ಅಮರನಾಥ ಪಾಟೀಲ್ 
ರಾಜ್ಯ

‘ಸ್ಟೈಪೆಂಡರಿ ಪದವೀಧರರ ಯೋಜನೆ’ ಪುನರಾರಂಭಿಸುವ ಚಿಂತನೆಗಳಿವೆ: ಈಶಾನ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ್ (ಸಂದರ್ಶನ)

Manjula VN

2012-18ರಲ್ಲಿ ಈಶಾನ್ಯ ಪದವೀಧರ ಕ್ಷೇತ್ರವನ್ನು ಪ್ರತಿನಿಧಿಸಿ 6 ವರ್ಷಗಳ ಕಾಲ ವಿರಾಮ ಪಡೆದಿದ್ದ ಅಮರನಾಥ ಪಾಟೀಲ್ ಮತ್ತೆ ಚುನಾವಣಾ ರಾಜಕೀಯಕ್ಕೆ ಮರಳಿದ್ದು, ಬಿಜೆಪಿ ಅಭ್ಯರ್ಥಿಯಾಗಿ ಗುರುವಾರ ನಾಮಪತ್ರ ಸಲ್ಲಿಸಿದ್ದಾರೆ.

ಈ ನಡುವೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಮತ್ತೊಮ್ಮೆ ಆಯ್ಕೆಯಾದರೆ ಈಶಾನ್ಯ ಪದವೀಧರರ ಕ್ಷೇತ್ರವನ್ನು ಸುಧಾರಿಸುವ ಕುರಿತು ಇರುವ ಯೋಜನೆ ಹಾಗೂ ಚಿಂತನೆಗಳನ್ನು ಹಂಚಿಕೊಂಡಿದ್ದಾರೆ. ಸಂದರ್ಶನದ ಆಯ್ದ ಭಾಗಗಳು ಇಂತಿವೆ...

2012-2018 ರಲ್ಲಿ ಈಶಾನ್ಯ ಪದವೀಧರ ಕ್ಷೇತ್ರವನ್ನು ಯಶಸ್ವಿಯಾಗಿ ಪ್ರತಿನಿಧಿಸಿದ್ದೀರಿ, ಆದರೆ, ನೀವು ಹಾಲಿ ಸದಸ್ಯರಾಗಿದ್ದರೂ 2018ರ ಚುನಾವಣೆಯಲ್ಲಿ ಬಿಜೆಪಿ ನಿಮಗೆ ಟಿಕೆಟ್ ನಿರಾಕರಿಸಿ, ಬೇರೆ ಅಭ್ಯರ್ಥಿಗೆ ಟಿಕೆಟ್ ನೀಡಿತ್ತು. ಈ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು?

ನಾವು ಪಕ್ಷದ ನಿರ್ಧಾರಗಳನ್ನು ಪ್ರಶ್ನಿಸಬಾರದು. ಶಿಸ್ತಿನ ಸಿಪಾಯಿಯಂತೆ ಕೆಲಸ ಮಾಡಬೇಕು. ಪ್ರತಿಯೊಂದು ಕ್ಷೇತ್ರ ಮತ್ತು ರಾಜಕೀಯ ಪಕ್ಷಗಳಲ್ಲಿ ಸಾಮಾನ್ಯ ಪ್ರಯೋಗಗಳು ಇದ್ದೇ ಇರುತ್ತವೆ. ಪಕ್ಷ ಎಲ್ಲಾ ಜಿಲ್ಲೆಗಳು, ಜಾತಿಗಳು ಮತ್ತು ಸಮುದಾಯಗಳ ಅಗತ್ಯಗಳನ್ನು ಪೂರೈಸಬೇಕು. ಆ ಸಮಯದಲ್ಲಿ ನಾನು ಸ್ವಲ್ಪ ಮಟ್ಟಿಗೆ ನಿರಾಶೆ ಅನುಭವಿಸಿರಬಹುದು, ಆದರೆ, ಪಕ್ಷಕ್ಕೆ ಸಮರ್ಪಣಾಭಾವದಿಂದ ಕೆಲಸ ಮಾಡುವುದನ್ನು ಮುಂದುವರೆಸಿದೆ. ಆ ಸಮರ್ಪಣಾ ಭಾವ ಈಗ ಫಲ ನೀಡಿದೆ.

