ಸಾಂದರ್ಭಿಕ ಚಿತ್ರ  
ರಾಜ್ಯ

ಮುಂಗಾರು ಆಗಮನ ನಂತರ ರಾಜ್ಯದಲ್ಲಿ ಶೇ 80ರಷ್ಟು ಹೆಚ್ಚುವರಿ ಮಳೆ: ಹವಾಮಾನ ಇಲಾಖೆ

ಕಳೆದ ಮಾರ್ಚ್-ಏಪ್ರಿಲ್ ತಿಂಗಳಿನಲ್ಲಿ ಸುಡುವ ಬಿಸಿಲಿನ ನಂತರ ಜೂನ್ ತಿಂಗಳಿನಲ್ಲಿ ಮುಂಗಾರು ಆರಂಭ ನಂತರ ಕೇವಲ 10 ದಿನಗಳಲ್ಲಿ ವಾಡಿಕೆಗಿಂತ ಶೇಕಡಾ 80ರಷ್ಟು ಹೆಚ್ಚುವರಿ ಮಳೆ ದಾಖಲಾಗಿದೆ.

ಬೆಂಗಳೂರು: ಕಳೆದ ಮಾರ್ಚ್-ಏಪ್ರಿಲ್ ತಿಂಗಳಿನಲ್ಲಿ ಸುಡುವ ಬಿಸಿಲಿನ ನಂತರ ಜೂನ್ ತಿಂಗಳಿನಲ್ಲಿ ಮುಂಗಾರು ಆರಂಭ ನಂತರ ಕೇವಲ 10 ದಿನಗಳಲ್ಲಿ ವಾಡಿಕೆಗಿಂತ ಶೇಕಡಾ 80ರಷ್ಟು ಹೆಚ್ಚುವರಿ ಮಳೆ ದಾಖಲಾಗಿದೆ.

ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ಜೂನ್ 1 ರಿಂದ ಪ್ರತಿವರ್ಷ ಸರಾಸರಿ ಮಳೆ 47.6 ಮಿಮೀ ಮಳೆ ಸುರಿಯುತ್ತದೆ. ಆದರೆ ಈ ವರ್ಷ ರಾಜ್ಯದಲ್ಲಿ ಇದುವರೆಗೆ 85.6 ಮಿಮೀ ಮಳೆಯಾಗಿದೆ. ದಕ್ಷಿಣ ಕನ್ನಡ, ಚಿಕ್ಕಮಗಳೂರು ಮತ್ತು ಕೊಡಗು ಹೊರತುಪಡಿಸಿ ಎಲ್ಲಾ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆ ದಾಖಲಾಗಿದೆ. ಈ ಜಿಲ್ಲೆಗಳಲ್ಲಿ ಅನುಕ್ರಮವಾಗಿ ಶೇಕಡಾ 26, ಶೇಕಡಾ 3 ಮತ್ತು ಶೇಕಡಾ 30ರಷ್ಟು ಮಳೆ ಕೊರತೆ ಈ ವರ್ಷ ಕಂಡುಬಂದಿದೆ. ಮಾಹಿತಿ ಪ್ರಕಾರ ಕರಾವಳಿ ಕರ್ನಾಟಕದಲ್ಲಿ ಶೇ.25ರಷ್ಟು ಅಧಿಕ ಮಳೆ ದಾಖಲಾಗಿದೆ.

ಸಾಮಾನ್ಯ ವಾಡಿಕೆಯ 155.6 ಮಿಮೀ ಮಳೆಗೆ ವಿರುದ್ಧವಾಗಿ, ಈ ಪ್ರದೇಶದಲ್ಲಿ 192.4 ಮಿಮೀ ಮಳೆಯಾಗಿದೆ. ಉತ್ತರ ಒಳನಾಡಿನಲ್ಲಿ ಶೇಕಡಾ 140ರಷ್ಟು ಅಧಿಕ ಮಳೆ ದಾಖಲಾಗಿದೆ. ಸಾಮಾನ್ಯವಾಗಿ ಸುರಿಯುವ 33 ಮಿಮೀ ವಿರುದ್ಧ, ಈ ಪ್ರದೇಶದಲ್ಲಿ 79.3 ಮಿಮೀ ಮಳೆಯಾಗಿದೆ. ದಕ್ಷಿಣ ಒಳನಾಡು ಭಾಗಗಳಲ್ಲಿ ಶೇಕಡಾ 82ರಷ್ಟು ಅಧಿಕ ಮಳೆ ದಾಖಲಾಗಿದೆ. ಸಾಮಾನ್ಯವಾಗಿ ಸುರಿಯುವ 38.5 ಮಿಮೀ ವಿರುದ್ಧ, ಇಲ್ಲಿಯವರೆಗೆ ಈ ಭಾಗದಲ್ಲಿ 70.2 ಮಿಮೀ ಮಳೆ ಸುರಿದಿದೆ.

