ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ 
ರಾಜ್ಯ

8 ವರ್ಷಗಳ ಬಳಿಕ ಆರೋಗ್ಯ ಇಲಾಖೆಯಲ್ಲಿ ಕೌನ್ಸಿಲಿಂಗ್ ಮೂಲಕ ವರ್ಗಾವಣೆ: ಸರ್ಕಾರ ಮಹತ್ವದ ನಿರ್ಧಾರ

ಆರೋಗ್ಯ ಇಲಾಖೆಯಲ್ಲಿ ಈ ಬಾರಿ ಕೌನ್ಸಿಲಿಂಗ್ ಮೂಲಕವೇ ವರ್ಗಾವಣೆ ನಡೆಯಲಿದೆ. 2016 ರ ಬಳಿಕ ಆರೋಗ್ಯ ಇಲಾಖೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಕೌನ್ಸಿಂಗ್ ಮೂಲಕ ವರ್ಗಾವಣೆ ನಡೆಯಲಿದ್ದು, 8 ವರ್ಷಗಳಿಂದ ಕೌನ್ಸಿಲಿಂಗ್ ಎದುರು ನೋಡುತ್ತಿದ್ದ ಅರ್ಹ ವೈದ್ಯರು ಸಿಬ್ಬಂದಿಗಳಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ದಿಟ್ಟ ಹೆಜ್ಜೆಯಿಟ್ಟಿದೆ.

ಬೆಂಗಳೂರು: ಆರೋಗ್ಯ ಇಲಾಖೆಯಲ್ಲಿ ಈ ಬಾರಿ ಕೌನ್ಸಿಲಿಂಗ್ ಮೂಲಕವೇ ವರ್ಗಾವಣೆ ನಡೆಯಲಿದೆ. 2016 ರ ಬಳಿಕ ಆರೋಗ್ಯ ಇಲಾಖೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಕೌನ್ಸಿಂಗ್ ಮೂಲಕ ವರ್ಗಾವಣೆ ನಡೆಯಲಿದ್ದು, 8 ವರ್ಷಗಳಿಂದ ಕೌನ್ಸಿಲಿಂಗ್ ಎದುರು ನೋಡುತ್ತಿದ್ದ ಅರ್ಹ ವೈದ್ಯರು ಸಿಬ್ಬಂದಿಗಳಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ದಿಟ್ಟ ಹೆಜ್ಜೆಯಿಟ್ಟಿದೆ.

ಕಳೆದ ವರ್ಷ ಸರ್ಕಾರ ರಚನೆಯಾದ ಸಂದರ್ಭದಲ್ಲಿ ಸಾವಿರಾರು ಸಂಖ್ಯೆಯಲ್ಲಿ ವೈದ್ಯರು ಸೇರಿದಂತೆ ವೈದ್ಯಕೀಯ ಸಿಬ್ಬಂದಿಗಳು ವರ್ಗಾವಣೆಗೆ ಬೇಡಿಕೆಯಿಟ್ಟಿದ್ದರು. ಸಾಮಾನ್ಯ ವರ್ಗವಾಣೆ ನಡೆಸಿದರೂ, ಎಲ್ಲರ ಬೇಡಿಕೆಗಳನ್ನ ಈಡೇರಿಸಲು ಸಾಧ್ಯವಾಗಿರಲಿಲ್ಲ. ಅಲ್ಲದೇ ಸಾಕಷ್ಟು ವರ್ಗಾವಣೆಗೆ ಒತ್ತಡ ಪರಿಸ್ಥಿತಿಗಳನ್ನ ಎದುರಿಸಬೇಕಾಗಿ ಬಂದಿತ್ತು.

ಕಾರಣ 2016 ರಿಂದ ಆರೋಗ್ಯ ಇಲಾಖೆಯಲ್ಲಿ ಸಮರ್ಪಕವಾದ ವರ್ಗಾವಣೆ ನಡೆದಿರಲಿಲ್ಲ. ಅಲ್ಲದೇ ಸಾಮಾನ್ಯ ವರ್ಗಾವಣೆಯಲ್ಲಿ ಅರ್ಹರಿಗೆ ನ್ಯಾಯ ದೊರೆಯುವುದಿಲ್ಲ ಎಂಬುದನ್ನ ಮನಗಂಡ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಈ ಬಾರಿ ಪೂರ್ಣ ಪ್ರಮಾಣದ ಕೌನ್ಸಿಲಿಂಗ್ ಮೂಲಕ ವರ್ಗಾವಣೆ ನಡೆಸುವಂತೆ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದರು.

ಗ್ರೂಪ್ ಎ ಯಿಂದ ಹಿಡಿದು ಗ್ರೂಪ್ ಡಿ ಯಲ್ಲಿ ಬರುವ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗಳನ್ನ ಕೌನ್ಸಿಂಗ್ ಮೂಲಕವೇ ವರ್ಗಾವಣೆ ನಡೆಸಲು ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದ್ದು, ಜುಲೈ 31 ರೊಳಗೆ ಕೌನ್ಸಿಲಿಂಗ್ ಪೂರ್ಣಗೊಳ್ಳಲಿದೆ.

