ಉದ್ಯಾನ ಹೊಂದಿದೆ.

ಮಂಗಳೂರು: ನಗರದ ಹೊರವಲಯದಲ್ಲಿರುವ ಪಿಲಿಕುಳ ಜೈವಿಕ ಉದ್ಯಾನದಲ್ಲಿ ಕಾಳಿಂಗ ಸರ್ಪಗಳು ಮತ್ತು ಇತರೆ ಪ್ರಾಣಿಗಳಿಗೆ ಮೈಕ್ರೊಚಿಪ್‌ ಅಳವಡಿಸುವ ಕಾರ್ಯ ಆರಂಭಿಸಲಾಗಿದೆ.

ಸಸ್ತನಿಗಳು, ಪಕ್ಷಿಗಳು ಮತ್ತು ಸರೀಸೃಪಗಳು ಸೇರಿದಂತೆ 1,200 ಕ್ಕೂ ಹೆಚ್ಚು ಕಾಡು ಪ್ರಾಣಿಗಳನ್ನು ಹೊಂದಿರುವ ಭಾರತದ ಪ್ರಮುಖ ಪ್ರಾಣಿಸಂಗ್ರಹಾಲಯಗಳಲ್ಲಿ ಒಂದಾದ ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಕಿಂಗ್ ಕೋಬ್ರಾ (ಕಾಳಿಂಗ ಸರ್ಪ) ಮತ್ತು ಇತರ ಪ್ರಾಣಿಗಳ ಪಂಜರದಲ್ಲಿ ಸಂರಕ್ಷಣಾ ಸಂತಾನೋತ್ಪತ್ತಿ ಯೋಜನೆಯನ್ನು ಕೈಗೊಂಡಿದೆ.

ಮೃಗಾಲಯದ ಮುಖ್ಯ ಉದ್ದೇಶಗಳು ಕಾಡು ಪ್ರಾಣಿಗಳ ಸಂರಕ್ಷಣೆ, ಶಿಕ್ಷಣ ಮತ್ತು ವೈಜ್ಞಾನಿಕ ಸಂಶೋಧನೆಗಳನ್ನು ಒಳಗೊಂಡಿವೆ. ಈಗ ಉದ್ಯಾನವನವು ಕಾಡು ಪ್ರಾಣಿಗಳು ಮತ್ತು ಸರೀಸೃಪಗಳಿಗೆ ಮೈಕ್ರೋಚಿಪ್ ಅಳವಡಿಸುವ ಯೋಜನೆ ಕೈಗೆತ್ತಿಕೊಂಡಿದೆ.

ಪತ್ರಿಕಾ ಪ್ರಕಟಣೆಯಲ್ಲಿ ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕ ಎಚ್‌ಜೆ ಭಂಡಾರಿ ಮಾತನಾಡಿ, ‘ಸಸ್ತನಿಗಳು, ಪಕ್ಷಿಗಳು, ಸರೀಸೃಪಗಳು ಸೇರಿದಂತೆ 1200ಕ್ಕೂ ಹೆಚ್ಚು ಪ್ರಾಣಿಗಳನ್ನು ಪಿಲಿಕುಳ ಜೈವಿಕ ಉದ್ಯಾನ ಹೊಂದಿದೆ. ಒಂದು ವರ್ಗದ ಪ್ರಾಣಿಗಳು ಬರಿಗಣ್ಣಿಗೆ ಸಾಮಾನ್ಯವಾಗಿ ಒಂದೇ ರೀತಿ ಕಾಣಿಸುತ್ತವೆ. ಅವುಗಳನ್ನು ಸುಲಭವಾಗಿ ಪ್ರತ್ಯೇಕಿಸಲು ಸಾಧ್ಯವಾಗಬೇಕು ಎಂಬ ಕಾರಣಕ್ಕೆ ಚಿಪ್‌ ಆಳವಡಿಸಲಾಗುತ್ತಿದೆ. ಪಂಜರದಲ್ಲೇ ಪ್ರಾಣಿಗಳ ತಳಿ ಸಂವರ್ಧನೆ ಮಾಡುವಾಗ, ಒಂದೇ ವಂಶವಾಹಿಯ ಪ್ರಾಣಿಗಳೊಳಗೆ ತಳಿ ಸಂವರ್ಧನೆಯಾಗುವುದನ್ನು ತಡೆಯಲು ಚಿಪ್‌ ಅಳವಡಿಸುವುದು ಅಗತ್ಯವಾಗಿದೆ’ ಎಂದು ತಿಳಿಸಿದರು.

ವನ್ಯಪ್ರಾಣಿಗಳ ಅಧ್ಯಯನ, ವೈಜ್ಞಾನಿಕ ಸಂಶೋಧನೆಯ ಜೊತೆಗೆ ಪ್ರಾಣಿಸಂಕುಲದ ಸಂರಕ್ಷಣೆಯೂ ಪಿಲಿಕುಳ ಜೈವಿಕ ಉದ್ಯಾನದ ಉದ್ದೇಶವಾಗಿರುವುದರಿಂದ, ಪಂಜರದಲ್ಲಿಯೇ ಕಾಳಿಂಗಸರ್ಪ ಹಾಗೂ ಇತರ ಹಲವು ಪ್ರಾಣಿಗಳ ತಳಿ ಸಂವರ್ಧನೆ ಮಾಡುವ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಇದರ ಅಂಗವಾಗಿ ಕಾಳಿಂಗ ಸರ್ಪಗಳಿಗೆ ಮೈಕ್ರೊ ಚಿಪ್‌ ಅಳವಡಿಸಲಾಗುತ್ತಿದೆ. ಹಾವುಗಳಷ್ಟೇ ಅಲ್ಲ, ಕಾಡು ಪ್ರಾಣಿಗಳಿಗೂ ಮೈಕ್ರೊಚಿಪ್‌ ಅಳವಡಿಸುವ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ.

