ಬೆಂಗಳೂರು: ರಾಜ್ಯಾದ್ಯಂತ ಈ ಬಾರಿ ಮುಂಗಾರು ಮಳೆ ಜೋರಾಗಿದೆ. ಕರಾವಳಿ, ಮಲೆನಾಡು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಗೆ ಗುಡ್ಡಗಳು, ಮನೆ ಗೋಡೆ ಕುಸಿದು ಬಿದ್ದು ಹಲವು ಅವಘಡಗಳು ಸಂಭವಿಸಿವೆ.
ಬೆಂಗಳೂರು-ಮಂಗಳೂರು ರೈಲು ಮಾರ್ಗದ ಹಾಸನ ಜಿಲ್ಲೆ ಎಡಕುಮೇರಿ-ಕಡಗರವಳ್ಳಿ ನಡುವಿನ ದೋಣಿಗಲ್ ಎಂಬಲ್ಲಿ ಮೊನ್ನೆ ಶುಕ್ರವಾರ ಸಂಜೆ ಭೂಕುಸಿತ ಉಂಟಾಗಿ ರೈಲು ಹಳಿಯ ಮೇಲೆ ಮಣ್ಣು ಬಿದ್ದಿದೆ. ಇದರಿಂದ ಕೆಲ ರೈಲುಗಳ ಸಂಚಾರವನ್ನು ನಾಳೆ ಜುಲೈ 29ರವರೆಗೆ ರದ್ದು ಮಾಡಲಾಗಿದೆ ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ರದ್ದಾದ ರೈಲುಗಳು: ಕೆಎಸ್‌ಆರ್ ಬೆಂಗಳೂರು-ಕಣ್ಣೂರು ರೈಲು ಸಂಖ್ಯೆ (16511) ರೈಲು ರದ್ದಾಗಿದೆ.
ಬೆಂಗಳೂರು-ಕಾರವಾರ ಕೆಎಸ್‌ಆರ್ ಎಕ್ಸ್‌ಪ್ರೆಸ್ (16595) ರೈಲು ಸಂಚಾರ ರದ್ದು ಮಾಡಲಾಗಿದೆ.
ಕಣ್ಣೂರು-ಬೆಂಗಳೂರು (16512) ರೈಲು ರದ್ದಾಗಿದೆ.
ಕಾರವಾರ-ಕೆಎಸ್ ಆರ್ ಬೆಂಗಳೂರು ಎಕ್ಸ್‌ಪ್ರೆಸ್ (16596) ರೈಲು ಸಂಚಾರ ತಾತ್ಕಾಲಿಕ್ ಬಂದ್
ಬೆಂಗಳೂರು-ಮುರುಡೇಶ್ವರ (16585) ರೈಲು ತಾತ್ಕಾಲಿಕವಾಗಿ ಸಂಚರಿಸುವುದಿಲ್ಲ.
ಮುರ್ಡೇಶ್ವರ- ಬೆಂಗಳೂರು (16586) ರೈಲನ್ನು ರದ್ದುಗೊಳಿಸಲಾಗಿದೆ.ವಿಜಯಪುರ-ಮಂಗಳೂರು ಸೆಂಟ್ರಲ್ ವಿಶೇಷ ಎಕ್ಸ್‌ಪ್ರೆಸ್ (07377) ರೈಲು ರದ್ದು ಮಾಡಲಾಗಿದೆ.
ಮಂಗಳೂರು ಸೆಂಟ್ರಲ್-ವಿಜಯಪುರ ವಿಶೇಷ ಎಕ್ಸ್‌ಪ್ರೆಸ್ (07377) ರೈಲು ರದ್ದು ಮಾಡಲಾಗಿದೆ.
ಮಂಗಳೂರು ಸೆಂಟ್ರಲ್ -ವಿಜಯಪುರ ವಿಶೇಷ ಎಕ್ಸ್‌ಪ್ರೆಸ್ (07378) ರೈಲು ಸಂಚಾರ ಇರುವುದಿಲ್ಲ.
ಮಾರ್ಗ ಬದಲಾವಣೆ: ಕೆಲವು ಮಾರ್ಗಗಳಲ್ಲಿ ಅನಿವಾರ್ಯವಾಗಿ ರೈಲು ಸಂಚರಿಸಬೇಕಾಗಿದ್ದು, ಅದಕ್ಕೆ ಕಣ್ಣೂರು-ಬೆಂಗಳೂರು ಎಕ್ಸ್‌ಪ್ರೆಸ್ (16512) ಮತ್ತು ಕಾರವಾರ- ಕೆಎಸ್ಆರ್ಬೆಂಗಳೂರು ಎಕ್ಸ್‌ಪ್ರೆಸ್ (16596) ಶೊರ್ನೂರು, ಸೇಲಂ ಜೋಲಾರ್‌ಪೇಟೆ ಮೂಲಕ ಸಂಚರಿಸಿದೆ. ಮುರ್ಡೇಶ್ವರ- ಬೆಂಗಳೂರು ಎಕ್ಸ್‌ಪ್ರೆಸ್ (16586) ಕೂಡ ಇದೇ ಮಾರ್ಗದ ಮೂಲಕ ಸಂಚರಿಸಿದೆ.