ಶಾಲಿನಿ ರಜನೀಶ್ ಮತ್ತು ಎಲ್ ಕೆ ಅತೀಖ್ 
ರಾಜ್ಯ

ರಾಜ್ಯದ ಮುಂದಿನ ಮುಖ್ಯ ಕಾರ್ಯದರ್ಶಿ ಯಾರು?: ಜೇಷ್ಠತೆ ಆಧಾರವೋ? ಸಿಎಂ ಆಪ್ತರಿಗೆ ಮಣೆಯೋ?

ಪಟ್ಟಿಯಲ್ಲಿ ಐವರು ಅಧಿಕಾರಿಗಳಿದ್ದಾರೆ, ಅವರಲ್ಲಿ ಹಿರಿಯರೆಂದರೆ ಗೋಯೆಲ್ ಅವರ ಪತ್ನಿ ಶಾಲಿನಿ ರಜನೀಶ್ ಅವರು ಜುಲೈ 2027 ರಲ್ಲಿ ನಿವೃತ್ತರಾಗುತ್ತಾರೆ ಮತ್ತು ಎರಡನೇ ಸಾಲಿನಲ್ಲಿ ಗೌರವ್ ಗುಪ್ತಾ ಅವರು ಜೂನ್ 2027 ರಲ್ಲಿ ನಿವೃತ್ತರಾಗುತ್ತಾರೆ.

ಬೆಂಗಳೂರು: ರಾಜ್ಯ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯೆಲ್‌ ಅವರ ಅಧಿಕಾರಾವಧಿ ಜುಲೈ 31ಕ್ಕೆ ಮುಕ್ತಾಯವಾಗಲಿದ್ದು, ನೂತನ ಕಾರ್ಯದರ್ಶಿ ಯಾರು ಎಂಬ ಚರ್ಚೆ ಶುರುವಾಗಿದೆ. ಪಟ್ಟಿಯಲ್ಲಿ ಐವರು ಅಧಿಕಾರಿಗಳಿದ್ದಾರೆ, ಅವರಲ್ಲಿ ಹಿರಿಯರೆಂದರೆ ಗೋಯೆಲ್ ಅವರ ಪತ್ನಿ ಶಾಲಿನಿ ರಜನೀಶ್ ಅವರು ಜುಲೈ 2027 ರಲ್ಲಿ ನಿವೃತ್ತರಾಗುತ್ತಾರೆ ಮತ್ತು ಎರಡನೇ ಸಾಲಿನಲ್ಲಿ ಗೌರವ್ ಗುಪ್ತಾ ಅವರು ಜೂನ್ 2027 ರಲ್ಲಿ ನಿವೃತ್ತರಾಗುತ್ತಾರೆ. ಇಬ್ಬರ ಪೈಕಿ ಶಾಲಿನಿ ರಜನೀಶ್‌ ಮುಖ್ಯ ಕಾರ್ಯದರ್ಶಿ ಹುದ್ದೆ ಅಲಂಕರಿಸುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗಿದೆ.

ಮೂರನೆಯವರಾಗಿ ಎಲ್.ಕೆ.ಅತೀಕ್, ಕಳೆದ ಒಂದು ವರ್ಷದಿಂದ ಮುಖ್ಯಮಂತ್ರಿ ಕಾರ್ಯಾಲಯದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಹಿಂದಿನ 2013-18ರ ಅವಧಿಯಲ್ಲಿ ಸಿದ್ದರಾಮಯ್ಯ ಅವರ ಪ್ರಧಾನ ಕಾರ್ಯದರ್ಶಿಯಾಗಿ ನಿಕಟವಾಗಿ ಕೆಲಸ ಮಾಡಿದ್ದಾರೆ ಮತ್ತು ಅವರಿಗೆ ಆಪ್ತರು ಎಂದು ಹೇಳಲಾಗುತ್ತದೆ.

1991ರ ಬ್ಯಾಚ್‌ನ ಅಧಿಕಾರಿಯಾಗಿರುವ ಅತೀಕ್ 2025ರ ಜನವರಿಯಲ್ಲಿ ನಿವೃತ್ತರಾಗಲಿದ್ದಾರೆ. ಸಿಎಂ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಆಗಿನ ಪ್ರಧಾನ ಕಾರ್ಯದರ್ಶಿ ಐಎಸ್‌ಎನ್ ಪ್ರಸಾದ್ ಅವರನ್ನು ಪರಿಗಣಿಸಲಾಗಿತ್ತು. ಆದರೆ ಕೊನೆಯ ಗಳಿಗೆಯಲ್ಲಿ ಅತೀಕ್ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಯಿತು, ಅತೀಕ್ Black horse ಆಗಿ ಹೊರಹೊಮ್ಮಿದ್ದನ್ನು ಸ್ಮರಿಸಬಹುದು.

