ಜೀನ್ಸ್ ತಯಾರಿಕಾ ಘಟಕ
ಜೀನ್ಸ್ ತಯಾರಿಕಾ ಘಟಕ 
ರಾಜ್ಯ

ಬಳ್ಳಾರಿಯಲ್ಲಿ ನೀರಿನ ಸಮಸ್ಯೆ ತೀವ್ರ: ಸಂಕಷ್ಟದಲ್ಲಿ ಜೀನ್ಸ್ ಉದ್ಯಮ!

Shilpa D

ಬಳ್ಳಾರಿ: ಬಳ್ಳಾರಿಯ ಜೀನ್ಸ್ ಉದ್ಯಮಕ್ಕೂ ಕೂಡ ನೀರಿನ ಸಮಸ್ಯೆ ಎದುರಾಗಿದೆ. 100ಕ್ಕೂ ಹೆಚ್ಚು ಜೀನ್ಸ್ ತಯಾರಿಕಾ ಘಟಕಗಳನ್ನು ಹೊಂದಿರುವ ಜಿಲ್ಲೆಯ ಬೋರ್‌ವೆಲ್‌ಗಳು ಈಗಾಗಲೇ ತಾಪಮಾನವು ಗರಿಷ್ಠ ಮಟ್ಟಕ್ಕೆ ಏರಿರುವುದರಿಂದ ತೀವ್ರ ನೀರಿನ ಕೊರತೆಯನ್ನು ಎದುರಿಸುತ್ತಿದೆ.

ಬೇಸಿಗೆಯ ತಿಂಗಳುಗಳು ಉದ್ಯಮಗಳಿಗೆ ತಮ್ಮ ವ್ಯವಹಾರಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಕಠಿಣವಾಗಲಿವೆ, ಹೀಗಾಗಿ ಘಟಕಗಳು ಈಗ ನೀರಿನ ಟ್ಯಾಂಕರ್‌ಗಳನ್ನು ಅವಲಂಬಿಸಿವೆ, ಇದು ದೀರ್ಘಾವಧಿಯಲ್ಲಿ ಸುಲಭವಾದ ಆಯ್ಕೆಯಾಗಿರುವುದಿಲ್ಲ.

ನೀರಿನ ಸಮಸ್ಯೆ ಬಗೆಹರಿಸಲು ಪರ್ಯಾಯ ವ್ಯವಸ್ಥೆ ಮಾಡುವಂತೆ ಜೀನ್ಸ್ ಇಂಡಸ್ಟ್ರಿ ವೆಲ್ಫೇರ್ ಅಸೋಸಿಯೇಷನ್ ​​ಬಳ್ಳಾರಿ ಜಿಲ್ಲಾಡಳಿತಕ್ಕೆ ಮನವಿ ಮಾಡಿದೆ. ಗುಗ್ಗರಹಟ್ಟಿ, ಆಂಧ್ರಲ್ ಮತ್ತು ಏರ್‌ಪೋರ್ಟ್ ರಸ್ತೆಯಲ್ಲಿ ಅನೇಕ ಜೀನ್ಸ್ ಘಟಕಗಳು ನೆಲೆಗೊಂಡಿವೆ. ಕೈಗಾರಿಕಾ ಪ್ರದೇಶಕ್ಕೆ ಪೈಪ್‌ಲೈನ್‌ ಕಲ್ಪಿಸಬೇಕು ಎಂಬುದು ಘಟಕಗಳ ಮಾಲೀಕರ ಬಹುದಿನಗಳ ಬೇಡಿಕೆಯಾಗಿದೆ. ಮೀಸಲಾದ ಪೈಪ್‌ಲೈನ್‌ನೊಂದಿಗೆ ಜೀನ್ಸ್ ಅಪೆರೆಲ್ ಪಾರ್ಕ್ ಸ್ಥಾಪಿಸುವ ಭರವಸೆಯನ್ನು ಜಿಲ್ಲಾಡಳಿತ ನೀಡಿದೆ, ಆದರೆ ಇದುವರೆಗೆ ಯಾವುದೇ ಕಾರ್ಯಕ್ರಮ ಜಾರಿಯಾಗಿಲ್ಲ.

