ಬೆಂಗಳೂರು ನಗರ ಪೊಲೀಸ್​ ಆಯುಕ್ತ ಬಿ.ದಯಾನಂದ್ 
ರಾಜ್ಯ

ಮನೆ ದರೋಡೆ, ಕಳ್ಳತನ ತಡೆಗೆ 'ಸ್ವಯಂಸೇವಕ ಬೀಟ್’ ಆರಂಭಕ್ಕೆ ನಗರ ಪೊಲೀಸರು ಮುಂದು!

ಮನೆ ದರೋಡೆ, ಕಳ್ಳತನ ತಡೆಯಲು ಸಾರ್ವಜನಿಕರ ಬೆಂಬಲದೊಂದಿಗೆ 'ಸ್ವಯಂಸೇವಕ ಬೀಟ್’ ಆರಂಭಿಸಲು ನಗರ ಪೊಲೀಸರು ಮುಂದಾಗಿದ್ದಾರೆ.

ಬೆಂಗಳೂರು: ಮನೆ ದರೋಡೆ, ಕಳ್ಳತನ ತಡೆಯಲು ಸಾರ್ವಜನಿಕರ ಬೆಂಬಲದೊಂದಿಗೆ 'ಸ್ವಯಂಸೇವಕ ಬೀಟ್’ ಆರಂಭಿಸಲು ನಗರ ಪೊಲೀಸರು ಮುಂದಾಗಿದ್ದಾರೆ,

ಮಹಾಲಕ್ಷ್ಮಿ ಲೇಔಟ್‌ನ ಡಾ.ರಾಜ್‌ಕುಮಾರ್ ಸಭಾಂಗಣದಲ್ಲಿ ಶನಿವಾರ ನಡೆದ ‘ಜನ ಸಂಪರ್ಕ ಸಭೆ’ಯಲ್ಲಿ ಮಾತನಾಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು, ವಿಜಯನಗರ ಮತ್ತು ಚಂದ್ರಾ ಲೇಔಟ್ ಪೊಲೀಸ್ ವ್ಯಾಪ್ತಿಯಲ್ಲಿ 'ಸ್ವಯಂಸೇವಕ ಬೀಟ್’ ಆರಂಭಿಸಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದ್ದಾರೆ,

ನಗರ ಪೊಲೀಸರು ಈ ಹಿಂದೆ ‘ನೆರೆಹೊರೆ ಪೊಲೀಸ್’ ಮತ್ತು ‘ಪೊಲೀಸ್ ಸ್ವಯಂಸೇವಕರು’ ನಂತಹ ಉಪಕ್ರಮಗಳನ್ನು ಹೊಂದಲಾಗಿದೆ, ಸ್ವಯಂಸೇವಕ ಬೀಟ್ ಅನುಷ್ಠಾನಕ್ಕೆ ಸಾರ್ವಜನಿಕರ ಸಹಕಾರ ಬೇಕು, ಇದರಿಂದ ರಾತ್ರಿಯಲ್ಲಿ ದರೋಡೆ ಪ್ರಕರಣಗಳನ್ನು ಪರಿಹರಿಸಬಹುದು ಎಂದು ತಿಳಿಸಿದರು.

ಏತನ್ಮಧ್ಯೆ, ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಯಾರಾದರೂ ಅನುಮಾನಾಸ್ಪದವಾಗಿ ತಮ್ಮ ಅಂಗಡಿಗಳಿಗೆ ಭೇಟಿ ನೀಡಿದರೆ ಅಥವಾ ಸುತ್ತಮುತ್ತ ಅಡಗಿಕೊಂಡಿರುವುದನ್ನು ಗಮನಿಸಿದರೆ ತಕ್ಷಣ ‘112’ ಗೆ ಕರೆ ಮಾಡುವಂತೆ ಕರೆ ನೀಡಿದರು. ದೂರು ಬಂದ ಕೂಡಲೇ ಶಂಕಿತರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಇದೇ ವೇಳೆ ಪೀಣ್ಯ ಕೈಗಾರಿಕಾ ಪ್ರದೇಶ, ಗೊರಗುಂಟೆಪಾಳ್ಯ ಮುಂತಾದ ಪ್ರದೇಶಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿರುವ ಕುರಿತಂತೆಯೂ ಜನರು ಆಯುಕ್ತರಿಗೆ ದೂರು ಸಲ್ಲಿಸಿದರು. ಈ ಸಂದರ್ಭದಲ್ಲಿ ಉತ್ತರ ವಿಭಾಗದ ಉಪ ಪೊಲೀಸ್ ಆಯುಕ್ತ ಸೈದುಲು ಅದಾವತ್ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜ್ಞಾನೇಶ್ ಕುಮಾರ್ ನೆರವಿನಿಂದ ದೇಶವನ್ನು 'ಹೈಜಾಕ್' ಮಾಡಿದ ಮೋದಿ, ಶಾ, ಭಾಗವತ್‌ರನ್ನು ಸುಮ್ಮನೆ ಬಿಡಲ್ಲ; ರಾಹುಲ್ ಗಾಂಧಿ ಗುಡುಗು!

'ನಾವು ಒಂದೂವರೆ ವರ್ಷ ಪ್ರೀತಿಸುತ್ತಿದ್ದೆವು': ಲಂಡನ್ ಲವ್​ ಕಹಾನಿ ನೆನೆದು ಭಾವುಕರಾದ CM ವಿಜಯ್​ ಪುತ್ರ ಜೇಸನ್!

SIR ವಿವಾದ: 'ಶಾಸಕ ಯತ್ನಾಳ್ ಬಣ್ಣ ಬಯಲು'; ವಿಜಯಪುರದಲ್ಲಿ ಬದುಕಿರುವ 8 ಮುಸ್ಲಿಂ ಮತದಾರರು 'ಸತ್ತಿದ್ದಾರೆ' ಎಂದು ಅರ್ಜಿ!

ಪಶ್ಚಿಮ ಬಂಗಾಳ ಉಪ ಚುನಾವಣೆ: ಪೊಲೀಸರೊಂದಿಗೆ ಮಾತಿನ ಚಕಮಕಿ: ಶಾಸಕ ಹುಮಾಯೂನ್ ಕಬೀರ್ ಬಂಧನ

ಹೆದ್ದಾರಿಗಳಲ್ಲಿ ನಿಲ್ಲಿಸಿರುವ ವಾಹನಗಳ ಎಲೆಕ್ಟ್ರಾನಿಕ್ ಟ್ರ್ಯಾಕಿಂಗ್ ಸಾಧ್ಯವಾಗುತ್ತಿಲ್ಲವೇಕೆ- NHAI ಗೆ ಸುಪ್ರೀಂ ಕೋರ್ಟ್