ನಿಸರ್ಗ ಪ್ರೇಮಿಗಳು
ನಿಸರ್ಗ ಪ್ರೇಮಿಗಳು 
ರಾಜ್ಯ

ಬೆಂಗಳೂರು: ಸೋನಮ್ ವಾಂಗ್ ಚುಕ್ ಅಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ನಿಸರ್ಗ ಪ್ರೇಮಿಗಳ ಬೆಂಬಲ

Nagaraja AB

ಬೆಂಗಳೂರು: ಕೈಗಾರಿಕೀಕರಣದಿಂದಾಗಿ ಹಿಮಾಲಯ ಪ್ರದೇಶಕ್ಕೆ ಹಾನಿ ಕುರಿತು ಅರಿವು ಮೂಡಿಸಲು ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಜನಪ್ರಿಯ ಹವಾಮಾನ ಹೋರಾಟಗಾರ ಹಾಗೂ ಶಿಕ್ಷಣ ಸುಧಾರಣಾವಾದಿ ಸೋನಮ್ ವಾಂಗ್‌ಚುಕ್ ಅವರಿಗೆ ನಗರದಲ್ಲಿನ ನಿಸರ್ಗ ಪ್ರೇಮಿಗಳು ಬೆಂಬಲ ವ್ಯಕ್ತಪಡಿಸಿದ್ದಾರೆ. ಭಾನುವಾರ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ವಿವಿಧ ಘೋಷಣೆಯೊಳ್ಳ ಪ್ರದರ್ಶನ ಫಲಕದೊಂದಿಗೆ ಜಮಾಯಿಸಿದ ಸುಮಾರು 100 ಕ್ಕೂ ಲಡಾಖ್‌ನ ವಿದ್ಯಾರ್ಥಿಗಳು ಸೋನಮ್ ವಾಂಗ್ ಚುಕ್ ಅವರ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿದರು.

ಬೆಂಬಲಿಗರಲ್ಲಿ ಒಬ್ಬರಾದ ಪ್ರದೀಪ್ ಅವರು 100 ಕಿಲೋಮೀಟರ್ ದೂರ ಪ್ರಯಾಣಿಸಿ ತಮ್ಮ ಬೆಂಬಲವನ್ನು ಪ್ರದರ್ಶಿಸಿದರು. ಇದಲ್ಲದೆ ಸಭೆಯಲ್ಲಿ ಪಾಲ್ಗೊಂಡವರು ಹವಾಮಾನ ಬದಲಾವಣೆ ಮತ್ತು ಜೀವವೈವಿಧ್ಯದ ಕುರಿತ ಚರ್ಚೆಗಳೊಂದಿಗೆ ಲಡಾಖ್ ಅನ್ನು 6 ನೇ ಷೆಡ್ಯೂಲ್ ನಲ್ಲಿ ಸೇರಿಸುವ ಅಗತ್ಯತೆಯನ್ನು ಒತ್ತಿ ಹೇಳಿದರು. ಖ್ಯಾತ ಸಾಮಾಜಿಕ ಕಾರ್ಯಕರ್ತಸಂದೀಪ್ ಅನಿರುಧನ್ , ಪರಿಸರವಾದಿ ಡಿ.ಟಿ.ದೇವರೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ನಮ್ಮ ಗ್ರಹದ ಭವಿಷ್ಯವನ್ನು ಕಾಪಾಡುವಲ್ಲಿ ವ್ಯಕ್ತಿಗಳು ಮತ್ತು ಸರ್ಕಾರಗಳ ನಿರ್ಣಾಯಕ ಪಾತ್ರಗಳನ್ನು ತಿಳಿಸಿದರು.

ಸಂವಿಧಾನ 73 ಮತ್ತು 74 ನೇ ತಿದ್ದುಪಡಿಗಳು, ಅರಣ್ಯ ಹಕ್ಕು ಕಾಯ್ದೆ ಮತ್ತು 6 ನೇ ಶೆಡ್ಯೂಲ್‌ನಂತಹ ಸಾಂವಿಧಾನಿಕ ನಿಬಂಧನೆಗಳಿಂದ ಮತ್ತಷ್ಟು ಬಲಪಡಿಸಲ್ಪಟ್ಟ, ಹಿಂದ್ ಸ್ವರಾಜ್‌ನಲ್ಲಿ ವಿವರಿಸಿರುವ 6 ನೇ ಶೆಡ್ಯೂಲ್ ಮತ್ತು ಗಾಂಧೀಜಿಯವರ ಸ್ವರಾಜ್ ದೃಷ್ಟಿಕೋನದ ನಡುವಿನ ಮಹತ್ವವನ್ನು ಸಂದೀಪ್ ತಿಳಿಸಿದರು.

SCROLL FOR NEXT