ಎಚ್.ಡಿ ದೇವೇಗೌಡ 
ರಾಜ್ಯ

ಚುನಾವಣಾ ಬಾಂಡ್​: ಹೈದರಾಬಾದ್ ಮೂಲದ ಕಂಪನಿಯಿಂದ ಜೆಡಿಎಸ್​ಗೆ ಕೋಟ್ಯಾಂತರ ರೂ. ದೇಣಿಗೆ!

ಜಾತ್ಯತೀತ ಜನತಾ ದಳ ಕೂಡ ತಮಗೆ ಒಟ್ಟು 89.75 ಕೋಟಿ ದೇಣಿ ಬಂದಿರುವ ಬಗ್ಗೆ ಘೋಷಿಸಿದೆ. ಮಾರ್ಚ್ 20, 2018 ರಿಂದ ಸೆಪ್ಟೆಂಬರ್ 30, 2023 ರವರೆಗೆ ಕಂಪನಿಗಳಿಂದ ಪಡೆದ ಹಣದ ಕುರಿತು ವಿವರ ನೀಡಿದೆ.

ಬೆಂಗಳೂರು: ಚುನಾವಣಾ ಬಾಂಡ್​ಗಳಿಗೆ ಸಂಬಂಧಿಸಿದಂತೆ ಭಾರತೀಯ ಚುನಾವಣಾ ಆಯೋಗವು ಭಾನುವಾರ ಹೊಸ ವಿವರಗಳನ್ನು ಪ್ರಕಟಿಸಿದೆ. ಮುಚ್ಚಿದ ಲಕೋಟೆಯಲ್ಲಿ ರಾಜಕೀಯ ಪಕ್ಷಗಳು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಚುನಾವಣಾ ಬಾಂಡ್ ಮಾಹಿತಿ ಇದಾಗಿದೆ.

ಈಗಾಗಲೇ ಹಲವು ಪಕ್ಷಗಳು ತಮ್ಮ ಚುನಾವಣಾ ಬಾಂಡ್ ದಾನಿಗಳ ಗುರುತನ್ನು ಬಹಿರಂಗಪಡಿಸಿವೆ. ಇದರ ಜೊತೆಗೆ ಜಾತ್ಯತೀತ ಜನತಾ ದಳ ಕೂಡ ತಮಗೆ ಒಟ್ಟು 89.75 ಕೋಟಿ ದೇಣಿ ಬಂದಿರುವ ಬಗ್ಗೆ ಘೋಷಿಸಿದೆ. ಮಾರ್ಚ್ 20, 2018 ರಿಂದ ಸೆಪ್ಟೆಂಬರ್ 30, 2023 ರವರೆಗೆ ಕಂಪನಿಗಳಿಂದ ಪಡೆದ ಹಣದ ಕುರಿತು ವಿವರ ನೀಡಿದೆ.

ಈ ದಾನಿಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಇರೋದು ಹೈದರಾಬಾದ್ ಮೂಲದ ಕಂಪನಿ. ಜೆಡಿಎಸ್‌ಗೆ ಹೈದರಾಬಾದ್ ಮೂಲದ ಮೇಘಾ ಇಂಜಿನಿಯರಿಂಗ್ ಮತ್ತು ಇನ್ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್ ಒಂದೇ ಕಂಪನಿ ಅದರ ಒಟ್ಟು 89.75 ಕೋಟಿ ದೇಣಿಗೆಯ ಅರ್ಧಕ್ಕಿಂತ ಹೆಚ್ಚು ನೀಡಿದೆ.

ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಎಚ್‌ಡಿ ದೇವೇಗೌಡ ಅವರು ಭಾರತದ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ವಿವರಗಳ ಪ್ರಕಾರ, ಮೇಘಾ ಇಂಜಿನಿಯರಿಂಗ್ ಮತ್ತು ಇನ್ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್ (MEIL) ನಿಂದ 50 ಕೋಟಿ ರೂಪಾಯಿ ಎಲೆಕ್ಟೋರಲ್ ಬಾಂಡ್ ದೇಣಿಗೆ ಸಂಗ್ರಹಿಸಲಾಗಿದೆ ಎಂದಿದೆ. ಕೃಷ್ಣಾ ರೆಡ್ಡಿ ನಡೆಸುತ್ತಿರುವ, ಎಂಇಐಎಲ್ ಕಂಪನಿ ತೆಲಂಗಾಣ ಸರ್ಕಾರದ ಮಾರ್ಕ್ಯೂ ಯೋಜನೆಗಳಾದ ಕಾಳೇಶ್ವರಂ ಅಣೆಕಟ್ಟು ಯೋಜನೆಗಳಲ್ಲಿ ತೊಡಗಿಸಿಕೊಂಡಿದೆ.

ಹೆಚ್ ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ 2019 ರ ಮಾರ್ಚ್ 19 ರಂದು ಮೇಘಾ ಕನ್ಸ್ಟ್ರಕ್ಷನ್ಸ್ 10 ಕೋಟಿ ರೂ. ನೀಡಿದೆ. ಅದೇ ಕಂಪನಿ 2023 ರ ಏಪ್ರಿಲ್ 18 ರಂದು ಕರ್ನಾಟಕದಲ್ಲಿ ಅಸೆಂಬ್ಲಿ ಚುನಾವಣೆಗೆ ಮುನ್ನ 40 ಕೋಟಿ ರೂಪಾಯಿಗಳನ್ನು ದೇಣಿಗೆ ನೀಡಿದೆ.

ರಾಯಭಾರ ಕಚೇರಿ ಡೆವಲಪರ್‌ಗಳು 2018 ರ ಅಸೆಂಬ್ಲಿ ಚುನಾವಣೆಯ ಮೊದಲು JD(S) ಗೆ 22 ಕೋಟಿ ರೂ.ಗಳನ್ನು ದೇಣಿಗೆ ನೀಡಿವೆ ಮತ್ತು ಮೇ 17, 2018 ರಂದು 10 ಕೋಟಿ ರೂ. ದೇಣಿಗೆಯನ್ನು ಕಂಪನಿ ನೀಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?