ಕಾಂಗ್ರೆಸ್ ಸರ್ಕಾರದ ಯುವ ನಿಧಿ ಯೋಜನೆಯು ಯುವ ಪದವೀಧರರನ್ನು ಆಕರ್ಷಿಸಿದ್ದು, ತಿಂಗಳಿಗೆ 3,000 ರೂ. ನೀಡಲಾಗುತ್ತಿದೆ. ಇದು ನಿಮ್ಮ ಯಶಸ್ಸಿಗೆ ಅಡ್ಡಿಯಾಗುತ್ತದೆ ಎದು ನೀವು ಭಾವಿಸುವಿರೇ?

ನನ್ನ ಅಂಕಿಅಂಶಗಳ ಪ್ರಕಾರ, 2023 ರಲ್ಲಿ ಪದವಿ ಪೂರ್ಣಗೊಳಿಸಿದ ಶೇಕಡಾ 50 ರಷ್ಟು ಪದವೀಧರರೂ ಈ ಯೋಜನೆಯಡಿಯಲ್ಲಿ ಸ್ಟೈಫಂಡ್ ಪಡೆಯುತ್ತಿಲ್ಲ. 2023ರಲ್ಲಿ ಪದವಿಯಲ್ಲಿ ಉತ್ತೀರ್ಣರಾದ ಪದವೀಧರರನ್ನು ನಿರುದ್ಯೋಗಿಗಳೆಂದು ಕರೆಯುವ ಪರಿಕಲ್ಪನೆ ತಪ್ಪು.

ಹಾಗಾದರೆ ನಿರುದ್ಯೋಗಿ ಪದವೀಧರರು ಯಾರು?

ಕನಿಷ್ಠ 3-4 ವರ್ಷಗಳ ಹಿಂದೆ ಪದವಿಯಲ್ಲಿ ಉತ್ತೀರ್ಣರಾದ ಪದವೀಧರರನ್ನು ನಿರುದ್ಯೋಗಿ ಪದವೀಧರರು ಎಂದು ಕರೆಯಬಹುದು. ನೊಂದವರು ಎಂದರೆ ಇವರೆ. ಹೀಗಾಗಿ ನೆರವು ನೀಡುವಲ್ಲಿ ಅವರಿಗೂ ಆದ್ಯತೆ ನೀಡಬೇಕು.

ಈ ನಿಟ್ಟಿನಲ್ಲಿ ನಿಮ್ಲ್ಲಿ ಯಾವುದೇ ಯೋಜನೆಗಳಿವೆಯೇ?

ಸುಮಾರು 3 ದಶಕಗಳ ಹಿಂದೆ, ‘ಸ್ಟೈಪೆಂಡಿಯರಿ ಗ್ರಾಜುಯೇಟ್ಸ್ ಸ್ಕೀಮ್’ ಅಸ್ತಿತ್ವದಲ್ಲಿತ್ತು, ಅದರ ಅಡಿಯಲ್ಲಿ ಪದವೀಧರರನ್ನು ವಿವಿಧ ಇಲಾಖೆಗಳಲ್ಲಿ ‘ಸ್ಟೈಪಂಡಿಯರಿ ಪದವೀಧರರು’ ಆಗಿ ನಿಗದಿತ ಗೌರವಧನದಲ್ಲಿ ಕೆಲಸ ಮಾಡಲು ಆಯ್ಕೆ ಮಾಡಲಾಗುತ್ತಿತ್ತು. ಈ ಬಾರಿ ನಾನು ಆಯ್ಕೆಯಾದರೆ, ಸ್ಟೈಪೆಂಡರಿ ಪದವೀಧರರ ಯೋಜನೆಯನ್ನು ಮರಳಿ ತರಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೇಲೆ ಒತ್ತಡ ಹೇರುತ್ತೇನೆ. ಇದರಿಂದ ಉತ್ತಮ ಗೌರವಧನವನ್ನು ಪಾವತಿಸುವ ಮೂಲಕ 5 ವರ್ಷಗಳ ನಿರ್ದಿಷ್ಟ ಅವಧಿಗೆ ಸಾಧ್ಯವಾದಷ್ಟು ಯುವಕರಿಗೆ ಉದ್ಯೋಗ ನೀಡುತ್ತೇನೆ. ಒಂದು ವೇಳೆ ಅವರ ಕೆಲಸ ತೃಪ್ತಿಕರವಾಗಿದ್ದರೆ, ಅವರನ್ನು ಅದೇ ಇಲಾಖೆಯಲ್ಲಿ ಸಾಮಾನ್ಯ ಉದ್ಯೋಗಿ ಎಂದು ಪರಿಗಣಿಸಬಹುದು. ಇಲ್ಲದಿದ್ದರೆ, ಅವರ ಸೇವಾ ಅವಧಿಯು ಒಪ್ಪಂದದ ಅವಧಿಯ ಕೊನೆಗೊಳ್ಳುತ್ತದೆ. ಒಪ್ಪಂದದ ನಿಯಮಗಳು ಸ್ಪಷ್ಟವಾಗಿರಬೇಕು ಮತ್ತು ನ್ಯಾಯಾಲಯದಲ್ಲಿ ಅದನ್ನು ಪ್ರಶ್ನಿಸುವ ಅವಕಾಶವನ್ನು ನೀಡಬಾರದು.

