ವಾಹನ ತಪಾಸಣೆ ನಡೆಸುತ್ತಿರುವ ಅಧಿಕಾರಿಗಳು.
ವಾಹನ ತಪಾಸಣೆ ನಡೆಸುತ್ತಿರುವ ಅಧಿಕಾರಿಗಳು. 
ರಾಜ್ಯ

ನೀತಿ ಸಂಹಿತೆ ಜಾರಿ: ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆ ತೀವ್ರ, ಅಗತ್ಯ ದಾಖಲೆಗಳ ಇಟ್ಟುಕೊಳ್ಳುವಂತೆ ಚುನಾವಣಾ ಆಯೋಗ ಸೂಚನೆ

Manjula VN

ಬೆಂಗಳೂರು: ಲೋಕಸಭೆ ಚುನಾವಣೆಯ ನೀತಿ ಸಂಹಿತೆ ಜಾರಿಯಾಗಿದ್ದು, ಚೆಕ್ ಪೋಸ್ಟ್ ಗಳಲ್ಲ ತಪಾಸಣೆ ತೀವ್ರಗೊಂಡಿದೆ. ಈ ಹಿನ್ನೆಲೆಯಲ್ಲಿ ಸರಕು ಸಾಗಣೆ ಮಾಡುವವರು ಸೂಕ್ತ ಕಾನೂನು ದಾಖಲೆಗಳನ್ನು ಹೊಂದಿರಬೇಕು ಎಂದು ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಮಂಗಳವಾರ ಸೂಚನೆ ನೀಡಿದೆ.

ಸರಕು ವಾಹನ ತಪಾಸಣೆ ವೇಳೆ ಮಾಲೀಕರು ಅತವಾ ಸರುಕು ಸಾಗಣೆದಾರರು ಜಿಎಸ್'ಟಿಐಎನ್ ಬಿಲ್ ಮತ್ತು ಇತರೆ ದಾಖಲೆಗಳನ್ನು ಇಟ್ಚುಕೊಂಡಿರುವುದು ಅತ್ಯಗತ್ಯ. ಇದಲ್ಲದೆ ವಸ್ತುವನ್ನು ಖರೀದಿಸಿದ ಸ್ಥಳ, ಉದ್ದೇಶ ಸೇರಿದಂತೆ ಇತರೆ ದಾಖಲೆಗಳನ್ನು ಇಟ್ಟುಕೊಂಡಿರಬೇಕು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಾಣಿಜ್ಯ ಬಳಕೆಗೆ, ಇ-ವೇ ಬಿಲ್ ಕಡ್ಡಾಯವಾಗಿದೆ. ಇದು ವಾಣಿಜ್ಯ ತೆರಿಗೆ ಇಲಾಖೆಯಿಂದ ನೀಡಲಾಗುವ ಎಲೆಕ್ಟ್ರಾನಿಕ್ ಬಿಲ್ ಆಗಿದೆ. ಕೃಷಿ ಉತ್ಪನ್ನಗಳಿಗೆ, ಯಾವುದೇ ಇ-ವೇ ಬಿಲ್ ಅಗತ್ಯವಿಲ್ಲ, ಆದರೆ ಹಣಕಾಸಿನ ವಹಿವಾಟಿನ ವಿವರಗಳನ್ನು ಪ್ರಮಾಣೀಕರಿಸುವ ಇತರ ಕಾನೂನು ದಾಖಲೆಗಳನ್ನು ಹೊಂದಿರಬೇಕಾಗುತ್ತದೆ. ಅಂಗಡಿ ಅಥವಾ ಕಾರ್ಖಾನೆ ಇದ್ದರೆ, ಡೀಲರ್ ಗಳ ವಿವರಗಳು, ತಯಾರಕರ ವಿವರ, ಗುಣಮಟ್ಟ ಮತ್ತು ವಾಹನದ ವಿವರಗಳು, ಜಿಎಸ್'ಟಿ ಬಿಲ್ ಗಳ ಅಗತ್ಯವಿರುತ್ತದೆ ಎಂದು ಹೇಳಿದ್ದಾರೆ.

ಚುನಾವಣಾ ಭದ್ರತೆ ಮುಖ್ಯವಾಗಿದ್ದು, ಚುನಾವಣಾ ಕರ್ತವ್ಯದಲ್ಲಿರುವ ಸಿಬ್ಬಂದಿಗಳು ಪ್ರತಿ ಟ್ರಕ್ ಮತ್ತು ಸಾಗಣೆದಾರರು, ಸರಕು ಮತ್ತು ಇತರ ವಸ್ತುಗಳ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಪರವಾನಗಿ ಮತ್ತು ಸರಿಯಾದ ದಾಖಲೆಗಳಿಲ್ಲದ ಯಾವುದೇ ಲಾರಿ ಅಥವಾ ಸರಕುಗಳ ವಾಹನವನ್ನು ವಶಕ್ಕೆ ಪಡೆಯಲಾಗುವುದು ಎಂದು ತಿಳಿಸಿದ್ದಾರೆ.

ಮರಳು, ಕಲ್ಲುಗಳು, ಟೈಲ್ಸ್ ಮತ್ತು ಇತರ ನಿರ್ಮಾಣ ಸಾಮಗ್ರಿಗಳ ಸಾಗಣೆಯ ಸಂದರ್ಭದಲ್ಲಿ, ಐಎಲ್ ಸಂಖ್ಯೆಯನ್ನು ವಿವರಿಸುವ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ರಾಯಲ್ಟಿ ಪ್ರಮಾಣಪತ್ರವನ್ನು ಹೊಂದಿರುವುದು ಅತ್ಯಗತ್ಯ. ಇದರಲ್ಲಿ ಸ್ಥಳದ ವಿವರಗಳೊಂದಿಗೆ ವಸ್ತುಗಳ ಪ್ರಮಾಣ, ಪ್ರಯಾಣದ ಸಮಯವನ್ನು ಒಳಗೊಂಡಿರಬೇಕು ಎಂದು ಮತ್ತೊಬ್ಬ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

SCROLL FOR NEXT