ಸಾಂದರ್ಭಿಕ ಚಿತ್ರ 
ರಾಜ್ಯ

ಭುವನೇಶ್ವರಿ ಪ್ರತಿಮೆ ಸ್ಥಾಪನೆ, ಔಟರ್ ರಿಂಗ್ ರೋಡ್ ಒಳಗೊಂಡ ಮೆಟ್ರೋ 3ನೇ ಹಂತಕ್ಕೆ ಸಚಿವ ಸಂಪುಟ ಅಸ್ತು

ಬೆಂಗಳೂರಿನಲ್ಲಿ ಔಟರ್ ರಿಂಗ್ ರೋಡ್ ಒಳಗೊಂಡ ಮೆಟ್ರೋ 3ನೇ ಹಂತದ ಮಾರ್ಗಕ್ಕೆ ಅಗತ್ಯವಾದ ಮೂಲಸೌಕರ್ಯಗಳನ್ನು ಒದಗಿಸಲು ಗುರುವಾರ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ಬೆಂಗಳೂರು: ಬೆಂಗಳೂರಿನಲ್ಲಿ ಔಟರ್ ರಿಂಗ್ ರೋಡ್ ಒಳಗೊಂಡ ಮೆಟ್ರೋ 3ನೇ ಹಂತದ ಮಾರ್ಗಕ್ಕೆ ಅಗತ್ಯವಾದ ಮೂಲಸೌಕರ್ಯಗಳನ್ನು ಒದಗಿಸಲು ಗುರುವಾರ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ಇಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆ ನಂತರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕಂದಾಯ‌ ಸಚಿವ ಕೃಷ್ಣಬೈರೇಗೌಡ ಅವರು, ಮೆಟ್ರೋ 3ನೇ ಹಂತದಲ್ಲಿ 44.65 ಕಿ.ಮೀ ಮಾರ್ಗವನ್ನು 15,611 ಕೋಟಿ ರೂ.ವೆಚ್ಚದಲ್ಲಿ‌ ಕೈಗೆತ್ತುಕೊಳ್ಳಲು‌ ಸಂಪುಟ ಒಪ್ಪಿಗೆ ನೀಡಿದೆ ಮತ್ತು 2028 ರ ವೇಳೆಗೆ ಕಾಮಗಾರಿ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

ಈ ಯೋಜನೆಯು ಸಂಪೂರ್ಣ ಹೊರ ವರ್ತುಲ ರಸ್ತೆಯನ್ನು (ಒಆರ್ಆರ್) ಒಳಗೊಳ್ಳಲಿದೆ. ಹೆಬ್ಬಾಳದಿಂದ ಜೆ.ಪಿ.ನಗರದವರೆಗೆ 32.15 ಕಿ.ಮೀ. ಉದ್ದದ ಮೆಟ್ರೊ ರೈಲು ಮಾರ್ಗ ಮೊದಲು ನಿರ್ಮಾಣವಾಗಲಿದ್ದು, ನಂತರ ಎರಡನೇ ಮಾರ್ಗ ಗೊರಗುಂಟೆಪಾಳ್ಯ, ಮಾಗಡಿ ರಸ್ತೆ, ಮೈಸೂರು ರಸ್ತೆ ಮೂಲಕ ಹಾದು ಜೆಪಿ ನಗರವನ್ನು ತಲುಪಲಿದೆ ಎಂದು ಸಚಿವರು ತಿಳಿಸಿದ್ದಾರೆ.

ಹಂತ-3ರಲ್ಲಿ ವಿಜಯನಗರದ ಹೊಸಹಳ್ಳಿ, ಹೊಸಹಳ್ಳಿಯಿಂದ ಮಾಗಡಿ ಮೂಲಕ ಕಡಬಗೆರೆವರೆಗೆ ಹಾಗೂ ಜೆಪಿ ನಗರದಿಂದ ಸಿಲ್ಕ್ ಬೋರ್ಡ್, ಸಿಲ್ಕ್ ಬೋರ್ಡ್ ಕೆಆರ್ ಪುರಂ ಮತ್ತು ಕೆಆರ್ ಪುರಂನಿಂದ ಹೆಬ್ಬಾಳಕ್ಕೆ ಹಾದು ಹೋಗಲಿದೆ.