ಇದು ಸಾಧ್ಯ ಎಂದು ನೀವು ಭಾವಿಸುತ್ತೀರಾ?

ನಿರುದ್ಯೋಗಿ ಪದವೀಧರರು ಸಿಕ್ಕ ಕೆಲಸದಲ್ಲಿ ಗೌರವಧನ ಸಿಕ್ಕರೆ ಸಂತೋಷಪಡುತ್ತಾನ. ಇದು ಅವರಿಗೆ ನೈತಿಕತೆಯನ್ನು ಹೆಚ್ಚಿಸುತ್ತದೆ. ಇದಲ್ಲದೆ, 'ಸ್ಟೈಪೆಂಡಿಯರಿ ಪದವೀಧರರ ಯೋಜನೆ'ಯನ್ನು ಪರಿಚಯಿಸುವ ಮೂಲಕ, ಸರ್ಕಾರವು ಎಲ್ಲಾ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬಹುದು. ಪ್ರತಿಭಾವಂತ ಪದವೀಧರರು ಉತ್ತಮ ವೇತನ ಸಿಗುವ ಉದ್ಯೋಗ ದೊರೆತರೆ, ಈ ಉದ್ಯೋಗವನ್ನು ತೊರೆಯಬಹುದಾಗಿದೆ. ಅದಲ್ಲದೆ, ನಿರುದ್ಯೋಗಿ ಯುವಕರಿಗೆ ಉದ್ಯೋಗ ನೀಡುವುದರ ಜೊತೆಗೆ ಕರ್ನಾಟಕದಲ್ಲಿ ವಿಶೇಷವಾಗಿ ಕಲ್ಯಾಣ ಕರ್ನಾಟಕದಲ್ಲಿ ನೆಲೆಸಿರುವ ಎಲ್ಲಾ ಪದವೀಧರರಿಗೆ ಕಲ್ಯಾಣ ಕಾರ್ಯಕ್ರಮಗಳನ್ನು ಪರಿಚಯಿಸುವುದು ನನ್ನ ಆದ್ಯತೆಯಾಗಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಪ್ರತಿಭಟನೆ ನಮ್ಮ ಸಾಂವಿಧಾನಿಕ ಹಕ್ಕು’: Jantar Mantar ಧರಣಿಗೆ ದಿನಾಂಕ ನಿಗದಿಪಡಿಸಿ; ದೆಹಲಿ ಪೊಲೀಸರಿಗೆ 24 ಗಂಟೆಗಳ ಗಡುವು ಕೊಟ್ಟ Cockroach Janta Party..!

‘Vote chori’ ಹೈಡ್ರಾಮಾ: "ಭೇಟಿ ಸಾಧ್ಯವಿಲ್ಲ, ಏನಿದ್ದರೂ ಕೋರ್ಟ್ ಮೂಲಕವೇ ಬನ್ನಿ; ರಾಹುಲ್ ಗಾಂಧಿ-ಖರ್ಗೆ ಭೇಟಿ ಮನವಿ ತಿರಸ್ಕರಿಸಿದ CJI ಸೂರ್ಯ ಕಾಂತ್..!

ಹೆಬ್ಬಾಳ ಕಿರು ಸುರಂಗ ಯೋಜನೆ "ಅವೈಜ್ಞಾನಿಕ": 1,350 ಕೋಟಿ ರೂ. ಸಾರ್ವಜನಿಕ ಹಣ ಪೋಲು: ಸಂಸದ ತೇಜಸ್ವಿ ಸೂರ್ಯ ಆಕ್ಷೇಪ

ನಾನೀಗ DCM, ಡಿಕೆ.ಶಿವಕುಮಾರ್ CM, ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ: ಡಾ. ಜಿ. ಪರಮೇಶ್ವರ್

ಶಕ್ತಿ, ಜ್ಞಾನ, ಸಂಸ್ಕೃತಿ, ಸಮಾನತೆಯ ಸಂಗಮ ಮೈಸೂರು ದಸರಾ: ಸಿಎಂ ಡಿಕೆ ಶಿವಕುಮಾರ್