ಸಾಂದರ್ಭಿಕ ಚಿತ್ರ  
ರಾಜ್ಯ

ಮೈಸೂರು: ಹೆಚ್.ಡಿ.ಕೋಟೆ ತಾಲ್ಲೂಕಿನಲ್ಲಿ ಹುಲಿ ದಾಳಿಗೆ ಮಹಿಳೆ ಸಾವು

ನಾಡೊಳಗೆ ನುಗ್ಗಿ ಮನುಷ್ಯರ ಮೇಲೆ ಹುಲಿ ದಾಳಿ ಹಾವಳಿ ಮತ್ತೆ ಹೆಚ್ಚಾಗಿದೆ. ಮೈಸೂರು ಜಿಲ್ಲೆಯ ಹೆಚ್ ಡಿ ಕೋಟೆ ತಾಲೂಕಿನಲ್ಲಿ 48 ವರ್ಷದ ಮಹಿಳೆಯನ್ನು ಹುಲಿ ಕೊಂದು ಹಾಕಿದೆ. ಇಂದು ಭಾನುವಾರ ನಸುಕಿನ ಜಾವ ಅರಣ್ಯ ಪ್ರದೇಶದಲ್ಲಿ ಶವ ಪತ್ತೆಯಾಗಿದೆ.

ಮೈಸೂರು: ನಾಡೊಳಗೆ ನುಗ್ಗಿ ಹುಲಿಯ ಹಾವಳಿ ಮತ್ತೆ ಹೆಚ್ಚಾಗಿದೆ. ಮೈಸೂರು ಜಿಲ್ಲೆಯ ಹೆಚ್ ಡಿ ಕೋಟೆ ತಾಲೂಕಿನಲ್ಲಿ 48 ವರ್ಷದ ಮಹಿಳೆಯನ್ನು ಹುಲಿ ಕೊಂದು ಹಾಕಿದೆ. ಇಂದು ಭಾನುವಾರ ನಸುಕಿನ ಜಾವ ಅರಣ್ಯ ಪ್ರದೇಶದಲ್ಲಿ ಶವ ಪತ್ತೆಯಾಗಿದೆ.

ಹೆಚ್ ಡಿ ಕೋಟೆ ತಾಲೂಕಿನ ಮೂರ್ಬಂದ ಬೆಟ್ಟದಲ್ಲಿ ನಿನ್ನೆ ಶನಿವಾರ ರಾತ್ರಿ ಚಿಕ್ಕಿ ಎಂಬ ಮಹಿಳೆ ಹುಲಿ ದಾಳಿಗೆ ಬಲಿಯಾಗಿದ್ದಾರೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಮಹಿಳೆ ಎನ್ ಬೇಗೂರಿನ ಮಲದವಾಡಿ ಹಾಡಿಯವರು.

ಮೇಕೆಗಳನ್ನು ಸಾಕುತ್ತಿದ್ದ ಮಹಿಳೆ ಮೇಲೆ ಹುಲಿ ದಾಳಿ ನಡೆಸಿ ಕೊಂದುಹಾಕಿ ದೇಹವನ್ನು ಕಾಡಿನೊಳಗೆ ಎಳೆದುಕೊಂಡು ಹೋಗಿತ್ತು. ಕುರಿಗಳನ್ನು ಮೇಯಿಸಲು ಹೋಗಿದ್ದ ಚಿಕ್ಕಿಯವರು ನಿನ್ನೆ ರಾತ್ರಿಯಾದರೂ ಮನೆಗೆ ಬಾರದಿದ್ದಾಗ ಕುಟುಂಬಸ್ಥರು, ಗ್ರಾಮಸ್ಥರು ಹಾಗೂ ಅರಣ್ಯ ಸಿಬ್ಬಂದಿ ಹುಡುಕಾಟ ಆರಂಭಿಸಿದ್ದಾರೆ.

ಇಂದು ಬೆಳಗ್ಗೆ ಅರಣ್ಯ ಕಾವಲು ಗೋಪುರದ ಬಳಿ ಶವ ಪತ್ತೆಯಾಗಿದೆ. ಅಂತರಸಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅರಣ್ಯಾಧಿಕಾರಿಗಳು ಸ್ಥಳದ ಸಮೀಪದಲ್ಲಿ ಹುಲಿಯ ಹೆಜ್ಜೆ ಗುರುತುಗಳನ್ನು ಪತ್ತೆ ಮಾಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Iran war: ಬುಶೆಹರ್ ಅಣುಸ್ಥಾವರದ ಮೇಲೆ ಅಮೆರಿಕ-ಇಸ್ರೇಲ್ ಕ್ಷಿಪಣಿ ದಾಳಿ, ಓರ್ವ ಸಾವು

ಇರಾನ್-ಇಸ್ರೇಲ್ ಯುದ್ಧದ ನಡುವೆ ಭಾರತದ ರಕ್ಷಣಾ ರಫ್ತು ಇತಿಹಾಸದಲ್ಲೇ ದಾಖಲೆಯ ಏರಿಕೆ!, ಖರೀದಿದಾರರು ಯಾರು?

ಭಾರತದತ್ತ ಹೊರಟಿದ್ದ ಇರಾನ್ ತೈಲ ಹೊತ್ತ ಹಡಗು ಏಕಾಏಕಿ ಚೀನಾಗೆ ರೀ-ರೂಟ್; ಕೇಂದ್ರ ಹೇಳಿದ್ದೇನು?

Iran war ನಡುವೆಯೂ ಭಾರತ ದೇಶೀಯ ಮತ್ತು ಬಾಹ್ಯ ಸವಾಲುಗಳ ಯಶಸ್ವಿಯಾಗಿ ನಿರ್ವಹಿಸಿದೆ: EAM Jaishankar

'ನಾನು ಸಂಸತ್ತಿಗೆ ಹೋಗುವುದು ಗದ್ದಲ ಸೃಷ್ಟಿಸಲು ಅಲ್ಲ': AAP ಆರೋಪಗಳನ್ನು ತಳ್ಳಿಹಾಕಿದ ರಾಘವ್ ಚಡ್ಡಾ

SCROLL FOR NEXT