ಮೈಸೂರು: ನಟ ದರ್ಶನ್‌ಗೆ ಒಳ್ಳೆ ಹೆಂಡತಿ, ಸುಂದರವಾದ ಮಗ ಇದ್ದ. ಶನಿಯಂತೆ ಪವಿತ್ರಾಗೌಡ ಬಂದಳು. ಈಗ ದರ್ಶನ್ ಬದುಕು ಕೈ ಚೆಲ್ಲಿದ್ದಾನೆ. ಕಲೆಯಲ್ಲಿ ಉತ್ತುಂಗಕ್ಕೆ ಏರಿದ್ದ, ಆತನನ್ನು ನನ್ನ ಶಿಷ್ಯ ಎಂದು ಹೇಳಿಕೊಳ್ಳಲು ನಾಚಿಕೆಯಾಗುತ್ತಿದೆ ಎಂದು ರಂಗಾಯಣದ ಮಾಜಿ ನಿರ್ದೇಶಕ ಅಡ್ಡಂಡ ಸಿ ಕಾರ್ಯಪ್ಪ ಪ್ರತಿಕ್ರಿಯಿಸಿದ್ದಾರೆ.
ಈ ಸಂಬಂಧ ಮೈಸೂರಿನಲ್ಲಿ ಮಾತನಾಡಿರುವ ಅಡ್ಡಂಡ ಕಾರ್ಯಪ್ಪ, ದರ್ಶನ್ ನನ್ನ ಶಿಷ್ಯ ಅಂತ ಹೇಳಿಕೊಳ್ಳೋಕೆ ನಾಚಿಕೆ ಆಗುತ್ತಿದೆ ಎಂದಿದ್ದಾರೆ. ಅಡ್ಡಂಡ ಕಾರ್ಯಪ್ಪ ದರ್ಶನ್‌ಗೆ ನಟನೆ ಕಲಿಸಿ ಕೊಟ್ಟ ಗುರು. 1987ರಲ್ಲಿ ನೀನಾಸಂ ನಲ್ಲಿ ದರ್ಶನ್‌ಗೆ ಕಲೆಯನ್ನು ಕಾರ್ಯಪ್ಪ ಹೇಳಿಕೊಟ್ಟ ಮೊದಲ ಗುರುವಾಗಿದ್ದರು. ದರ್ಶನ್ ಆಗ 7ನೇ ತರಗತಿಯಲ್ಲಿದ್ದ. 7ನೇ ತರಗತಿಗೆ 10ನೇ ತರಗತಿಯವರ ರೀತಿ ಕಾಣುತ್ತಿದ್ದ. ನಮ್ಮ ನಾಟಕದಲ್ಲಿ ದರ್ಶನ್‌ಗೆ ರಾಜನ ಪಾತ್ರ ಕೊಟ್ಟಿದ್ದೆ. ತುಂಬಾ ಚೆನ್ನಾಗಿ
ಅಭಿನಯಿಸಿದ್ದ. ನನ್ನ ಹೆಂಡತಿಯೇ ದರ್ಶನ್‌ಗೆ ಬಣ್ಣ ಹಚ್ಚಿದ್ದಳು. ಇದಾದ ಬಳಿಕ ಇವರ ಮೊದಲ ಸಿನಿಮಾ ನನಗೆ ಇಷ್ಟವಾಗಲಿಲ್ಲ. ಮತ್ತೊಮ್ಮೆ ಭೇಟಿಯಾದ ಸಂದರ್ಭ ನೀನಾಸಂಗೆ ಹೋಗುವಂತೆ ಪತ್ರ ಕೊಟ್ಟೆ. ಕಲಾವಿದನಾಗಿರುವ ನಾನು ಬೇರೊಬ್ಬ ಕಲಾವಿದನನ್ನು ಬೆಳೆಸುವುದು ನನ್ನ ಜವಾಬ್ದಾರಿ. ಮಂಡ್ಯ ರಮೇಶ್ ಕೂಡ ಒಂದು ಪತ್ರ ಕೊಟ್ಟರು. ಇದಾದ ಬಳಿಕ ದರ್ಶನ್ ಹೆಗ್ಗೋಡುನಲ್ಲಿರುವ ನೀನಾಸಂನಲ್ಲಿ ತರಬೇತಿ ಪಡೆದುಕೊಂಡ ಎಂದು ಹೇಳಿದರು. ದರ್ಶನ್‌ಗೆ ಸಂಸ್ಕಾರ ಇಲ್ಲದ ಕಾರಣ ಆತನಿಗೆ ಈ ಪರಿಸ್ಥಿತಿ ಬಂದಿದೆ. ಪವಿತ್ರಾಗೌಡ ಆತನ ಪಾಲಿಗೆ ಶನಿ ಆಗಿದ್ದಾಳೆ. ಯಶಸ್ಸು ಎಂಬುದು ದರ್ಶನ್ ಒಳಗೆ ಅಹಂ ಬೆಳೆಸಿತು. ಸಿನಿಮಾದಲ್ಲಿ ಮಾಡುವ ಪಾತ್ರವನ್ನು ನಿಜ ಜೀವನದಲ್ಲಿ ಮಾಡೋಕೆ ಹೋಗಿ ಈಗ ಜೈಲು ಸೇರಿದ್ದಾನೆ ಎಂದರು.