ಹೆಬ್ಬಾಳದಿಂದ ಮುಂದುವರಿದು ಡಾ.ರಾಜ್‌ಕುಮಾರ್‌ ಸ್ಮಾರಕದ ಬಳಿಯಿಂದ ತುಮಕೂರು ರಸ್ತೆ ದಾಟಿ ಮಾಗಡಿ ರಸ್ತೆ, ಮೈಸೂರು ರಸ್ತೆ, ಕನಕಪುರ ರಸ್ತೆ ಮೂಲಕ ಜೆಪಿ ನಗರ ಸೇರಲಿದೆ. ಇದು ಸಂಪೂರ್ಣ ಹೊರ ವರ್ತುಲ ರಸ್ತೆಯನ್ನು ಆವರಿಸಲಿದೆ ಎಂದು ಕೃಷ್ಣ ಬೈರೇಗೌಡ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಇನ್ನು ವಿಧಾನಸೌಧದ ಆವರಣದಲ್ಲಿ 23 ಕೋಟಿ‌ ರೂ. ವೆಚ್ಚದಲ್ಲಿ‌ ಭುವನೇಶ್ವರಿ ಪ್ರತಿಮೆ ಸ್ಥಾಪನೆ ಮಾಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಕಲ್ಯಾಣ ಕರ್ನಾಟಕದಲ್ಲಿ 33 ಪ್ರಾಥಮಿಕ ಆರೋಗ್ಯ ಕೇಂದ್ರ ಆರಂಭಿಸಲು, ಕಡಬ ವೆಟರ್ನರಿ‌ ಕಾಲೇಜಿನ ಅಭಿವೃದ್ದಿಗೆ 163 ಕೋಟಿ ರೂ., ಮೈಸೂರಿನಲ್ಲಿ ಮಹಾರಾಣಿ ಕಾಲೇಜು ಹೊಸ ಹಾಸ್ಟೆಲ್​ ನಿರ್ಮಾಣಕ್ಕೆ 170 ಕೋಟಿ ರೂ. ಪ್ರಸ್ತಾವನೆಗೆ ಸಂಪುಟ ಒಪ್ಪಿಗೆ ನೀಡಿದೆ ಎಂದರು.

ಬೆಳೆ ಸಂರಕ್ಷಣೆಗೆ 67 ಕೋಟಿ‌ ರೂ. ವೆಚ್ಚದಲ್ಲಿ ಬಯೋಟೆಕ್ ಅಭಿವೃದ್ಧಿಗೆ ಅಗ್ರಿ‌ ಇನ್ನೊವೇಷನ್ ಸೆಂಟರ್ ಮಾಡಲು‌ ತೀರ್ಮಾನ ಮಾಡಲಾಗಿದೆ. PSI ನೇಮಕಾತಿ ಹಗರಣ ಸಂಬಂಧ ಬಿ.ವೀರಪ್ಪ ಸಮಿತಿ ವರದಿ ಸಲ್ಲಿಕೆ ಮಾಡಿದೆ. ಸರ್ಕಾರಿ, ಖಾಸಗಿ ವ್ಯಕ್ತಿಗಳು ಸೇರಿ 113 ಜನ ಭಾಗಿ ಎಂದು ವರದಿ ನೀಡಲಾಗಿದೆ. ಪ್ರಕರಣ ಸಂಬಂಧ ಎಸ್​ಐಟಿ ರಚಿಸಬೇಕೆಂದು ವೀರಪ್ಪ ಹೇಳಿದ್ದಾರೆ. ಹೆಚ್ಚುವರಿ ತನಿಖೆಗಾಗಿ ಎಸ್​ಐಟಿ‌ ರಚಿಸಲು ತೀರ್ಮಾನ ಮಾಡಿದ್ದೇವೆ ಎಂದು ಸಚಿವರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

Indian Stock Market: ಸತತ ಕುಸಿತ, ಬರೊಬ್ಬರಿ ಶೇ.1ರಷ್ಟು ಕುಸಿದ Sensex, Nifty 50, ರೂಪಾಯಿ ಮೌಲ್ಯ ಇಳಿಕೆ!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

Indian Navy ಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ! Video

SCROLL FOR NEXT