ಮಗನ ಹತ್ಯೆ ಪ್ರಕರಣದ ಆರೋಪಿ ಸುಚನ ಸೇಠ್ 
ರಾಜ್ಯ

4 ವರ್ಷದ ಮಗನ ಹತ್ಯೆ ಪ್ರಕರಣ: ಸುಚನಾ ಸೇಠ್ ಮಾನಸಿಕ ಆರೋಗ್ಯ ಉತ್ತಮವಾಗಿದೆ; 2ನೇ ವರದಿಯಲ್ಲೂ ವೈದ್ಯರ ಪುನರುಚ್ಛಾರ

4 ವರ್ಷದ ತನ್ನ ಮಗನನ್ನು ಹತ್ಯೆಗೈದು ಸೆರೆವಾಸದಲ್ಲಿರುವ ಬೆಂಗಳೂರು ಮೂಲದ ಖಾಸಗಿ ಸಂಸ್ಥೆಯ ಸಿಇಒ ಸುಚನಾ ಸೇಠ್ ಅವರ ಮಾನಸಿಕ ಆರೋಗ್ಯ ಉತ್ತಮವಾಗಿದೆ ಎಂದು 2ನೇ ವೈದ್ಯಕೀಯ ವರದಿಯಿಂದ ತಿಳಿದುಬಂದಿದೆ.

ಬೆಳಗಾವಿ: 4 ವರ್ಷದ ತನ್ನ ಮಗನನ್ನು ಹತ್ಯೆಗೈದು ಸೆರೆವಾಸದಲ್ಲಿರುವ ಬೆಂಗಳೂರು ಮೂಲದ ಖಾಸಗಿ ಸಂಸ್ಥೆಯ ಸಿಇಒ ಸುಚನಾ ಸೇಠ್ ಅವರ ಮಾನಸಿಕ ಆರೋಗ್ಯ ಉತ್ತಮವಾಗಿದೆ ಎಂದು 2ನೇ ವೈದ್ಯಕೀಯ ವರದಿಯಿಂದ ತಿಳಿದುಬಂದಿದೆ.

ಮಾನಸಿಕ ಆರೋಗ್ಯ ಪ್ರಾಧಿಕಾರವು ಸುಚನಾ ಅವರ ಮಾನಸಿಕ ಆರೋಗ್ಯವನ್ನು ಮರು ಮೌಲ್ಯಮಾಪನ ಮಾಡಬೇಕೆಂದು ಸುಚನಾ ಸೇಠ್ ಅವರ ತಂದೆ ಒತ್ತಾಯಿಸಿದ್ದರು, ಬಾಂಬೋಲಿಮ್‌ನಲ್ಲಿರುವ ಇನ್‌ಸ್ಟಿಟ್ಯೂಟ್ ಆಫ್ ಸೈಕಿಯಾಟ್ರಿ ಅಂಡ್ ಹ್ಯೂಮನ್ ಬಿಹೇವಿಯರ್ (IPHB) ನ ಸಂಶೋಧನೆಗಳನ್ನು ವಿರೋಧಿಸಿ ಸುಚನಾ ಅವರ ತಂದೆ ಫೆಬ್ರವರಿ ತಿಂಗಳಿನಲ್ಲಿ ಅರ್ಜಿಯನ್ನು ಸಲ್ಲಿಸಿದರು. ಈ ಮನವಿಯನ್ನು ಗೋವಾದ ಮಕ್ಕಳ ನ್ಯಾಯಾಲಯವು ಮಾರ್ಚ್‌ನಲ್ಲಿ ಅಂಗೀಕರಿಸಿತ್ತು. ಇದೀಗ 2ನೇ ವೈದ್ಯಕೀಯ ವರದಿಯೂ ಸುಚನಾ ಅವರಪ ಮಾನಸಿಕ ಆರೋಗ್ಯ ಉತ್ತಮವಾಗಿದೆ ಎಂದು ತಿಳಿಸಿದೆ.

