ಬೆಂಗಳೂರು: ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿರುವ 16 ವರ್ಷದ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ಅಕ್ರಮ ಬಾಂಗ್ಲಾ ವಲಸಿಗ ಎಂದು ತಿಳಿದುಬಂದಿದೆ,
ಆರೋಪಿ ಶಾಹಿನ್ ಶೇಕ್ 2020 ರಲ್ಲಿ ಹೆಬ್ಬಗೋಡಿಯಲ್ಲಿ ಎಟಿಎಂ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದು, ಅಕ್ರಮ ಬಾಂಗ್ಲಾದೇಶಿ ವಲಸಿಗರು ಉದ್ದೇಶಪೂರ್ವಕವಾಗಿ ಅಪರಾಧಗಳಲ್ಲಿ ತೊಡಗಿ, ಜಾಮೀನು ಪಡೆದು ಭಾರತದಲ್ಲಿ ಉಳಿಯುವ ನೆಪದಲ್ಲಿ ಇಲ್ಲಿಯೇ ಉಳಿದು ಬಿಡುತ್ತಿದ್ದಾರೆಂದು ಮಾನವ ಹಕ್ಕುಗಳ ಹೋರಾಟಗಾರರೊಬ್ಬರು ಹೇಳಿದ್ದಾರೆ.
ಅಖಿಲ ಭಾರತ ಶ್ರಮಿಕ್ ಸ್ವರಾಜ್ ಕೇಂದ್ರದ ಉಪಾಧ್ಯಕ್ಷ ಆರ್ ಕಲೀಮುಲ್ಲಾ ಅವರು ಮಾತನಾಡಿ, ಆರೋಪಿಗೆ ಮೂವರು ಪತ್ನಿಯರಿದ್ದು, ಓರ್ವ ಪತ್ನಿ ಕೋಲ್ಕತ್ತಾದಲ್ಲಿ ಮತ್ತು ಇಬ್ಬರ ಪತ್ನಿಯಲು ಬೇಗೂರಿನಲ್ಲಿ ಶೆಡ್‌ಗಳಲ್ಲಿ ವಾಸಿಸುತ್ತಿದ್ದಾರೆ, ಕುಟುಂಬ ಸ್ಕ್ರ್ಯಾಪ್ ವ್ಯವಹಾರ ನಡೆಸುವ ಮೂಲಕ ಜೀವನ ನಡೆಸುತ್ತಿದ್ದಾರೆ.
ಈ ಹಿಂದೆ ಎಟಿಎಂ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಗ್ಲಾದೇಶದ ಬಾಗರ್‌ಹಾಟ್ ಜಿಲ್ಲೆಯ ರಾಯೆಂಡಾ ಗ್ರಾಮದ ನಿವಾಸಿ ಶೇಕ್ ಅವರನ್ನು ಹೆಬ್ಬಗೋಡಿ ಪೊಲೀಸರು ಆಗಸ್ಟ್ 28, 2020 ರಂದು ಬಂಧಿಸಿದ್ದರು. ಬಂಧನವಾದ ಕೆಲವೇ ದಿನಗಳಲ್ಲಿ ಜಾಮೀನಿನ ಮೇಲೆ ಹೊರಬಂದಿದ್ದ,
ಇದೀಗ ಈತನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಗಂಭೀರ ಪ್ರಕರಣ ದಾಖಲಾಗಿದೆ. ಪ್ರಕರಣವನ್ನು ಮುಂದುವರಿಸದಂತೆ ಆತನ ಸಹೋದರ ಬಾಲಕಿಯ ಕುಟುಂಬಕ್ಕೆ ಲಕ್ಷ ಲಕ್ಷ ರೂಪಾಯಿ ನೀಡಿದ್ದಾನೆ ಎನ್ನಲಾಗಿದೆ. ಎಫ್‌ಐಆರ್ ದಾಖಲಾಗಿದ್ದು, ಉನ್ನತ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರಿಂದ ಆತ ಕೂಡ ನಾಪತ್ತೆಯಾಗಿದ್ದಾನೆ.
ನಗರದಲ್ಲಿರುವ ಕೆಲ ಅಕ್ರಮ ಬಾಂಗ್ಲಾದೇಶಿ ವಲಸಿಗರು ಕಳ್ಳತನ, ಅತಿಕ್ರಮಣ, ದರೋಡೆ ಮತ್ತು ಇತರ ಸಣ್ಣ ಅಪರಾಧಗಳಲ್ಲಿ ಉದ್ದೇಶಪೂರ್ವಕವಾಗಿ ಭಾಗಿಯಾಗುತ್ತಿದ್ದು, ಜೈಲಿಗೆ ಹೋಗಿ, ಹೊರಬಂದು ದೇಶದಲ್ಲಿ ಉಳಿದುಕೊಳ್ಳುತ್ತಿದ್ದಾರೆ. ನ್ಯಾಯಾಲಯದ ವಿಚಾರಣೆ ಹಿನ್ನೆಲೆಯಲ್ಲಿ ಇಲ್ಲಿಯೇ ಉಳಿಯಬೇಕಾಗುತ್ತದೆ. ಒಂದು ಪ್ರಕರಣ ಮುಕ್ತಾಯಗೊಳ್ಳುತ್ತಿದ್ದಂತೆ ಮತ್ತೊಂದು ಕಾನೂನುಬಾಹಿರ ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದಾರೆಂದು ತಿಳಿಸಿದ್ದಾರೆ.