ನೇರಳೆ ಮಾರ್ಗದ ಮೆಟ್ರೋ ರೈಲು 
ರಾಜ್ಯ

ಬೆಂಗಳೂರು: ನೇರಳೆ ಮಾರ್ಗದ ಮೆಟ್ರೋ ಪ್ರಯಾಣಿಕರ ಸಂಖ್ಯೆ ಇಳಿಮುಖ, ಆದಾಯಕ್ಕೆ ಭಾರಿ ಹೊಡೆತ

ನೇರಳೆ ಮಾರ್ಗದ ಪೂರ್ಣ ಪ್ರಾರಂಭ ಮತ್ತು ಅದರ ವಿಸ್ತರಣೆಯ ನಂತರ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಮುಖವಾಗಿದ್ದು, ಮಾರ್ಚ್‌ ತಿಂಗಳ ಅಂತ್ಯದಲ್ಲಿ ಸರಾಸರಿ ದೈನಂದಿನ ಪ್ರಯಾಣಿಕರ ಸಂಖ್ಯೆ ದಿನಕ್ಕೆ ಕೇವಲ 6.76 ಲಕ್ಷದಷ್ಟಿದೆ ಎಂದು ಮೂಲಗಳು ತಿಳಿಸಿವೆ.

ಬೆಂಗಳೂರು: ನೇರಳೆ ಮಾರ್ಗದ ಪೂರ್ಣ ಪ್ರಾರಂಭ ಮತ್ತು ಅದರ ವಿಸ್ತರಣೆಯ ನಂತರ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಮುಖವಾಗಿದ್ದು, ಮಾರ್ಚ್‌ ತಿಂಗಳ ಅಂತ್ಯದಲ್ಲಿ ಸರಾಸರಿ ದೈನಂದಿನ ಪ್ರಯಾಣಿಕರ ಸಂಖ್ಯೆ ದಿನಕ್ಕೆ ಕೇವಲ 6.76 ಲಕ್ಷದಷ್ಟಿದೆ ಎಂದು ಮೂಲಗಳು ತಿಳಿಸಿವೆ. ವಾರಾಂತ್ಯದೊಂದಿಗೆ ಗುಡ್ ಫ್ರೈಡೆ ಆಗಿರುವುದರಿಂದ ಈ ತಿಂಗಳ ಸರಾಸರಿ ಇನ್ನಷ್ಟು ಕುಸಿಯುವ ನಿರೀಕ್ಷೆಯಿದ್ದು, ಪ್ರಯಾಣಿಕರ ಸಂಖ್ಯೆ ದಿನಕ್ಕೆ 6.5 ಲಕ್ಷಕ್ಕಿಂತ ಕಡಿಮೆಯಾಗಿರುತ್ತದೆ.

ಮಾರ್ಚ್ 26 ರವರೆಗೆ ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್) ಒದಗಿಸಿದ ಮಾಹಿತಿ ಪ್ರಕಾರ, ಮಾರ್ಚ್‌ನಲ್ಲಿ ಒಟ್ಟಾರೆ ಪ್ರಯಾಣಿಕರ ಸಂಖ್ಯೆ 1.76 ಕೋಟಿಯಷ್ಟಿದೆ. ಫೆಬ್ರುವರಿಯಲ್ಲಿ ಸರಾಸರಿ ದೈನಂದಿನ ಪ್ರಯಾಣಿಕರ ಸಂಖ್ಯೆ 7,05,917 ಆಗಿತ್ತು. ನಮ್ಮ ಮೆಟ್ರೋ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ದೈನಂದಿನ ಪ್ರಯಾಣಿಕರ ಸಂಖ್ಯೆ 7 ಲಕ್ಷ ದಾಟಿದೆ. ಆದರೆ, ಈ ತಿಂಗಳು 29,000 ದಷ್ಟು ಪ್ರಯಾಣಿಕರ ಕುಸಿತ ಕಂಡಿದೆ.

'ಈ ತಿಂಗಳು ಮೆಟ್ರೋ ರೈಲು ಸೇವೆಗಳಲ್ಲಿ ಬಹು ಅಡಚಣೆಗಳು ಉಂಟಾಗಿವೆ. ಶಾಲಾ ಪರೀಕ್ಷೆಗಳು ಮತ್ತು ಸದ್ಯದ ನೀರಿನ ಬಿಕ್ಕಟ್ಟಿನ ಕಾರಣದಿಂದಾಗಿ ಟೆಕ್ಕಿಗಳ ಒಂದು ವಿಭಾಗಕ್ಕೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡಿರುವುದು ಪ್ರಯಾಣಿಕರ ಸಂಖ್ಯೆಯಲ್ಲಿ ಕುಸಿತಕ್ಕೆ ಕಾರಣವಾಗಿದೆ' ಎಂದು ಮೂಲವೊಂದು ತಿಳಿಸಿದೆ. ಬೇಸಿಗೆ ರಜೆ ಮತ್ತು ಸಾರ್ವಜನಿಕರು ನಗರದಿಂದ ಹೊರಗೆ ಪ್ರಯಾಣಿಸುವುದರಿಂದ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಈ ಕುಸಿತವನ್ನು ನಿರೀಕ್ಷಿಸಲಾಗಿತ್ತು, ಆದರೆ, ಮಾರ್ಚ್ ತಿಂಗಳಲ್ಲಿಯೇ ಪ್ರಯಾಣಿಕರ ಸಂಖ್ಯೆಯಲ್ಲಿ ಕುಸಿತ ಕಂಡುಬಂದಿರುವುದು ಸಂಪೂರ್ಣ ಅನಿರೀಕ್ಷಿತ ಎಂದು ಅವರು ಹೇಳಿದರು.

