ಬೆಂಗಳೂರು: ಡಾಪ್ಲರ್ ಹವಾಮಾನ ರಾಡಾರ್ (DWR) ನ್ನು ಸ್ಥಾಪಿಸುವುದಕ್ಕಾಗಿ ಖಾಸಗಿ, ಸರ್ಕಾರಿ ಕಟ್ಟಡಗಳಲ್ಲಿ ಸ್ಥಳ ದೊರೆಯದೇ ಇರುವುದರಿಂದ ಭಾರತೀಯ ಹವಾಮಾನ ಇಲಾಖೆ ಭಾರತೀಯ ವಾಯು ಪಡೆಗೆ ಪತ್ರ ಬರೆದು ಸ್ಥಳ ನೀಡುವಂತೆ ಮನವಿ ಮಾಡಿದೆ.
ದೆಹಲಿ ಪ್ರಧಾನ ಕಛೇರಿ ಮತ್ತು ಬೆಂಗಳೂರಿನ IMD ಅಧಿಕಾರಿಗಳು ಸಹಾಯಕ್ಕಾಗಿ ಭಾರತೀಯ ವಾಯುಪಡೆಗೆ ಮೇಲ್ಮನವಿಗಳನ್ನು ಕಳುಹಿಸಿದ್ದಾರೆ ಮತ್ತು ಜಕ್ಕೂರಿನಲ್ಲಿ ಜಾಗವನ್ನು ಕೇಳಿದ್ದಾರೆ.
ಐಎಂಡಿ ಅಧಿಕಾರಿಗಳು ಡಿಡಬ್ಲ್ಯೂಆರ್ ಸ್ಥಾಪಿಸಲು ಬೆಂಗಳೂರಿನಲ್ಲಿ ಜಾಗವನ್ನು ಹುಡುಕುತ್ತಾ ಸುಮಾರು ಒಂದು ದಶಕವಾಗಿದೆ. ಅವರು ಯಶಸ್ವಿಯಾಗದ ಕಾರಣ, ಎತ್ತರದ ಕಟ್ಟಡಗಳ ಮೇಲ್ಛಾವಣಿಯನ್ನು ಬಳಸಲು ನಿರ್ಧರಿಸಿದ್ದರು.
“ಆದರೆ ನಾವು ಇಲ್ಲಿಯವರೆಗೆ ಖಾಸಗಿ ಅಥವಾ ವಾಣಿಜ್ಯ ಸಂಸ್ಥೆಗಳು ಅಥವಾ ಸರ್ಕಾರಿ ಇಲಾಖೆಗಳಿಂದ ಯಾವುದೇ ಪ್ರತಿಕ್ರಿಯೆಯನ್ನು ಸ್ವೀಕರಿಸಿಲ್ಲ. ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಜಾಗಕ್ಕಾಗಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ನ್ನು ಸಂಪರ್ಕಿಸಿದೆವು. ಆದರೆ IMD ಈಗಾಗಲೇ ತಮ್ಮ ಆವರಣದಲ್ಲಿ ವೀಕ್ಷಣಾಲಯವನ್ನು ಹೊಂದಿದೆ ಎಂದು HAL ಹೇಳಿದೆ. ಜಕ್ಕೂರು ಏರೋಡ್ರೋಮ್‌ನಲ್ಲಿರುವ ಐಎಎಫ್ ಭೂಮಿಯನ್ನು ಬಳಸಿಕೊಳ್ಳುವಂತೆ ಅವರು ಸಲಹೆ ನೀಡಿದೆ. ಆ ಸ್ಥಳ ಸೂಕ್ತವಾಗಿರುತ್ತದೆ ಮತ್ತು DWR ಸುರಕ್ಷಿತವಾಗಿರುತ್ತದೆ ಎಂದು ನಾವು ಭಾವಿಸುತ್ತೇವೆ ”ಎಂದು ಹಿರಿಯ IMD ಅಧಿಕಾರಿ ಹೇಳಿದ್ದಾರೆ.
ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಸ್ಥಳಕ್ಕೆ ಭೇಟಿ ನೀಡುವುದಾಗಿ IMD IAF ಗೆ ತಿಳಿಸಿದೆ. “ತಾತ್ವಿಕವಾಗಿ, IAF ನಮ್ಮ ವಿನಂತಿಯನ್ನು ಒಪ್ಪಿಕೊಂಡಿದೆ. 6.5-ಟನ್‌ನ ರಾಡಾರ್ ನ್ನು ರೇಡೋಮ್‌ನೊಂದಿಗೆ ಆರೋಹಿಸಲು ಅಗತ್ಯವಿದ್ದರೆ. 20-ಮೀಟರ್ ಟವರ್ ನ್ನು ಸ್ಥಾಪಿಸಲು ನಮಗೆ ಸಹಾಯ ಮಾಡಲು ಸಹ ಅದು ಒಪ್ಪಿಕೊಂಡಿದೆ. ಆದರೆ, ಸ್ಥಳದಲ್ಲಿ ಕಾಮಗಾರಿ ಆರಂಭಿಸುವ ಮುನ್ನ ಸ್ಥಳಕ್ಕೆ ಭೇಟಿ ನೀಡಿ ತಾಂತ್ರಿಕ ವಿವರಗಳನ್ನು ಚರ್ಚಿಸಬೇಕಿದೆ. ಎಲ್ಲವೂ ಸರಿಯಾಗಿ ನಡೆದರೆ, ವಾಯುಪಡೆಯ ಭೂಮಿಯಲ್ಲಿ DWR ನ್ನು ಸ್ಥಾಪಿಸುತ್ತಿರುವುದು ಭಾರತದಲ್ಲಿ ಇದೇ ಮೊದಲು. ಇದರೊಂದಿಗೆ ಭದ್ರತೆ ಮತ್ತು ನಿರ್ವಹಣೆಗೆ ತೊಂದರೆಯಾಗುವುದಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.
ಯಲಹಂಕ ವಾಯುಪಡೆ ನಿಲ್ದಾಣದಲ್ಲಿ ನಡೆಯುವ ದ್ವೈವಾರ್ಷಿಕ ಏರೋ-ಇಂಡಿಯಾ ವೈಮಾನಿಕ ಪ್ರದರ್ಶನದ ಮೇಲೆ ರಾಡಾರ್ ಪರಿಣಾಮ ಬೀರುವುದಿಲ್ಲ. ಇದು ಜಕ್ಕೂರ್ ಏರೋಡ್ರೋಮ್‌ನಲ್ಲಿ ನಡೆಯುವ ಹಾರಾಟ ಮತ್ತು ತರಬೇತಿ ಅವಧಿಗಳ ಮೇಲೂ ಪರಿಣಾಮ ಬೀರುವುದಿಲ್ಲ ಎಂದು ಐಎಂಡಿ ಮೂಲಗಳು ತಿಳಿಸಿವೆ.
ಈ ಮಧ್ಯೆ, IMD 27 ಸ್ವಯಂಚಾಲಿತ ಹವಾಮಾನ ಕೇಂದ್ರಗಳು ಮತ್ತು 47 ಸ್ವಯಂಚಾಲಿತ ಮಳೆ ಮಾಪಕ ಕೇಂದ್ರಗಳನ್ನು ಬಲಪಡಿಸುವ ಕೆಲಸ ಮಾಡುತ್ತಿದೆ. ಹವಾಮಾನದ ಬಗ್ಗೆ - ವಿಶೇಷವಾಗಿ ಮಳೆಯ ಬಗ್ಗೆ, ಬೆಂಗಳೂರಿನ ಕೇಂದ್ರ ಕಚೇರಿಗೆ ಸಕಾಲಿಕ ಡೇಟಾವನ್ನು ಕಳುಹಿಸುತ್ತಿದೆ. ಕರ್ನಾಟಕದಲ್ಲಿ ಇನ್ನೂ ಏಳು ಮಳೆ ಮಾಪಕಗಳನ್ನು ಸ್ಥಾಪಿಸುವ ಕೆಲಸವೂ ನಡೆಯುತ್ತಿದೆ. ದೇಶಾದ್ಯಂತ ಇಂತಹ 400 ಮಳೆ ಮಾಪಕಗಳನ್ನು ಸ್ಥಾಪಿಸುವುದು ಯೋಜನೆಯ ಭಾಗವಾಗಿದೆ.