ಕಂದಾಯ ಸಚಿವ ಕೃಷ್ಣ ಬೈರೇಗೌಡ
ಕಂದಾಯ ಸಚಿವ ಕೃಷ್ಣ ಬೈರೇಗೌಡ 
ರಾಜ್ಯ

ಶ್ರೀಲಂಕಾ ತಮಿಳರನ್ನೇಕೆ ಸಿಎಎ ಕಾಯ್ದೆಯಿಂದ ಹೊರಗಿಡಲಾಗಿದೆ: ಕೇಂದ್ರಕ್ಕೆ ಕೃಷ್ಣ ಬೈರೇಗೌಡ ಪ್ರಶ್ನೆ

Manjula VN

ಬೆಂಗಳೂರು: ಶ್ರೀಲಂಕಾ ತಮಿಳರನ್ನೇ ಕೇಂದ್ರದ ಪೌರತ್ವ ತಿದ್ದುಪಡಿ ಕಾಯ್ದೆಯಿಂದ ದೂರ ಇಡಲಾಗಿದೆ ಕೇಂದ್ರ ಸರ್ಕಾರಕ್ಕೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಪ್ರಶ್ನಿಸಿದ್ದಾರೆ.

ಸಚಿವ ಸಂಪುಟ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೆರೆಯ ದೇಶಗಳಿಂದ ಬಂದವರಿಗೆ ಕಾಯ್ದೆಯಡಿ ಪೌರತ್ವ ನೀಡಲಾಗುತ್ತದೆ. ಆದರೆ, ಶ್ರೀಲಂಕಾವನ್ನು ಕಾಯ್ದೆಯಿಂದ ಹೊರಗಿಡಲಾಗಿದೆ. ವಾಸ್ತವವಾಗಿ ಎಲ್‌ಟಿಟಿಇ ಹಾಗೂ ಶ್ರೀಲಂಕಾ ನಡುವಿನ ಸಂಘರ್ಷದಲ್ಲಿ ಅಲ್ಲಿಗೆ ಹೊಟ್ಟೆಪಾಡಿಗಾಗಿ ಹೋಗಿದ್ದ ತಮಿಳರು ಸಂತ್ರಸ್ತರಾಗಿದ್ದರು. ಸಂಘರ್ಷದಿಂದ ವಾಪಸ್ಸು ತಮಿಳುನಾಡು, ಕರ್ನಾಟಕ ಸೇರಿದಂತೆ ಹಲವು ಕಡೆ ಬಂದು ನೆಲೆಸಿರುವ ತಮಿಳು ಹಿಂದೂಗಳಿಗೆ ಈ ಕಾಯ್ದೆಯಿಂದ ಯಾವುದೇ ನೆರವಾಗುವುದಿಲ್ಲ. ನನ್ನ ಪ್ರಕಾರ ಎಲ್ಲಾ ರೀತಿಯಲ್ಲೂ ಅತಿ ಹೆಚ್ಚು ಶೋಷಣೆಗೆ ಒಳಗಾದವರು ಅವರು. ಕೇಂದ್ರ ಸರ್ಕಾರ ತಮಿಳು ಹಿಂದೂಗಳನ್ನು ಇದರಿಂದ ಹೊರಗಿಟ್ಟಿದೆ ಏಕೆ?" ಎಂದು ಪ್ರಶ್ನಿಸಿದರು.

ಎಲ್‌ಟಿಟಿಇ ಉಗ್ರರಿಗಾಗಲಿ ಅಥವಾ ಶ್ರೀಲಂಕಾಗೆ ಆಗಲಿ ನನ್ನ ಬೆಂಬಲ ಇಲ್ಲ. ಆದರೆ, ಇವರ ಸಂಘರ್ಷದಲ್ಲಿ ಯಾವುದೇ ತಪ್ಪಿಲ್ಲದ ಅಮಾಯಕರು ಬಲಿಯಾಗಿದ್ದಾರೆ. ಮನೆ ಮಠ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಅವರೆಲ್ಲರೂ ಕೆಲಸಕ್ಕಾಗಿ ಶ್ರೀಲಂಕಾಗೆ ಹೋಗಿದ್ದವರು. ಇದೀಗ ಅಲ್ಲಿ ನೆಲೆ ಕಳೆದುಕೊಂಡು ವಾಪಸ್ಸು ಬಂದಿರುವ, ಅನಧಿಕೃತವಾಗಿ ನೆಲೆಸಿರುವ ಹಿಂದೂ ತಮಿಳರಿಗೆ ಈ ಪೌರತ್ವ ತಿದ್ದುಪಡಿ ಕಾಯ್ದೆ ನೆರವಾಗುವುದಿಲ್ಲ" ಎಂದು ಹೇಳಿದರು.

SCROLL FOR NEXT