ಸಂಪೂರ್ಣ ನೇರಳೆ ಮಾರ್ಗ ಪ್ರಾರಂಭವಾದ ನಂತರ ದಿನಕ್ಕೆ 7.5 ಲಕ್ಷ ಪ್ರಯಾಣಿಕರನ್ನು ನಿರೀಕ್ಷಿಸಲಾಗಿತ್ತು. ಆದರೆ, ಅಕ್ಟೋಬರ್ 9 ರಂದು ಕೆಆರ್ ಪುರ ಮತ್ತು ಬೈಯಪ್ಪನಹಳ್ಳಿ ನಡುವಿನ ನಿರ್ಣಾಯಕ ಸಂಚಾರವನ್ನು ಪ್ರಾರಂಭಿಸಿದ ನಂತರ ಕಳೆದ ಆರು ತಿಂಗಳಿನಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿಲ್ಲ. ಕಳೆದ ಜನವರಿ 25 ರಂದು ಮಾತ್ರ 7,82,435 ಪ್ರಯಾಣಿಕರು ಸಂಚರಿಸಿದ್ದರು.

ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಮುಖವಾಗಿರುವುದು ನಮ್ಮನ್ನು ದಿಗ್ಭ್ರಮೆಗೊಳಿಸಿದೆ. ತಾರ್ಕಿಕವಾಗಿ ಹೇಳುವುದಾದರೆ, ಮಾರ್ಚ್‌ನಲ್ಲಿ ಹೆಚ್ಚುತ್ತಿರುವ ತಾಪಮಾನವು ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಮುಖಕ್ಕೆ ಕಾರಣವಾಗಿರಬಹುದು ಎಂದು ಅನೇಕ ಅಧಿಕಾರಿಗಳು ಹೇಳುತ್ತಾರೆ.

ಜನವರಿಯಲ್ಲಿ ದೈನಂದಿನ ಪ್ರಯಾಣಿಕರ ಸಂಖ್ಯೆ 6,78,543 ರಷ್ಟಿದ್ದರೆ, 2023ರ ಡಿಸೆಂಬರ್‌ನಲ್ಲಿ ದಿನಕ್ಕೆ 6,88,196 ಪ್ರಯಾಣಿಕರು ಸಂಚರಿಸಿದ್ದರು. ನವೆಂಬರ್‌ನಲ್ಲಿ ದೈನಂದಿನ ಪ್ರಯಾಣಿಕರ ಸಂಖ್ಯೆ 6.64 ಲಕ್ಷ ಮತ್ತು ಅಕ್ಟೋಬರ್‌ನಲ್ಲಿ 6,40,441 ರಷ್ಟಿದ್ದರು. ನೇರಳೆ ಮಾರ್ಗದ ಸಂಪೂರ್ಣ ಮಾರ್ಗವನ್ನು ಅಕ್ಟೋಬರ್ 9ರಂದು ಪ್ರಾರಂಭಿಸಲಾಯಿತು.

'ಈ ತಿಂಗಳೂ ಆದಾಯಕ್ಕೆ ಭಾರಿ ಹೊಡೆತ ಬೀಳಲಿದೆ. ಪ್ರತಿ ಸವಾರನಿಗೆ ಸರಾಸರಿ ಟಿಕೆಟ್ ದರ 23 ರಿಂದ 24 ರೂ. (ದೀರ್ಘ ಮತ್ತು ಕಡಿಮೆ ದೂರದ ಸವಾರಿಗಳನ್ನು ಒಟ್ಟಿಗೆ ತೆಗೆದುಕೊಳ್ಳಲಾಗುತ್ತದೆ) ಆಗಿದೆ. ಆದ್ದರಿಂದ ಹಿಂದಿನ ತಿಂಗಳಿಗೆ ಹೋಲಿಸಿದರೆ ಈ ತಿಂಗಳು ಸುಮಾರು 70,000 ರೂ. ಹೊಡೆತ ಬೀಳಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

SCROLL FOR NEXT