ಮೈಕ್ರೊಚಿಪ್‌ ಹೊಂದಿರುವ ಸಣ್ಣ ಎಲೆಕ್ಟ್ರಾನಿಕ್‌ ಉಪಕರಣವೊಂದನ್ನು ಪ್ರಾಣಿಯ ಚರ್ಮದಡಿಯಲ್ಲಿ ಅಳವಡಿಸಲಾಗುವುದು. ಇದಕ್ಕೆ ಸ್ಕ್ಯಾನರ್‌ ಸಹಿತವಾದ ಒಂದು ಸಣ್ಣ ರಿಸೀವರ್‌ ಇರುತ್ತದೆ. ಪ್ರತಿ ಪ್ರಾಣಿಯ ಹೆಸರು, ಟ್ರಾನ್ಸ್‌ಪಾಂಡರ್‌ ಸಂಖ್ಯೆ ಹಾಗೂ ವಂಶವಾಹಿಯು ಅದರಲ್ಲಿ ದಾಖಲಾಗಿರುತ್ತದೆ’ ಎಂದು ಭಂಡಾರಿ ತಿಳಿಸಿದರು.

ಮೃಗಾಲಯದಲ್ಲಿರುವ ಹುಲಿ, ಸಿಂಹ, ಚಿರತೆ ಹಾಗೂ ಇತರ ಪ್ರಾಣಿಗಳಿಗೆ ಮೈಕ್ರೊ ಚಿಪ್‌ ಅಳವಡಿಸುವ ಕಾರ್ಯವನ್ನು ಶೀಘ್ರದಲ್ಲೇ ಆರಂಭಿಸಲಾಗುವುದು. ಒಂದು ತಿಂಗಳಲ್ಲಿ ಈ ಕಾರ್ಯ ಪೂರ್ಣಗೊಳ್ಳಲಿದೆ. ಪ್ರಾಣಿಗಳಲ್ಲಿ ಅಳವಡಿಸಲಾಗುವ ಮೈಕ್ರೊ ಚಿಪ್‌ಗಳನ್ನು ವಿದೇಶದಿಂದ ತರಿಸಲಾಗಿದೆ. ಹಾವುಗಳು ಮಾತ್ರವಲ್ಲದೇ ಕತ್ತೆ ಕಿರುಬ, ಕಾಡು ನಾಯಿ, ಭಾರತೀಯ ಬೂದು ತೋಳ, ಕರಡಿ, ಮೊಸಳೆ ಮುಂತಾದ ಆಯ್ದ ತಳಿಯ ಪ್ರಾಣಿಗಳಲ್ಲೂ ಚಿಪ್‌ ಅಳವಡಿಸಲಾಗುವುದು.

ಈ ಸಂದರ್ಭದಲ್ಲೇ ಲಿಂಗಪತ್ತೆ ಉಪಕರಣವನ್ನು ಬಳಸಿ ಆಯಾ ಪ್ರಾಣಿಯ ಲಿಂಗವನ್ನು ಗುರುತಿಸುವುದು, ಪ್ರಾಣಿಯ ನಿಖರವಾದ ಉದ್ದ, ಅಗಲ, ಎತ್ತರಗಳನ್ನು ದಾಖಲಿಸುವ ಕಾರ್ಯವೂ ನಡೆಯಲಿದೆ. ಹಕ್ಕಿಗಳ ಲಿಂಗ ಪತ್ತೆಮಾಡಲು ಡಿಎನ್‌ಎ ಪರೀಕ್ಷೆ ನಡೆಸಲಾಗುವುದು ಎಂದರು.

ಮೃಗಾಲಯದಲ್ಲಿರುವ ಪಶುವೈದ್ಯಕೀಯ ಆಸ್ಪತ್ರೆಯಲ್ಲೇ ವೈಜ್ಞಾನಿಕ ರೀತಿಯಲ್ಲಿ ಮೈಕ್ರೊಚಿಪ್‌ ಅಳವಡಿಸಲಾಗುವುದು. ಅದು ಜೀವನಪೂರ್ತಿ ಪ್ರಾಣಿಯ ಶರೀರದಲ್ಲಿರಲಿದೆ ಎಂದು ಜಯಪ್ರಕಾಶ ಭಂಡಾರಿ ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಮಹಿಳಾ ಟೆಕ್ಕಿ ಸಾವಿನ ಕೇಸ್ ಗೆ ಬಿಗ್ ಟ್ವಿಸ್ಟ್: ಹತ್ಯೆಗೂ ಮುನ್ನ PU ವಿದ್ಯಾರ್ಥಿಯಿಂದ ರೇಪ್; ಸಾಕ್ಷಿ ನಾಶಕ್ಕೆ ಬೆಂಕಿ ಹಚ್ಚಿದ ಕರ್ನಲ್ ಕುರೈ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

SCROLL FOR NEXT