ಈ ನಡುವೆ ಮಗುವಿನ ಮೃತದೇಹ ಇರಿಸಿದ್ದ ಸೂಟ್ ಕೇಸ್ ನಲ್ಲಿ ಪತ್ತೆಯಾದ ಟಿಶ್ಯೂ ಪೇಪರ್ ನಲ್ಲಿದ್ದ ಬರಹವನ್ನು ಸುಚನಾ ಸೇಠ್ ಅವರೇ ಬರೆದಿದ್ದರು ಎನ್ನಲಾಗಿದ್ದು, ಈ ಪೇಪರ್ ನ್ನು ಪುಣೆಯ ಕೇಂದ್ರೀಯ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಟಿಶ್ಯೂ ಪೇಪರ್ ನಲ್ಲಿದ್ದ ಬರಹಗಳು ಸುಚನಾ ಅವರು ತಮ್ಮ ಪತಿಯ ವಿರುದ್ಧ ಆಕ್ರೋಶ ಹೊರಹಾಕಿರುವುದು ಕಂಡು ಬದಿದೆ. ತಮ್ಮ ಮಾಜಿ ಪತಿ ವೆಂಕಟ್ ರಾಮನ್ ಅವರು ಮಗುವನ್ನು ಭೇಟಿ ಮಾಡುವುದು ತಮಗಿಷ್ಟವಿಲ್ಲ. ಮಗು ಕೂಡ ತಂದೆ ಜೊತೆಗೆ ಕಳುಹಿಸದಂತೆ ಮನವಿ ಮಾಡಿಕೊಳ್ಳುತ್ತಿತ್ತು. ಮಗುವನ್ನು ಕಳುಹಿಸದಿದ್ದರೆ, ನನ್ನ ಮಾಜಿ ಪತಿ ಹಾಗೂ ಕೌಟುಂಬಿಕ ನ್ಯಾಯಾಲಯದ ನ್ಯಾಯಾಶೀಘರು ನನಗೆ ಜೈಲು ಶಿಕ್ಷೆ ವಿಧಿಸುವ ಬೆದರಿಕೆ ಹಾಕುತ್ತಿದ್ದಾರೆಂದೂ ಸುಚನಾ ಬರಹದ ಮೂಲಕ ಹೇಳಿಕೊಂಡಿರುವುದು ಕಂಡು ಬಂದಿತ್ತು.

ಬೆಂಗಳೂರು ಮೂಲದ ಮೈಂಡ್‌ಫುಲ್‌ ಎ.ಐ ಲ್ಯಾಬ್‌ ಹೆಸರಿನ ಖಾಸಗಿ ಕಂಪನಿಯ ಸಿಇಒ 39 ವರ್ಷ ವಯಸ್ಸಿನ ಸುಚನಾ ಸೇಠ್‌ ಜನವರಿ 6ರಂದು ಗೋವಾದ ಹೋಟೆಲ್ ಒಂದರಲ್ಲಿ ತಮ್ಮ 4 ವರ್ಷದ ಮಗು ಚಿನ್ಮಯ್‌ನನ್ನು ಹತ್ಯೆ ಮಾಡಿದ್ದಳು. ಬಳಿಕ ಮೃತದೇಹವನ್ನು ಸೂಟ್‌ಕೇಸ್‌ಗೆ ತುಂಬಿ ಕಾರಿನಲ್ಲಿ ಗೋವಾದಿಂದ ಬೆಂಗಳೂರಿನತ್ತ ಸಾಗಿಸುತ್ತಿದ್ದ ವೇಳೆ ಗೋವಾ ಪೊಲೀಸರ ಸೂಚನೆಯ ಮೇರೆಗೆ ಚಿತ್ರದುರ್ಗದ ಐಮಂಗಲ ಠಾಣೆಯ ಪೊಲೀಸರು ಬಂಧಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT