ಬೆಂಗಳೂರು: ಕೆರೆ ಪರಿಸರ ವ್ಯವಸ್ಥೆಯನ್ನು ಸಮತೋಲನಗೊಳಿಸುವ ಮತ್ತು ಕೊಳಕು ನೀರನ್ನು ಸಂಸ್ಕರಣೆ ಮಾಡುವ ನಿಟ್ಟಿನಲ್ಲಿ 150 ಕ್ಕೂ ಹೆಚ್ಚು ಸ್ವಯಂಸೇವಕರು ಹಲಸೂರು ಕೆರೆಯಲ್ಲಿ ಮರುಬಳಕೆ ಮಾಡಬಹುದಾದ ವಸ್ತುಗಳಿಂದ ಸುಮಾರು 25 ತೇಲುವ ಹಸಿರು ಪ್ರದೇಶಗಳನ್ನು ಮಾಡಿದ್ದಾರೆ. ಕೆರೆಯ ಒಂದು ಸಣ್ಣ ಪರಿಸರ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುವ ಈ ತೇಲುವ ಜೌಗು ಪ್ರದೇಶಗಳು ಸುಮಾರು ಒಂಬತ್ತು ಸಸಿಗಳನ್ನು ಒಳಗೊಂಡಿರುತ್ತವೆ, ಅವುಗಳು ಕೆರೆಯ ಸುತ್ತಲೂ ಚಲಿಸುವಾಗ ಪೋಷಕಾಂಶಗಳನ್ನು ಹೀರಿಕೊಂಡು, ಆಮ್ಲಜನಕವಾಗಿ ಪರಿವರ್ತಿಸುವ ಮೂಲಕ ಅದರ ಪರಿಸರ ಆರೋಗ್ಯವನ್ನು ಹೆಚ್ಚಿಸುತ್ತವೆ.
ಈ ಸಣ್ಣ ತೇಲುವ ಹಸಿರು ಪ್ರದೇಶಗಳ ನಿರ್ವಹಣೆ ಸುಲಭವಾಗಿದೆ. ಇದು ಹಾಳಾದ ಸಸ್ಯದ ವಸ್ತುಗಳನ್ನು ಟ್ರಿಮ್ ಮಾಡಲು ಅನುವು ಮಾಡಿಕೊಡುತ್ತದೆ. ಇದು ಜಲಮಾರ್ಗದಲ್ಲಿ ಹೆಚ್ಚುವರಿ ಜೀವರಾಶಿಗಳ ಶೇಖರಣೆಯನ್ನು ತಡೆಯುತ್ತದೆ ಮತ್ತು ಸಸ್ಯಗಳನ್ನು ಚಿಕ್ಕದಾಗಿ ಮಾಡುತ್ತವೆ. ಆದ್ದರಿಂದ ಅವು ನೀರಿನಿಂದ ಹೆಚ್ಚಿನ ಪೋಷಕಾಂಶಗಳನ್ನು ಹೀರಿಕೊಳ್ಳುತ್ತವೆ. PVC ಪೈಪ್‌ಗಳಂತಹ ಬಾಳಿಕೆ ಬರುವ, ವಿಷಕಾರಿಯಲ್ಲದ ವಸ್ತುಗಳನ್ನು ಬಳಸಿ ಇವುಗಳನ್ನು ತಯಾರಿಸಲಾಗುತ್ತದೆ, ರಚನೆಯ ಚೌಕಟ್ಟಿನೊಳಗೆ ಒಂಬತ್ತು ಸಸಿಗಳನ್ನು ನೆಡಲಾಗುತ್ತದೆ. ಈ ಸಸ್ಯಗಳು ನೀರಿನಿಂದ ಪೋಷಕಾಂಶಗಳು ಮತ್ತು ಸಂಭಾವ್ಯ ಹಾನಿಕಾರಕ ಅಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ.
ಅಲ್ಲದೇ, ಸಸ್ಯಗಳೊಳಗಿನ ಬ್ಯಾಕ್ಟೀರಿಯಾಗಳು ಸಾವಯವ ಮಾಲಿನ್ಯಕಾರಕಗಳನ್ನು ತಗ್ಗಿಸಲು ಸಹಾಯ ಮಾಡುತ್ತದೆ. ಸಸ್ಯಗಳು ಮತ್ತು ಅವುಗಳ ಬೇರುಗಳು ಉಪಯೋಗಕಾರಿ ಸೂಕ್ಷ್ಮಜೀವಿಗಳು ಬೆಳೆಯಲು ಮೇಲ್ಮೈಯನ್ನು ನೀಡುತ್ತವೆ, ಸ್ವಚ್ಛಗೊಳಿಸುವ ಪ್ರಕ್ರಿಯೆಯನ್ನು ಇನ್ನಷ್ಟು ಹೆಚ್ಚಿಸುತ್ತವೆ. ಸ್ವಯಂ ಸೇವಕ ಕಾರ್ಯಕ್ರಮಗಳನ್ನು ಆಯೋಜಿಸುವ ಗುಡೇರಾ, ಪರಿಸರ ಸುಸ್ಥಿರತೆಯ ಕಡೆಗೆ ಕೆಲಸ ಮಾಡುವ NGO ವೇದಾನ್ಶಿ ಫೌಂಡೇಶನ್ ಸಹಯೋಗದೊಂದಿಗೆ EY ಗ್ಲೋಬಲ್ ಡೆಲಿವರಿ ಸರ್ವೀಸಸ್ (GDS) ಈ ಉಪಕ್ರಮವನ್ನು ಕೈಗೊಂಡಿದೆ.
ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ EY- GDS ನಿರ್ದೇಶಕರಾದ ರೂಮಿ ಮಲ್ಲಿಕ್ ಮಿತ್ರಾ, ಬಿದಿರು ಕೊಳೆಯುವುದನ್ನು ತಡೆಯಲು ಬಿದಿರಿಗೆ ಪದೇ ಪದೇ ರಾಸಾಯನಿಕ ಸಂಸ್ಕರಣೆಯ ಅಗತ್ಯವಿರುವುದರಿಂದ ಸಾಂಪ್ರದಾಯಿಕ ಬಿದಿರು ಬೇಸ್ ಬದಲಿಗೆ ಪಿವಿಸಿ ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಜೈವಿಕ ಪರಿಸರ ವ್ಯವಸ್ಥೆಗಳು ಕಲುಷಿತ ಜಲಮೂಲಗಳನ್ನು ಸ್ವಚ್ಛಗೊಳಿಸಲು ನೈಸರ್ಗಿಕ ಪರಿಹಾರವನ್ನು ಒದಗಿಸುತ್ತವೆ. ಸಸ್ಯಗಳಿಂದ ಕೂಡಿದ, ಈ ಜೌಗು ಪ್ರದೇಶಗಳು ಸಾರಜನಕ, ರಂಜಕ ಮತ್ತು ಸಿಹಿನೀರಿನ ವಿಷದಂತಹ ಮಾಲಿನ್ಯಕಾರಕಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಹೆಚ್ಚುವರಿಯಾಗಿ, ಪರಿಸರ ವ್ಯವಸ್ಥೆಗಳು ವಿವಿಧ ಪರಾಗಸ್ಪರ್ಶಕಗಳು, ಕೀಟಗಳು ಮತ್ತು ಪಕ್ಷಿಗಳಿಗೆ ನೆಲೆಯನ್ನು ಒದಗಿಸುತ್ತವೆ, ಇದು ಜೀವವೈವಿಧ್ಯತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ತಿಳಿಸಿದರು.