ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: ಸಂಜಯನಗರದಲ್ಲಿ ಹಳೆ ವೈಷಮ್ಯದಿಂದ ಆಟೋ ಚಾಲಕನ ಹತ್ಯೆ

ಹಳೆ ದ್ವೇಷದ ಹಿನ್ನೆಲೆಯಲ್ಲಿ 42 ವರ್ಷದ ಆಟೋ ಚಾಲಕನಿಗೆ ಡ್ರಾಗರ್ ನಿಂದ ಇರಿದು ಹತ್ಯೆ ಮಾಡಿರುವ ಘಟನೆ ಗುರುವಾರ ಮುಂಜಾನೆ ನಡೆದಿದೆ. ಮೃತರನ್ನು ನಾಗಶೆಟ್ಟಿಹಳ್ಳಿ ನಿವಾಸಿ ಮೂರ್ತಿ ಎಂದು ಗುರುತಿಸಲಾಗಿದ್ದು, ಇವರು ಆಟೋ ಚಾಲಕರಾಗಿದ್ದರು.

ಬೆಂಗಳೂರು: ಹಳೆ ದ್ವೇಷದ ಹಿನ್ನೆಲೆಯಲ್ಲಿ 42 ವರ್ಷದ ಆಟೋ ಚಾಲಕನಿಗೆ ಡ್ರಾಗರ್ ನಿಂದ ಇರಿದು ಹತ್ಯೆ ಮಾಡಿರುವ ಘಟನೆ ಗುರುವಾರ ಮುಂಜಾನೆ ನಡೆದಿದೆ. ಮೃತರನ್ನು ನಾಗಶೆಟ್ಟಿಹಳ್ಳಿ ನಿವಾಸಿ ಮೂರ್ತಿ ಎಂದು ಗುರುತಿಸಲಾಗಿದ್ದು, ಇವರು ಆಟೋ ಚಾಲಕರಾಗಿದ್ದರು.

ನಾಗಶೆಟ್ಟಿಹಳ್ಳಿ ಬಸ್ ನಿಲ್ದಾಣದಲ್ಲಿ ಮೂರ್ತಿ ಮತ್ತು ಸಚಿನ್ ನಡುವೆ ನಡೆದ ವಾಗ್ವಾದ ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರ ನಡುವಿನ ವಾಗ್ವಾದ ತಾರಕಕ್ಕೇರಿದ್ದು, ಆರೋಪಿ ಕಿರಣ್, ಮೂರ್ತಿ ಜೊತೆಗೆ ಹಳೆ ವೈಷಮ್ಯ ಹೊಂದಿದ್ದ ರೌಡಿ ಶೀಟರ್ ಶರಣಪ್ಪನನ್ನು ಕರೆದಿದ್ದಾನೆ. ಜಗಳವಾಡುತ್ತಿರುವಾಗ ಶರಣಪ್ಪ ಡ್ರಾಗರ್ ನಿಂದ ಮೂರ್ತಿಗೆ ಇರಿದಿದ್ದಾನೆ. ನಂತರ ಕಿರಣ್ ಮತ್ತು ಶರಣಪ್ಪ ಇಬ್ಬರೂ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ದಾರಿಹೋಕರು ಮೂರ್ತಿಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಸಂಜಯನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತಲೆಮರೆಸಿಕೊಂಡಿರುವ ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ. ಮೂವರೂ ಒಂದೇ ಪ್ರದೇಶದ ನಿವಾಸಿಗಳಾಗಿದ್ದು, ಅವರ ಹಳೆ ವೈಷಮ್ಯವೇ ಮೂರ್ತಿಗೆ ಇರಿತಕ್ಕೆ ಕಾರಣ ಎಂದು ತನಿಖಾಧಿಕಾರಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬ್ಯಾನರ್‌ ವಿಚಾರಕ್ಕೆ ಜನಾರ್ದನ ರೆಡ್ಡಿ ಮನೆ ಮುಂದೆ ಗಲಾಟೆ, ಫೈರಿಂಗ್; ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು

ಕುರ್ಚಿ ಕದನಕ್ಕೆ ಬಿಗ್ ಟ್ವಿಸ್ಟ್‌; ಈ ಬಾರಿಯೂ ನಾನೇ ಬಜೆಟ್ ಮಂಡಿಸುತ್ತೇನೆ, ಸಿದ್ಧತೆ ಆರಂಭ: CM ಸಿದ್ದರಾಮಯ್ಯ

ರಾಹುಲ್ ಗಾಂಧಿ ಪ್ರಭು ಶ್ರೀರಾಮನಿದ್ದಂತೆ: ಶೋಷಿತರಿಗೆ ನ್ಯಾಯ ಒದಗಿಸುತ್ತಿದ್ದಾರೆ - ನಾನಾ ಪಟೋಲೆ

ಕೋಗಿಲು ತೆರವು: ಕೇವಲ 90 ಜನರಿಗೆ ಮಾತ್ರ ಮನೆ ಹಂಚಿಕೆ - ಸಚಿವ ಭೈರತಿ ಸುರೇಶ್

ಬಾಂಗ್ಲಾದೇಶದಲ್ಲಿ ಜೈಶಂಕರ್ ಹ್ಯಾಂಡ್ ಶೇಕ್: ಪಾಕ್ ವರದಿಗಳು ದೊಡ್ಡ "ಜೋಕ್" ಎಂದ ಮಾಜಿ ರಾಯಭಾರಿ!

SCROLL FOR NEXT