ದ್ರೌಪದಮ್ಮ ಕರಗ ಮಹೋತ್ಸವ (ಸಾಂದರ್ಭಿಕ ಚಿತ್ರ)
ದ್ರೌಪದಮ್ಮ ಕರಗ ಮಹೋತ್ಸವ (ಸಾಂದರ್ಭಿಕ ಚಿತ್ರ) 
ರಾಜ್ಯ

ಕರಗ ಹೊರಲು 3 ಗುಂಪುಗಳ ನಡುವೆ ಸಂಘರ್ಷ: ಐತಿಹಾಸಿಕ ಬೂದಿಗೆರೆ ದ್ರೌಪದಮ್ಮ ಕರಗ ಮಹೋತ್ಸವ ರದ್ದು!

Srinivasamurthy VN

ಬೆಂಗಳೂರು: ಕರಗ ಹೊರುವ ವಿಚಾರಕ್ಕೆ ಸಂಬಂಧಿಸಿದಂತೆ ತಿಗಳ ಸಮುದಾಯದ ಮೂರು ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು, ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಕಾರಣಕ್ಕೆ ಕರಗ ಮಹೋತ್ಸವನ್ನು ರದ್ದು ಮಾಡಲಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ತಾಲೂಕಿನ ಬೂದಿಗೆರೆಯಲ್ಲಿ (Budigere) ನಾಳೆ (ಮಾ.25) ನಡೆಯಬೇಕಿದ್ದ ಇತಿಹಾಸ ಪ್ರಸಿದ್ಧ ಬೂದಿಗೆರೆ ಶ್ರೀ ದ್ರೌಪದಮ್ಮ ದೇವಿ ಕರಗ ಮಹೋತ್ಸವ ರದ್ದಾಗಿದೆ. ಐತಿಹಾಸಿಕ ಬೂದಿಗೆರೆ ದ್ರೌಪದಮ್ಮ ಕರಗ (Droupadamma Karaga) ಕರಗ ಹೊರುವ ವಿಚಾರವಾಗಿ ತಿಗಳ ಸಮುದಾಯದ ಮೂರು ಗುಂಪುಗಳ ನಡುವೆ ಘರ್ಷಣೆ ಉಂಟಾಗಿದ್ದು ಇದೇ ಕಾರಣಕ್ಕೆ ಕರಗ ಮಹತ್ಸವವನ್ನು ರದ್ದು ಮಾಡಲಾಗಿದೆ ಎಂದು ಹೇಳಲಾಗಿದೆ.

ಇದೀಗ ದ್ರೌಪಮ್ಮ ದೇಗುಲದ ಮುಂದೆ ಪೊಲೀಸರ ವ್ಯಾನ್​ಗಳು ನಿಂತಿದ್ದು ಭಾರೀ ಬಂದೋಬಸ್ತ್​ ಕೈಗೊಳ್ಳಲಾಗಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಹೆಚ್ಚುವರಿ ಪೊಲೀಸರನ್ನು ಸ್ಥಳದಲ್ಲಿ ನಿಯೋಜನೆ ಮಾಡಲಾಗಿದೆ.

ದೇವನಹಳ್ಳಿ ತಾಲೂಕಿನ ಬೂದಿಗೆರೆ ಗ್ರಾಮದಲ್ಲಿ ಪ್ರತಿ ವರ್ಷ ಕಾಮನ ಹುಣ್ಣಿಮೆಯಂದು ದ್ರೌಪದಿ ದೇವಿ ಕರಗ ಮಹೋತ್ಸವ ನಡೆಯುತ್ತಿತ್ತು. ಆದರೆ, ಈ ಬಾರಿ ಕರಗ ಹೊರುವ ವಿಚಾರವಾಗಿ ತಿಗಳ ಜನಾಂಗದ ಮೂರು ಗುಂಪುಗಳ ನಡುವೆ ಕಿತ್ತಾಟ ಹಿನ್ನೆಲೆ ಕರಗ ಮಹೋತ್ಸವ ರದ್ದಾಗಿದೆ. ಕರಗ ಹೊರಲು ಜಿದ್ದಾಜಿದ್ದಿಗೆ ಬಿದ್ದ ಮೂರು ಗುಂಪುಗಳ ನಡುವೆ ಕಿತ್ತಾಟವಾದ ಹಿನ್ನೆಲೆ ಶಾಂತಿ, ಸುವ್ಯವಸ್ಥೆ ಕಾಪಾಡಲು ಕರಗ ರದ್ದು ಮಾಡಲಾಗಿದೆ.

ಕೋರ್ಟ್ ಮೊರೆಹೋದ ಸಮುದಾಯ

ಇನ್ನು ಕರಗ ವಿಚಾರ ಕೋರ್ಟ್​ ಮೆಟ್ಟಿಲೇರಿದ್ದು, ಹೈಕೋರ್ಟ್​ನಲ್ಲಿ ಕರಗ ಕಿತ್ತಾಟ ಪ್ರಕರಣ ಇತ್ಯಾರ್ಥವಾಗಿಲ್ಲ. ಮೇ 27ಕ್ಕೆ ವಿಚಾರಣೆಯನ್ನು ಹೈ ಕೋರ್ಟ್ ಮುಂದೂಡಿದೆ. ಆದರೆ ಕರಗ ಮಾರ್ಚ್ 25ರಂದು ನಡೆಯಬೇಕಿತ್ತು. ಪ್ರಕರಣ ಇತ್ಯರ್ಥಗೊಳ್ಳದ ಕಾರಣ ಕರಗ ಆಚರಣೆಯೇ ರದ್ದಾಗಿದೆ.

SCROLL FOR NEXT