ಆತ್ಮಹತ್ಯೆ ಮಾಡಿಕೊಂಡ ಧ್ರುವ್ ಟಕ್ಕರ್
ಆತ್ಮಹತ್ಯೆ ಮಾಡಿಕೊಂಡ ಧ್ರುವ್ ಟಕ್ಕರ್  
ರಾಜ್ಯ

ಪ್ರಸಿದ್ದ ವಕೀಲರ ಪುತ್ರನಾಗಿದ್ದ ಧ್ರುವ್ ಟಕ್ಕರ್ ಪ್ರತಿಭಾವಂತ ವಿದ್ಯಾರ್ಥಿ: ಆತ್ಮಹತ್ಯೆ ಕಾರಣ ಮಾತ್ರ ನಿಗೂಢ!

Shilpa D

ಬೆಂಗಳೂರು: ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದಲ್ಲಿ ಆತ್ಮಹತ್ಯೆ ಮಾಡಿಕೊಂಡ ಧ್ರುವ್ ಟಕ್ಕರ್ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದ, ಆದರೆ ಆತನ ಆತ್ಮಹತ್ಯೆಗೆ ಕಾರಣ ಏನು ಎಂಬುದು ಮಾತ್ರ ಇದುವರೆಗೂ ತಿಳಿದು ಬಂದಿಲ್ಲ.

19 ವರ್ಷದ ಧ್ರುವ್ ಉಳಿದ ವಿದ್ಯಾರ್ಥಿಗಳಿಗಿಂತಲೂ ಸ್ವಲ್ಪ ಭಿನ್ನವಾಗಿದ್ದ, ಆತ ಖಿನ್ನತೆ ಮತ್ತು ಆತಂಕದಿಂದ ಬಳಲುತ್ತಿದ್ದ ಎಂಬುದು ಸ್ಪಷ್ಟವಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಖಿಲ ಭಾರತ ಶ್ರೇಣಿಯ ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆಯಲ್ಲಿ 6ನೇ ರ್ಯಾಂಕ್ ಪಡೆದಿದ್ದ ಧ್ರುವ್, ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯಲ್ಲಿ ಅಧ್ಯಯನ ಮಾಡುತ್ತಿದ್ದ.

ಆತ ತನ್ನ ಸ್ವಇಚ್ಚೆಯ ಮೇರೆಗೆ ಬೆಂಗಳೂರಿಗೆ ಸ್ಥಳಾಂತರಗೊಂಡಿದ್ದ, ಇದಕ್ಕೂ ಆತನ ಪೋಷಕರಿಗೂ ಸಂಬಂಧವಿಲ್ಲ. ಆತನ ಪೋಷಕರು ಮುಂಬಯಿಯ ಪ್ರಸಿದ್ಧ ವಕೀಲರಾಗಿದ್ದಾರೆ. ಮೊದಲ ತ್ರೈಮಾಸಿಕದ ಆರಂಭದಲ್ಲಿ ಎ ಗ್ರೇಡ್‌ ಪಡೆದಿದ್ದ ಧ್ರುವ್ ಕೊನೆಯ ಸೆಮಿಸ್ಟರ್‌ನಲ್ಲಿ ಸಿ ಗ್ರೇಡ್‌ ತಲುಪಿದ್ದ. ಧ್ರುವ್ ವ್ಯಾಸಂಗದ ಕಾರ್ಯಕ್ಷಮತೆ ಕುಸಿದಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಚಂದ್ರಾ ಲೇಔಟ್ ಪೊಲೀಸರು ಕಾಲೇಜು ಹಾಸ್ಟೆಲ್‌ನಲ್ಲಿರುವ ಅವರ ಇಬ್ಬರು ರೂಮ್ ಮೇಟ್ಸ್ ಹೇಳಿಕೆ ಪಡೆದಿದ್ದಾರೆ, ಆದರೆ ಅವರಿಂದ ಯಾವುದೇ ಖಚಿತ ಮಾಹಿತಿ ದೊರೆತಿಲ್ಲ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಶುಕ್ರವಾರ ಧ್ರುವ್ ಅವರ ಮೃತದೇಹವನ್ನು ಪೋಷಕರಿಗೆ ಹಸ್ತಾಂತರಿಸಲಾಯಿತು.

ರೈಲು ಬರುವ ಕೆಲವು ಸೆಕೆಂಡುಗಳ ಮೊದಲು ಧ್ರುವ್ ಜಿಗಿದಿದ್ದಾನ. ಅವನು ತನ್ನ ತಲೆಯನ್ನು ಹಳಿಗಳ ಮೇಲೆ ಇಟ್ಟಂತೆ ತೋರುತ್ತಿದೆ, ಇದರ ಪರಿಣಾಮವಾಗಿ ಅವನ ಕುತ್ತಿಗೆ ಕತ್ತರಿಸಿದ್ದು ದೇಹದ ಭಾಗಗಳಿಗೆ ಗಾಯಗಳಾಗಿವೆ ಎಂದು ವಿಕ್ಟೋರಿಯಾ ಆಸ್ಪತ್ರೆಯ ಫೋರೆನ್ಸಿಕ್ ಮೆಡಿಸಿನ್ ಮತ್ತು ಟಾಕ್ಸಿಕಾಲಜಿ ವಿಭಾಗಕ್ಕೆ ಸಂಬಂಧಿಸಿದ ಹಿರಿಯ ವೈದ್ಯರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

SCROLL FOR NEXT