ವಿಶೇಷವಾಗಿ ಕಳೆದ 15 ದಿನಗಳಿಂದ ತಮ್ಮ ವ್ಯಾಪಾರದ ಮೇಲೆ ತೀವ್ರ ಪರಿಣಾಮ ಬೀರಿದೆ ಎನ್ನುತ್ತಾರೆ ಜೀನ್ಸ್ ತಯಾರಿಕಾ ಘಟಕದ ಮಾಲೀಕ ಪೊಲಕ್ಸ್ ಮಲ್ಲಿಕಾರ್ಜುನ್ ಅಳಲು ತೋಡಿಕೊಂಡಿದ್ದಾರೆ. ಬೇಸಿಗೆಯ ಆರಂಭಿಕ ದಿನಗಳಲ್ಲಿ ನಾವು ನೀರಿನ ಬಿಕ್ಕಟ್ಟನ್ನು ಎದುರಿಸುತ್ತಿರುವುದು ಇದು ಮೊದಲ ಬಾರಿಗೆ. ನಮ್ಮ ವ್ಯವಹಾರದಲ್ಲಿ, ತೊಳೆಯುವ ಘಟಕವು ಉತ್ಪಾದನಾ ಪ್ರಕ್ರಿಯೆಯ ಅವಿಭಾಜ್ಯ ಅಂಗವಾಗಿದೆ.

ಪ್ರತಿ ಉತ್ಪನ್ನವನ್ನು ವಾಷಿಂಗ್ ಯೂನಿಟ್‌ಗೆ ಹಾಕಿದಾಗ 40 ರಿಂದ 50 ಲೀಟರ್ ನೀರು ಬೇಕಾಗುತ್ತದೆ ಎಂದು ಅವರು ಹೇಳಿದರು. ಕಳೆದ 15 ದಿನಗಳಿಂದ, ಬೋರ್‌ವೆಲ್‌ಗಳಲ್ಲಿ ನೀರಿನ ಮಟ್ಟ ತೀವ್ರವಾಗಿ ಕುಸಿದಿದೆ ಮತ್ತು ಅನೇಕ ಬೋರ್‌ವೆಲ್‌ಗಳು ಸಂಪೂರ್ಣವಾಗಿ ಬತ್ತಿ ಹೋಗಿವೆ. ಬಳ್ಳಾರಿಯಲ್ಲಿ ಪ್ರತಿದಿನ 1,00,000 ಕ್ಕೂ ಹೆಚ್ಚು ಉತ್ಪನ್ನಗಳು ತಯಾರಾಗುತ್ತವೆ. ಪ್ರತಿ ಘಟಕಕ್ಕೆ 4,000 ರಿಂದ 5,000 ಲೀಟರ್ ನೀರು ಬೇಕಾಗುತ್ತದೆ, ಆದರೆ ಸದ್ಯದ ಪರಿಸ್ಥಿತಿಯಲ್ಲಿ ನೀರು ಪಡೆಯುವುದು ಸಾಕಷ್ಟು ಸಮಸ್ಯೆಯಾಗಿದೆ ಎಂದಿದ್ದಾರೆ.

ಹಗರಿ ನದಿಯಲ್ಲಿ ಸಾಕಷ್ಟು ನೀರು ಇದ್ದರೆ ಕೈಗಾರಿಕೆಗಳ ಸಮೀಪದಲ್ಲಿರುವ ಬೋರ್‌ವೆಲ್‌ಗಳು ರೀಚಾರ್ಜ್ ಆಗುತ್ತವೆ. ನೀರು ಟ್ಯಾಂಕರ್ ಪೂರೈಕೆ ಸಂಘದೊಂದಿಗೆ ಸಭೆ ಕರೆಯುವಂತೆ ಜಿಲ್ಲಾಡಳಿಕ್ಕೆ ಮನವಿ ಮಾಡಿರುವುದಾಗಿ ಮತ್ತೊಂದು ಜೀನ್ಸ್ ಘಟಕದ ಮಾಲೀಕರು ತಿಳಿಸಿದ್ದಾರೆ.

SCROLL FOR NEXT