ಇಲಾಖೆಯಲ್ಲಿ ಗುರುತಿಸಿರುವ ತಜ್ಞ ಹುದ್ದೆಗಳಲ್ಲಿ ವೈದ್ಯರುಗಳು ತಜ್ಞತೆಗೆ ಅನುಗುಣವಾಗಿ ಕಾರ್ಯನಿರ್ವಹಿಸದೇ ಬೇರೆ ತಜ್ಞತೆ, ಇತರೆ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ತಜ್ಞ ವೈದ್ಯರ ಮಾಹಿತಿಯನ್ನು ಸಲ್ಲಿಸುವಂತೆ ಸೂಚಿಸಲಾಗಿದೆ. ಮೂರು ವರ್ಷ ಸೇವಾವಧಿ ಪೂರೈಸಿರುವ ವೈದ್ಯರು, ನಾಲ್ಕು ವರ್ಷ ಪೂರೈಸಿರುವ ಗ್ರೂಪ್ ಬಿ ನೌಕರರು, 5 ವರ್ಷ ಪೂರೈಸಿದ ಗ್ರೂಪ್ ಸಿ ನೌಕರರು ಹಾಗೂ 7 ವರ್ಷ ಸೇವಾವಧಿ ಪೂರೈಸಿರುವ ಗ್ರೂಪ್ ಡಿ ನೌಕರರು ಜೂನ್ ತಿಂಗಳ ಅಂತ್ಯದೊಳಗೆ ಮಾಹಿತಿ ಸಲ್ಲಿಸುವಂತೆ ತಿಳಿಸಲಾಗಿದೆ. ಮೇಲ್ಕಣಿಸಿದ ಸೇವಾವಧಿ ಪೂರೈಸಿರುವ ವೈದ್ಯರು ಹಾಗೂ ಸಿಬ್ಬಂದಿಗಳ ಸ್ಥಾನಗಳಿಗೆ ಕೌನ್ಸಿಲಿಂಗ್ ಮೂಲಕ ವರ್ಗಾವಣೆ ನಡೆಸಲು ಅವಕಾಶ ಕಲ್ಪಿಸಲಾಗಿದೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ದಿನೇಶ್ ಗುಂಡೂರಾವ್ ಅವರು, ಆರೋಗ್ಯ ಇಲಾಖೆಯಲ್ಲಿ 2024-25ನೇ ಸಾಲಿನಲ್ಲಿ ವೈದ್ಯರು,ಸಿಬ್ಬಂದಿ ವರ್ಗಾವಣೆಯನ್ನು ಕೌನ್ಸೆಲಿಂಗ್‌ ಮೂಲಕ ನಡೆಸುವ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. 2016ರ ಬಳಿಕ ಕೌನ್ಸೆಲಿಂಗ್ ಮೂಲಕ ವರ್ಗಾವಣೆ ನಡೆದಿರಲಿಲ್ಲ. ಹೀಗಾಗಿ 8 ವರ್ಷಗಳ ಬಳಿಕ ಅರ್ಹ ವೈದ್ಯರು, ಸಿಬ್ಬಂದಿಗೆ ನ್ಯಾಯ ಒದಗಿಸುವ ಹೆಜ್ಜೆ ಇಡಲಾಗಿದೆ. ಜೂನ್ 15 ರಂದು ಸುತ್ತೋಲೆ ಹೊರಡಿಸಲಾಗಿದೆ. ಜುಲೈ 6 ರಿಂದ 10ರವರೆಗೆ ವರ್ಗಾವಣೆ ಅರ್ಜಿ ಸ್ವೀಕಾರ ಮಾಡಲಾಗುವುದು. ಜುಲೈ 27ರಿಂದ ಕೌನ್ಸೆಲಿಂಗ್ ಪ್ರಕ್ರಿಯೆ ಆರಂಭಿಸಲಾಗುವುದು. ಜುಲೈ 31ರಂದು ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳಿಸಲು ಅನುಮತಿಸಲಾಗಿದೆ.ಸಾಮಾನ್ಯ ವರ್ಗಾವಣೆಯಲ್ಲಿ ಅರ್ಹರಿಗೆ ನ್ಯಾಯ ದೊರೆಯುವುದಿಲ್ಲ ಎಂಬುದನ್ನ ಮನಗಂಡು ಪೂರ್ಣ ಪ್ರಮಾಣದ ಕೌನ್ಸೆಲಿಂಗ್ ವರ್ಗಾವಣೆ ನಡೆಸಲಾಗುತ್ತಿದೆ. ಇಲಾಖೆಯ‌ ವೈದ್ಯರು, ಸಿಬ್ಬಂದಿಯ ಹಿತರಕ್ಷಣೆ ನಮ್ಮ ಆದ್ಯತೆಯಾಗಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

SCROLL FOR NEXT