ಬೆಂಗಳೂರು: ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ-ಕರ್ನಾಟಕ (RERA-K) ಅಪೂರ್ಣಗೊಂಡಿರುವ ವಸತಿ ಯೋಜನೆಯನ್ನು ಪೂರ್ಣಗೊಳಿಸಲು ಫ್ಲಾಟ್ ಹಂಚಿಕೆದಾರರು ರಚಿಸಿರುವ ಅಸೋಸಿಯೇಷನ್ ಗೆ ಹಸ್ತಾಂತರಿಸಿದೆ. ಹೆಚ್ಚುವರಿಯಾಗಿ, ಯೋಜನೆಯನ್ನು ಪೂರ್ಣಗೊಳಿಸಲು ಸಂಘಕ್ಕೆ 4.49 ಕೋಟಿ ರೂಪಾಯಿ ಪಾವತಿಸಲು ಬಿಲ್ಡರ್‌ಗೆ ಹಣ ನೀಡಿದ ಹಣಕಾಸು ಸಂಸ್ಥೆಗೆ ಪ್ರಾಧಿಕಾರವು ಆದೇಶಿಸಿದೆ.
‘ಕಮ್ಯೂನ್ ಒನ್’. ಆನೇಕಲ್ ತಾಲೂಕಿನ ಆನೇಕಲ್-ಚಂದಾಪುರ ರಸ್ತೆಯಲ್ಲಿ 1BHK, 2BHK ಮತ್ತು 3BHK ಒಳಗೊಂಡಿರುವ 384 ಫ್ಲಾಟ್‌ಗಳ ಯೋಜನೆಯಾಗಿದ್ದು, ಬಿಲ್ಡರ್, ಕಮ್ಯೂನ್ ಪ್ರಾಪರ್ಟೀಸ್ ಪ್ರೈವೇಟ್ ಲಿಮಿಟೆಡ್ ಪೂರ್ಣ ಮಾಡಿಲ್ಲ. ಕಂಪನಿಯು ಫ್ಲಾಟ್‌ಗಳನ್ನು ಮುಂಬೈ ಮೂಲದ ಆನಂದ್ ರಾಠಿ ಗ್ಲೋಬಲ್ ಫೈನಾನ್ಸ್ ಲಿಮಿಟೆಡ್ (ARGFL Limited) ಗೆ ಹಂಚಿಕೆದಾರರ ಒಪ್ಪಿಗೆಯಿಲ್ಲದೆ ಸಂಪನ್ಮೂಲಗಳನ್ನು ಕ್ರೋಢೀಕರಿಸಲು ಅಡಮಾನ ಇಟ್ಟಿದೆ.
ಫೆಬ್ರವರಿ 2021 ರಲ್ಲಿ ಕಮ್ಯೂನ್ ಒನ್ ಓನರ್ಸ್ ಕೋ ಆಪರೇಟಿವ್ ಸೊಸೈಟಿ ಮತ್ತು ಕಮ್ಯೂನ್ ಬಯರ್ಸ್ ವೆಲ್ಫೇರ್ ಅಸೋಸಿಯೇಷನ್ ದಾಖಲಿಸಿದ ದೂರಿನ ಮೇರೆಗೆ ರೇರಾ ಅಧ್ಯಕ್ಷ ಎಚ್‌ಸಿ ಕಿಶೋರ್ ಚಂದ್ರ ಮತ್ತು ಸದಸ್ಯರಾದ ನೀಲಮಣಿ ಎನ್ ರಾಜು ಮತ್ತು ಜಿಆರ್ ರೆಡ್ಡಿ ಅವರು ಮೇ 17 ರಂದು ಆದೇಶ ಹೊರಡಿಸಿದ್ದಾರೆ.
