ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ Online desk
ರಾಜ್ಯ

ರಾಹುಲ್ ಗಾಂಧಿ 'ಶಕ್ತಿ' ಹೇಳಿಕೆ ವಿರುದ್ಧ ಪ್ರಧಾನಿ ವಾಗ್ದಾಳಿ; ರಾಜ್ಯದಲ್ಲಿ ಸೂಪರ್ ಸಿಎಂ ಗಳಿದ್ದಾರೆ- ಮೋದಿ ಟೀಕೆ

Srinivas Rao BV

ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರ ಬೃಹತ್ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ್ದು, ಶಕ್ತಿ ಕುರಿತ ರಾಹುಲ್ ಗಾಂಧಿ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಶಕ್ತಿಯನ್ನು ನಿರ್ನಮಾ ಮಾಡುವುದಕ್ಕಾಗಿ ಇಂಡಿ ಮೈತ್ರಿಕೂಟವನ್ನು ರಚಿಸಲಾಯಿತು ಎಂಬ ರಾಹುಲ್ ಗಾಂಧಿ ಹೇಳಿಕೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ಅವರು ಶಕ್ತಿಯನ್ನು ನಾಶ ಮಾಡಲು ಯತ್ನಿಸಿದರೆ, ನಮ್ಮದು ಶಕ್ತಿಯನ್ನು ಪೂಜಿಸುವ ಸಂಕಲ್ಪವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಭಾನುವಾರ ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಭಾರತ್ ಜೋಡೋ ನ್ಯಾಯ್ ಯಾತ್ರೆಯ ಮುಕ್ತಾಯದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ಮೋದಿ ವಿರುದ್ಧ ನಮ್ಮ ಹೋರಾಟವು ವೈಯಕ್ತಿಕ ಮಟ್ಟದಲ್ಲಿಲ್ಲ. ಮೋದಿ, ಶಕ್ತಿಗಾಗಿ (ಅಧಿಕಾರಕ್ಕಾಗಿ) ಇರುವ ಮುಸುಕು ಎಂದು ಹೇಳಿದ್ದರು.

ಮೋದಿ 56 ಇಂಚಿನ ಎದೆ ಇಲ್ಲದ ದುರ್ಬಲ ವ್ಯಕ್ತಿ ಎಂದು ರಾಹುಲ್ ಗಾಂಧಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದಕ್ಕೂ ತಿರುಗೇಟು ನೀಡಿರುವ ಪ್ರಧಾನಿ ಮೋದಿ, ಶಿವಾಜಿ ಪಾರ್ಕ್‌ನಿಂದ ಶಕ್ತಿಯನ್ನು ಹೊರಹಾಕುವ ಘೋಷಣೆಯನ್ನು ಕೇಳಿದಾಗ, ಅದು ಬಾಳ್ ಠಾಕ್ರೆ ಅವರ ಆತ್ಮಕ್ಕೆ ಎಷ್ಟು ನೋವುಂಟು ಮಾಡುತ್ತದೆ ಎಂದು ನಾನು ಯೋಚಿಸಿದೆ.

ಪ್ರತಿ ಮಗು ಜೈ ಭವಾನಿ, ಜೈ ಶಿವಾಜಿ ಎಂಬ ಮಂತ್ರದೊಂದಿಗೆ ಬೆಳೆಯುವ ಶಿವಾಜಿ ಪಾರ್ಕ್‌ನಲ್ಲಿ ಶಕ್ತಿ ನಿರ್ಮೂಲನೆಯ ಘೋಷಣೆಯನ್ನು ಮಾಡಲಾಗಿದೆ ಎಂದು ಪ್ರಧಾನಿ ಆರೋಪಿಸಿದ್ದಾರೆ.

SCROLL FOR NEXT