ನವದೆಹಲಿ: ಕಳೆದ ಎರಡು ವಾರಗಳಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ಅಭೂತಪೂರ್ವ ಮಳೆಯಾಗುತ್ತಿದ್ದು, ಆಗಸ್ಟ್ ನಲ್ಲಿ ಕರ್ನಾಟಕದ ಜಲಾಶಯಗಳಿಂದ ತಮಿಳುನಾಡಿಗೆ ಬಿಡಬೇಕಾಗಿದ್ದ ನೀರು ಜುಲೈ ತಿಂಗಳಲ್ಲೇ ಹರಿದಿದೆ.
ಕಾವೇರಿ ಜಲಾನಯನ ಪ್ರದೇಶದಲ್ಲಿ ಜುಲೈನಲ್ಲಿ ಉತ್ತಮ ಮಳೆಯಾಗಿದ್ದು, ತಮಿಳುನಾಡಿಗೆ ಕಾವೇರಿ ನೀರು ಪೂರೈಕೆಯಲ್ಲಿನ ಕೊರತೆಯನ್ನು ನೀಗಿಸಿದೆ. ಅಲ್ಲದೆ, ಆಗಸ್ಟ್‌ನ ಕೋಟಾವನ್ನು ಮುಂಚಿತವಾಗಿ ಪೂರೈಸಿದೆ.
ಮಂಗಳವಾರ ನಡೆದ ಕಾವೇರಿ ನೀರು ನಿಯಂತ್ರಣ ಸಮಿತಿ(ಸಿಡಬ್ಲ್ಯುಆರ್‌ಸಿ)ಯ 100ನೇ ಸಭೆಯಲ್ಲಿ ತಮಿಳುನಾಡು ಅಧಿಕಾರಿಗಳು, ಹೆಚ್ಚುವರಿ ನೀರು ಹರಿದಿದ್ದರೂ, ಆಗಸ್ಟ್‌ನಲ್ಲಿ ಪ್ರತಿದಿನ 1.5 ಟಿಎಂಸಿ ನೀರು ಬಿಡುವಂತೆ ಕರ್ನಾಟಕಕ್ಕೆ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದರು.
ಜೂನ್ 1 ರಿಂದ ಜುಲೈ 17 ರ ನಡುವೆ ಇದ್ದ ಒತ್ತಡದ ಪರಿಸ್ಥಿತಿಯನ್ನು ಉತ್ತಮ ಮಳೆಯ ಮೂಲಕ ತಗ್ಗಿಸಿದೆ. ಜೂನ್‌ನಲ್ಲಿ ಕರ್ನಾಟಕವು ತಮಿಳುನಾಡಿಗೆ 2.22 tmcf ನೀರು ಹರಿಸಿದೆ. ಜುಲೈ ಅಂತ್ಯಕ್ಕೆ ನಿಗದಿಪಡಿಸಿದ 40.43 ಟಿಸಿಎಂಸಿಗಿಂತ ಹೆಚ್ಚುವರಿಯಾಗಿ 36. 34 ರಷ್ಟು ನೀರು ಹರಿದಿದೆ. ಬಿಳಿಗುಂಡ್ಲುವಿನಲ್ಲಿ ಜುಲೈ 29 ರ ಮಾಪನದ ಪ್ರಕಾರ, 1,08,876 ಕ್ಯೂಸೆಕ್ಸ್ ಹರಿವನ್ನು ಪರಿಗಣನೆಗೆ ತೆಗೆದುಕೊಂಡರೆ ಒಟ್ಟು 9.19 ಟಿಎಂಸಿ ಆಗುತ್ತದೆ ಎಂದು ಕರ್ನಾಟಕ ಮಾಹಿತಿ ನೀಡಿದೆ.
ಒಟ್ಟಾರೆಯಾಗಿ ತಮಿಳುನಾಡಿನ ಬಿಳಿಗುಂಡ್ಲುವಿನಲ್ಲಿ ಜುಲೈ 29ಕ್ಕೆ 86.17 ಟಿಎಂಸಿ ನೀರು ಸೇರಿದೆ. ಈ ಒಟ್ಟಾರೆ ನೀರಿನ ಪ್ರಮಾಣವು ಆಗಸ್ಟ್ ಅಂತ್ಯಕ್ಕೆ ಬಿಡಬೇಕಾದ ನೀರಿನ ಪ್ರಮಾಣದಷ್ಟಾಗಿದೆ ಎಂದು ಕರ್ನಾಟಕ ಹೇಳಿದೆ.
ಕಾವೇರಿ ಜಲಾನಯನ ಪ್ರದೇಶದಲ್ಲಿ ಜುಲೈ 17 ಮತ್ತು ಜುಲೈ 23 ರ ನಡುವೆ ವಾಡಿಕೆಗಿಂತ ಶೇ. 68 ರಷ್ಟು ಮತ್ತು ಜುಲೈ 24 ರಿಂದ ಜುಲೈ 30 ರ ನಡುವೆ ವಾಡಿಕೆಗಿಂತ ಶೇ. 143 ರಷ್ಟು ಹೆಚ್ಚು ಮಳೆಯಾಗಿದೆ.