ಹಂಚಿಕೆದಾರರನ್ನು ಪ್ರತಿನಿಧಿಸಿದ್ದ ಪ್ರದೀಪ್ ಕುಮಾರ್ ಪಿಕೆ ಮತ್ತು ಅಸೋಸಿಯೇಟ್ಸ್‌ನ ವಕೀಲ ಪ್ರದೀಪ್ ಕುಮಾರ್ ಅವರು TNIE ಪ್ರತಿನಿಧಿ ಜೊತೆ ಮಾತನಾಡಿ, ಖರೀದಿದಾರರು ಫ್ಲಾಟ್‌ಗಳನ್ನು ಖರೀದಿಸಲು 45 ಲಕ್ಷದಿಂದ 55 ಲಕ್ಷ ರೂಪಾಯಿಗಳವರೆಗೆ ಪಾವತಿಸಿದ್ದಾರೆ. ಯೋಜನೆಯು ಐದು ಬ್ಲಾಕ್‌ಗಳನ್ನು ಹೊಂದಿದ್ದು, ಇಂಟೀರಿಯರ್ ಕೆಲಸಗಳು ಇನ್ನೂ ಪೂರ್ಣಗೊಂಡಿಲ್ಲ. ಹಣಕಾಸು ಸಂಸ್ಥೆ ಮತ್ತು ಬಿಲ್ಡರ್ ನಡುವಿನ ಒಪ್ಪಂದವು RERA ತನಿಖೆಯಲ್ಲಿ ಸಂಪೂರ್ಣವಾಗಿ ಬಹಿರಂಗವಾಗಿದೆ. ಇದೀಗ ಅಕ್ರಮವಾಗಿ ತೆಗೆದುಕೊಂಡಿರುವ ಹಣವನ್ನು ಹಂಚಿಕೆದಾರರ ಸಂಘಕ್ಕೆ (ಸಹಕಾರಿ ಸಂಘವಾಗಿ ನೋಂದಾಯಿಸಲಾಗಿದೆ) ಪಾವತಿಸುವಂತೆ ಫೈನಾನ್ಷಿಯರ್‌ಗೆ ನಿರ್ದೇಶನ ನೀಡಿದೆ ಎಂದರು.
ಸಂಸ್ಥೆಯು ಬಿಲ್ಡರ್‌ನೊಂದಿಗೆ ಮೋಸದಿಂದ ಒಪ್ಪಂದ ಮಾಡಿಕೊಂಡಿದೆ ಎಂದು ಅವರು ಆರೋಪಿಸಿದರು. ಸಾಲದ ಮರುಪಾವತಿಗೆ ಅನುಕೂಲವಾಗುವಂತೆ, ಬಿಲ್ಡರ್ 40 ಫ್ಲಾಟ್‌ಗಳನ್ನು ಪ್ರತಿ ಫ್ಲ್ಯಾಟ್‌ಗೆ ಕೇವಲ 20 ಲಕ್ಷ ರೂಪಾಯಿಗೆ ಫೈನಾನ್ಷಿಯರ್‌ಗೆ ಮಾರಾಟ ಮಾಡಿದರು. ಆನಂದ್ ರಾಠಿ ಹೆಚ್ಚಿನ ಬೆಲೆಗೆ ಫ್ಲಾಟ್‌ಗಳನ್ನು ಮಾರಾಟ ಮಾಡುವ ಮೂಲಕ ಹೆಚ್ಚುವರಿ ಮೊತ್ತವನ್ನು ಬಿಲ್ಡರ್‌ಗೆ ಹಸ್ತಾಂತರಿಸಬೇಕಾಗಿತ್ತು. ಈವರೆಗೆ 18 ಫ್ಲ್ಯಾಟ್‌ಗಳನ್ನು ಮಾರಾಟ ಮಾಡಲಾಗಿದ್ದು, ಫೈನಾನ್ಷಿಯರ್‌ನಿಂದ 4.39 ಕೋಟಿ ಹೆಚ್ಚುವರಿ ಹಣ ಸಂಗ್ರಹಿಸಲಾಗಿದೆ ಎಂದರು.