ಹೊರನಾಡು ಕ್ಷೇತ್ರದಲ್ಲಿ ಯಡಿಯೂರಪ್ಪ ಕುಟುಂಬ
ಹೊರನಾಡು ಕ್ಷೇತ್ರದಲ್ಲಿ ಯಡಿಯೂರಪ್ಪ ಕುಟುಂಬ 
ರಾಜ್ಯ

ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಯಡಿಯೂರಪ್ಪ ಕುಟುಂಬ ನವ ಚಂಡಿಕಾ ಯಾಗ!

Shilpa D

ಶಿವಮೊಗ್ಗ: ಚಿಕ್ಕಮಗಳೂರು ಜಿಲ್ಲೆಯ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಭಾನುವಾರ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ, ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಮತ್ತು ಅವರ ಪುತ್ರ, ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಕುಟುಂಬ ಸದಸ್ಯರೊಂದಿಗೆ ನವ ಚಂಡಿಕಾ ಹೋಮ ನಡೆಸಿದರು. ಯಡಿಯೂರಪ್ಪ ಅವರ ಪುತ್ರಿಯರು ಸಹ ಧಾರ್ಮಿಕ ವಿಧಿ ವಿಧಾನದಲ್ಲಿ ಪಾಲ್ಗೊಂಡಿದ್ದರು.

ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನಗಳನ್ನು ಗೆಲ್ಲಿಸುವ ಹೊಣೆ ಹೊತ್ತಿರುವ ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರು ಚಂಡಿಕಾ ದೇವಿ ಹೋಮ ನಡೆಸಿದರು. ನವ ಚಂಡಿಕಾ ಪಾರಾಯಣ ಹೋಮವನ್ನು ಮಾಡುವುದರಿಂದ ಪುಣ್ಯ ಬರುತ್ತದೆ, ಅಡೆತಡೆಗಳು ನಿವಾರಣೆಯಾಗುತ್ತದೆ ಮತ್ತು ಇಷ್ಟಾರ್ಥಗಳು ಈಡೇರುತ್ತವೆ ಎಂದು ಭಕ್ತರು ನಂಬುತ್ತಾರೆ.

ಹೋಮದ ನಂತರ ಮಾತನಾಡಿದ ಯಡಿಯೂರಪ್ಪ, ರಾಜ್ಯದಾದ್ಯಂತ ಸಾಕಷ್ಟು ಮಳೆ ಮತ್ತು ಸಮೃದ್ಧ ಫಸಲಿಗಾಗಿ ಇದನ್ನು ನಡೆಸಲಾಗಿದೆ. ಈ ಲೋಕಸಭಾ ಚುನಾವಣೆಯು ಪ್ರಧಾನಿ ನರೇಂದ್ರ ಮೋದಿಯವರನ್ನು ಅಧಿಕಾರವನ್ನು ಉಳಿಸಿಕೊಳ್ಳಲು. ದೇವಿ ಹಾಗೂ ಜನತೆಯ ಆಶೀರ್ವಾದದಿಂದ ರಾಜ್ಯದ ಎಲ್ಲಾ 28 ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದೆ ಎಂದರು.

ಮೋದಿಗೆ ಇನ್ನಷ್ಟು ಶಕ್ತಿ ನೀಡಲೆಂದು ದೇವಿಯನ್ನು ಪ್ರಾರ್ಥಿಸಲು ಈ ಹೋಮ ನಡೆಸಲಾಗಿದೆ ಎಂದು ವಿಜಯೇಂದ್ರ ಹೇಳಿದ್ದಾರೆ. ರಾಜ್ಯದಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಅವರ ಕೈಗಳನ್ನು ಬಲಪಡಿಸಲು ನಾವು ಬಯಸುತ್ತೇವೆ. ಹಾಗಾಗಿ ನಾವು ದೇವಿಗೆ ಪ್ರಾರ್ಥನೆ ಸಲ್ಲಿಸಿದ್ದೇವೆ ಎಂದು ಅವರು ಹೇಳಿದರು.

ತುರ್ತು ನಿಧಿ ಕೋರಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ, ಸಿಎಂ ಮತ್ತು ಸರಕಾರ ಇದೀಗ ಕೆಟ್ಟ ಕಾಲವನ್ನು ಎದುರಿಸುತ್ತಿದೆ. ತಮ್ಮ ವೈಫಲ್ಯವನ್ನು ಮರೆಮಾಚಲು ಸಿಎಂ ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ಮೂಲಕ ನಾಟಕವಾಡಿದ್ದಾರೆ. ಇದು ಸಿಎಂ ಸ್ಥಾನಮಾನಕ್ಕೆ ಹೊಂದುವುದಿಲ್ಲ ಎಂದು ವಿಜಯೇಂದ್ರ ಲೇವಡಿ ಮಾಡಿದರು.

SCROLL FOR NEXT