ಸಾಂದರ್ಭಿಕ ಚಿತ್ರ 
ರಾಜ್ಯ

ಮಳೆಹಾನಿ: ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳ ಗ್ರಾಹಕರಿಗೆ ಪರ್ಯಾಯ ವಾಟ್ಸಾಪ್, ಮೊಬೈಲ್ ಸಂಖ್ಯೆಗಳು!

ಮಳೆಗಾಲದಲ್ಲಿ ಗ್ರಾಹಕರ ವಿದ್ಯುತ್‌ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲು ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳ ಗ್ರಾಹಕರಿಗೆ ಈ ಕೆಳಕಂಡ ಪಯಾರ್ಯ ವಾಟ್ಸ್‌ ಆಪ್‌ ಸಂಖ್ಯೆಗಳನ್ನು ನೀಡಲಾಗಿದೆ.

ಬೆಂಗಳೂರು: ಬೆಸ್ಕಾಂ ವ್ಯಾಪ್ತಿಯಲ್ಲಿ ಕಳೆದ ಮೂರು ದಿನಗಳಿಂದ ಸುರಿದ ಗಾಳಿ-ಮಳೆಗೆ ವಿದ್ಯುತ್‌ ಕಂಬಗಳು ಮುರಿದು, ವಿದ್ಯುತ್‌ ಮೂಲ ಸೌಕರ್ಯಗಳು ಹಾನಿಗೊಳಗಾಗಿವೆ. ಹೀಗಾಗಿ ಬೆಸ್ಕಾಂ ಸಹಾಯವಾಣಿ 1912ಗೆ ದೂರುಗಳು ಹರಿದು ಬಂದಿದ್ದು, ಕರೆಗಳ ಒತ್ತಡದಿಂದಾಗಿ ಗ್ರಾಹಕರಿಗೆ 1912 ಸಂಪರ್ಕ ಸಾಧ್ಯವಾಗುತ್ತಿಲ್ಲ. ಮಳೆಗಾಲದಲ್ಲಿ ಗ್ರಾಹಕರ ವಿದ್ಯುತ್‌ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲು ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳ ಗ್ರಾಹಕರಿಗೆ ಈ ಕೆಳಕಂಡ ಪಯಾರ್ಯ ವಾಟ್ಸ್‌ ಆಪ್‌ ಸಂಖ್ಯೆಗಳನ್ನು ನೀಡಲಾಗಿದೆ.

ವಾಟ್ಸ್‌ಪ್‌ ಸಂಖ್ಯೆಗಳಿಗೆ ಗ್ರಾಹಕರು ಸಂದೇಶ ಹಾಗೂ ಛಾಯಚಿತ್ರಗಳನ್ನು ತಮ್ಮ ವಿಳಾಸದೊಂದಿಗೆ ಕಳುಹಿಸಿ ತಮ್ಮ ವಿದ್ಯುತ್‌ ಸಂಬಂಧಿತ ಸಮಸ್ಯೆಗಳಿಗೆ ಪರಿಹಾರ ಪಡೆಯಬಹುದಾಗಿದೆ. ಜೊತೆಗೆ ಎಸ್‌ ಎಂಎಸ್ ಗಳನ್ನು ಕಳುಹಿಸಲು ಬೆಸ್ಕಾಂ ಬೆಂಗಳೂರು ಮಹಾನಗರ ವ್ಯಾಪ್ತಿಯ ಗ್ರಾಹಕರಿಗೆ 12 ಮೊಬೈಲ್‌ ಸಂಖ್ಯೆಗಳನ್ನು ಕೂಡ ಒದಗಿಸಲಾಗಿದೆ.

ಜಿಲ್ಲಾವಾರು ವಾಟ್ಸ್‌ ಆಪ್‌ ಸಂಖ್ಯೆಗಳು:

ಬೆಂಗಳೂರು ಪೂರ್ವ- 8277884013

ಬೆಂಗಳೂರು ಪಶ್ಚಿಮ- 8277884012

ಬೆಂಗಳೂರು ಉತ್ತರ- 8277884014

ಬೆಂಗಳೂರು ದಕ್ಷಿಣ- 8277884011

ಕೋಲಾರ- 8277884015

ಚಿಕ್ಕಬಳ್ಳಾಪುರ- 8277884016

ಬೆಂಗಳೂರು ಗ್ರಾಮಾಂತರ- 8277884017

ರಾಮನಗರ- 8277884018

ತುಮಕೂರು- 8277884019

ಚಿತ್ರದುರ್ಗ- 8277884020

ದಾವಣಗೆರೆ- 8277884021

ಸುರಕ್ಷತೆ ಸಂಬಂಧಿಸಿದ ದೂರುಗಳಿಗೆ ವಾಟ್ಸ್‌ ಆಪ್‌ ಸಂಖ್ಯೆ - 9483191212, 9483191222 ಮತ್ತು ಬೆಸ್ಕಾಂ ಸಾಮಾನ್ಯ ವಾಟ್ಸ್‌ ಆಪ್‌ ಸಂಖ್ಯೆ- 9449844640.

ಎಸ್‌ಎಂಎಸ್‌ ಗಳಿಗೆ ಮೊಬೈಲ್ ಸಂಖ್ಯೆ: 9480816108, 9480816109, 9480816110, 9480816111, 9480816112, 9480816113, 9480816114, 9480816115, 9480816116, 9480816117, 9480816118 ಮತ್ತು 9480816119.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್ ವಾರ್ ಗೆ ಹೌತಿಗಳು ಸಜ್ಜು! ಮತ್ತೊಂದು ಜಲಸಂಧಿ ಬಂದ್? ಜಾಗತಿಕ ವ್ಯಾಪಾರಕ್ಕೆ ಮತ್ತಷ್ಟು ಹೊಡೆತ!

ಕೃಷ್ಣಾ ಮೇಲ್ದಂಡೆ ಯೋಜನೆಗೆ 5 ಸಾವಿರ ಕೋಟಿ ಅನುದಾನ: ಅಭಿವೃದ್ಧಿಗೆ ಹಣವಿಲ್ಲವೆಂಬ BJP ಆರೋಪ ಸತ್ಯಕ್ಕೆ ದೂರ; ಸಿಎಂ ಸಿದ್ದರಾಮಯ್ಯ

ಅಭಿಷೇಕ್ ಬಗ್ಗೆ ಭಾರತೀಯ ಆಟಗಾರರಿಗೆ 'ಅಸೂಯೆ ಇದೆಯಾ? ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ ಸಂಜು ಸ್ಯಾಮ್ಸನ್

ಶ್ರೀಗಳು ಎಲ್ಲೆಲ್ಲೋ ದಾರಿ ತಪ್ಪುತ್ತಿದ್ದಾರೆ: ವಿವಾದದ ಕಿಡಿ ಹೊತ್ತಿಸಿದ ರಮೇಶ್ ಬಂಡಿಸಿದ್ದೇಗೌಡ; ಕುಮಾರಸ್ವಾಮಿ ಹೇಳಿದ್ದೇನು?

ಅಂಬೇಡ್ಕರ್‌ ತತ್ವಕ್ಕೆ ತಿಲಾಂಜಲಿ: ಈಗ ಮಗ, ಇನ್ನಾರು ತಿಂಗಳು ಬಿಟ್ಟು ಮೊಮ್ಮಗನನ್ನು ಬೆಳೆಸಿ ಅಂತಾರೆ; ಸಿದ್ದರಾಮಯ್ಯ ಹೇಳಿಕೆಗೆ ಅಶೋಕ್ ವ್ಯಂಗ್ಯ

SCROLL FOR NEXT