ವಿಜಯಪುರದಲ್ಲಿ ಗರಿಷ್ಠ 329%, ಬೆಂಗಳೂರು ಗ್ರಾಮಾಂತರದಲ್ಲಿ 272% ಅಧಿಕ ಮಳೆ ದಾಖಲಾಗಿದೆ. ರಾಮನಗರ ಮತ್ತು ವಿಜಯನಗರದಲ್ಲಿ ಶೇ.222ರಷ್ಟು ಅಧಿಕ ಮಳೆ ದಾಖಲಾಗಿದೆ. ಉಡುಪಿಯಲ್ಲಿ ಕನಿಷ್ಠ ಶೇ.5ರಷ್ಟು ಅಧಿಕ ಮಳೆ ದಾಖಲಾಗಿದೆ. 209.5% ಸಾಮಾನ್ಯ ಮಳೆಯ ವಿರುದ್ಧ, ಜಿಲ್ಲೆಯಲ್ಲಿ 220.1% ದಾಖಲಾಗಿದೆ. ಹಾವೇರಿ ಮತ್ತು ಹಾಸನದಲ್ಲಿ ಶೇ.14ರಷ್ಟು ನಂತರದ ಸ್ಥಾನದಲ್ಲಿದೆ.

ಬೆಂಗಳೂರು ನಗರ ಪ್ರದೇಶದಲ್ಲಿ ಶೇ.145ರಷ್ಟು ಅಧಿಕ ಮಳೆ ದಾಖಲಾಗಿದೆ. ಜೂನ್ 1-10ರವರೆಗೆ ಸಾಮಾನ್ಯ 37 ಮಿ.ಮೀ.ಗೆ ವಿರುದ್ಧವಾಗಿ, ರಾಜ್ಯ ರಾಜಧಾನಿಯಲ್ಲಿ 90.6 ಮಿ.ಮೀ ಮಳೆ ಸುರಿದಿದೆ.

2023 ರಲ್ಲಿ, ರಾಜ್ಯವು ಜೂನ್ 1ರಿಂದ 14ರವರೆಗೆ ಶೇಕಡಾ 66ರಷ್ಟು ಕೊರತೆಯನ್ನು ಕಂಡಿತ್ತು. ವಾಡಿಕೆಗಿಂತ 81.2 ಮಿ.ಮೀ, ರಾಜ್ಯದಲ್ಲಿ 27.4 ಮಿ.ಮೀ ಮಳೆ ಸುರಿದಿತ್ತು. 2023 ರಲ್ಲಿ, ಕರಾವಳಿ ಕರ್ನಾಟಕವು ಸಾಮಾನ್ಯ 307.2 ಮಿಮೀ (71% ಕೊರತೆ) ವಿರುದ್ಧ 87.9 ಮಿಮೀ, ಉತ್ತರ ಒಳನಾಡು ಸಾಮಾನ್ಯ 50.2 ಮಿಮೀ (60% ಕೊರತೆ) ವಿರುದ್ಧ 20.2 ಮಿಮೀ ಮತ್ತು ದಕ್ಷಿಣ ಒಳನಾಡು ಕರ್ನಾಟಕವು ಸಾಮಾನ್ಯ 62.5% ಕ್ಕೆ ವಿರುದ್ಧವಾಗಿ 21.6 ಮಿಮೀ ಮಳೆ ಸುರಿದಿತ್ತು. (65% ಕೊರತೆ).

ಈ ವರ್ಷ ಮುಂಗಾರು ಮಳೆ ವಾಡಿಕೆಗಿಂತ ಮೊದಲೇ ಆಗಮಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ ವಿಜ್ಞಾನಿ ಸಿಎಸ್ ಪಾಟೀಲ್ ಹೇಳಿದ್ದಾರೆ. ಕೆಲವು ಪ್ರದೇಶಗಳಲ್ಲಿ ಜೂನ್ 1 ರಿಂದ ಬಹುತೇಕ ಪ್ರತಿದಿನ ಮಳೆಯಾಗುತ್ತಿದೆ. ಆದರೆ, ಇನ್ನು ಮೂರು ದಿನಗಳ ನಂತರ, ಮಳೆಯಲ್ಲಿ ಇಳಿಮುಖವಾಗಲಿದೆ. ಈ ಮುಂಗಾರು ಋತುವಿನ ಅಂತ್ಯದವರೆಗೂ ಇದೇ ರೀತಿ ಹವಾಮಾನ ಇರುತ್ತದೆಯೇ ಇಲ್ಲವೇ ಎಂದು ಈಗಲೇ ಊಹಿಸುವುದು ಕಷ್ಟ ಎಂದು ಹವಾಮಾನ ಇಲಾಖೆ ತಿಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

2nd test, Day 2: 518 ರನ್ ಗಳಿಗೆ ಭಾರತ ಇನ್ನಿಂಗ್ಸ್ ಡಿಕ್ಲೇರ್!

CM ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ: ಸುದ್ದಿ ತಿರುಚಿ ಪ್ರಸಾರ ಮಾಡಿದರೆ ಮಾನನಷ್ಟ ಮೊಕದ್ದಮೆ ಅನಿವಾರ್ಯ; ಡಿ ಕೆ ಶಿವಕುಮಾರ್

2nd test, Day 2: 2ನೇ ದಿನದಾಟದ ಆರಂಭದಲ್ಲೇ ಭಾರತಕ್ಕೆ ಆಘಾತ, ಭೋಜನ ವಿರಾಮದ ವೇಳೆಗೆ 427/4

SCROLL FOR NEXT