ಕೆಲವು ತಿಂಗಳುಗಳ ಹಿಂದೆ ಕೆಲವು ನಾಯಕರು ಅತೀಕ್ ಅವರ ಹೆಸರನ್ನು ಮುಖ್ಯ ಕಾರ್ಯದರ್ಶಿ ಹುದ್ದೆಗೆ ಸೂಚಿಸಿದ್ದರು. ಇತ್ತೀಚೆಗೆ ಸಿದ್ದರಾಮಯ್ಯ ಅವರೊಂದಿಗೆ ಮತ್ತೆ ಈ ಸಂಬಂಧ ಚರ್ಚೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ನಾಗರಿಕ ಸೇವಾ ಅಧಿಕಾರಿಗಳ ಜೇಷ್ಠತಾ ಪಟ್ಟಿಯ ಪ್ರಕಾರ, ಅತೀಕ್ ಅವರು ಸಿಎಸ್ ಆಗಿ ನೇಮಕವಾದರೆ, ಅವರು ಮುಂದಿನ ವರ್ಷ ಜನವರಿಯಲ್ಲಿ ನಿವೃತ್ತರಾಗುವವರೆಗೆ ಏಳು ತಿಂಗಳ ಕಾಲ ಹುದ್ದೆಯಲ್ಲಿ ಇರುತ್ತಾರೆ.

ಅದರ ನಂತರ, ಕೆಲವು ರಾಜ್ಯಗಳು ಅಧಿಕಾರವಧಿ ವಿಸ್ತರಣೆ ಸಂಪ್ರದಾಯವನ್ನು ಹೊಂದಿರುವುದರಿಂದ ಅವರ ಅಧಿಕಾರವಧಿಯನ್ನು ವಿಸ್ತರಣೆಗೆ ಪರಿಗಣಿಸಬಹುದು. ಅತೀಕ್ ಅವರನ್ನು ಈ ಹುದ್ದೆಗೆ ಪರಿಗಣಿಸಿದರೆ, ಶಾಲಿನಿ ರಜನೀಶ್ ಮತ್ತು ಗೌರವ್ ಗುಪ್ತಾ ಸೇರಿದಂತೆ ಅನೇಕ ಹಿರಿಯರನ್ನು ಅವರು ಹಿಂದಿಕ್ಕಲಿದ್ದಾರೆ. ಶಾಲಿನಿ ರಜನೀಶ್ ಅವರ ಬ್ಯಾಚ್ ಜೂನಿಯರ್. ಅತೀಕ್ ಅವರಿಗೆ ಪೈಪೋಟ ನೀಡಲು ಅಜಯ್ ಸೇಠ್ ಮತ್ತು ಅತುಲ್ ತಿವಾರಿ ಇದ್ದಾರೆ, ಅವರು ಕೇಂದ್ರ ಹಣಕಾಸು ಕಾರ್ಯದರ್ಶಿ ಮತ್ತು ದೊಡ್ಡ ಪೋರ್ಟ್ಫೋಲಿಯೊವನ್ನು ನಿರ್ವಹಿಸುತ್ತಿದ್ದಾರೆ. ಅತುಲ್ ತಿವಾರಿ ಅವರು ಕೇಂದ್ರ ನಿಯೋಜನೆಯಲ್ಲಿದ್ದಾರೆ ಮತ್ತು ಇದೀಗ ಕರ್ನಾಟಕಕ್ಕೆ ಸ್ಥಳಾಂತರಗೊಳ್ಳಲು ನಿರಾಕರಿಸುವ ಸಾಧ್ಯತೆಯಿದೆ.

ಸದ್ಯ ಎಲ್ಲರ ಕಣ್ಣು ಸಿಎಂ ಮೇಲೆ ನೆಟ್ಟಿದ್ದು, ಇನ್ನೆರಡು ದಿನದಲ್ಲಿ ಮುಖ್ಯ ಕಾರ್ಯದರ್ಶಿ ಆಯ್ಕೆ ಹೊರಬೀಳುವ ನಿರೀಕ್ಷೆ ಇದೆ. ಮುಖ್ಯಮಂತ್ರಿಗಳು ಹಿರಿತನಕ್ಕೆ ಕಟ್ಟು ಬಿದ್ದರೆ ಅವರು ಶಾಲಿನಿ ರಜನೀಶ್ ಅವರನ್ನು ಆಯ್ಕೆ ಮಾಡಬಹುದು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

2nd test, Day 2: 518 ರನ್ ಗಳಿಗೆ ಭಾರತ ಇನ್ನಿಂಗ್ಸ್ ಡಿಕ್ಲೇರ್!

CM ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ: ಸುದ್ದಿ ತಿರುಚಿ ಪ್ರಸಾರ ಮಾಡಿದರೆ ಮಾನನಷ್ಟ ಮೊಕದ್ದಮೆ ಅನಿವಾರ್ಯ; ಡಿ ಕೆ ಶಿವಕುಮಾರ್

2nd test, Day 2: 2ನೇ ದಿನದಾಟದ ಆರಂಭದಲ್ಲೇ ಭಾರತಕ್ಕೆ ಆಘಾತ, ಭೋಜನ ವಿರಾಮದ ವೇಳೆಗೆ 427/4

SCROLL FOR NEXT