ಸಾಂದರ್ಭಿಕ ಚಿತ್ರ  
ರಾಜ್ಯ

ಕರ್ನಾಟಕ ಅಂಚೆಯಿಂದ 16,782 ಇ-ಅಂಚೆ ಮತಪತ್ರಗಳ ರವಾನೆ

ಕರ್ನಾಟಕ ಅಂಚೆ ವೃತ್ತದಿಂದ ಇದುವರೆಗೆ 16,782 ಮತಪತ್ರಗಳನ್ನು ರವಾನಿಸಲಾಗಿದೆ. ಇದರಲ್ಲಿ ಲೋಕಸಭೆ, ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಒಡಿಶಾ ಮತ್ತು ಸಿಕ್ಕಿಂ ಚುನಾವಣೆಗಳು ಮತ್ತು 25 ರಾಜ್ಯಗಳ 25 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಗಳು ಸೇರಿವೆ.

ಬೆಂಗಳೂರು: ಈ ಬಾರಿಯ ಲೋಕಸಭೆ ಚುನಾವಣೆಯ ಕರ್ತವ್ಯಕ್ಕೆ ಮನೆಗಳಿಂದ ದೂರ ಹೋಗಿ ಅಥವಾ ಇದ್ದಲ್ಲಿಯೇ ಚುನಾವಣಾ ಕರ್ತವ್ಯದಲ್ಲಿ ನಿರತರಾಗಿದ್ದ ಸಿಬ್ಬಂದಿ ಮತ್ತು ಚುನಾವಣಾ ಕರ್ತವ್ಯ ಸಿಬ್ಬಂದಿ ವಿದ್ಯುನ್ಮಾನ ಪ್ರಸರಣ ಅಂಚೆ ಮತಪತ್ರ ವ್ಯವಸ್ಥೆ (ETPBS) ಮೂಲಕ ಮತ ಚಲಾಯಿಸಿದ್ದಾರೆ.

ಕರ್ನಾಟಕ ಅಂಚೆ ವೃತ್ತದ ಮುಖ್ಯ ಪೋಸ್ಟ್‌ಮಾಸ್ಟರ್ ಜನರಲ್ ಎಸ್ ರಾಜೇಂದ್ರ ಕುಮಾರ್, ನಮ್ಮ ಅಂಚೆ ವೃತ್ತದಿಂದ ಇದುವರೆಗೆ 16,782 ಮತಪತ್ರಗಳನ್ನು ರವಾನಿಸಲಾಗಿದೆ. ಇದರಲ್ಲಿ ಲೋಕಸಭೆ, ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಒಡಿಶಾ ಮತ್ತು ಸಿಕ್ಕಿಂ ಚುನಾವಣೆಗಳು ಮತ್ತು 25 ರಾಜ್ಯಗಳ 25 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಗಳು ಸೇರಿವೆ ಎಂದು ಹೇಳಿದ್ದಾರೆ.

ಎಲ್ಲಾ ಅಂಚೆ ಕಚೇರಿಗಳು ವ್ಯವಸ್ಥೆಯನ್ನು ಜಾರಿಗೆ ತರಲು ಸಜ್ಜಾಗಿದೆ. ವಿಶೇಷ ಸೌಲಭ್ಯ ಕೌಂಟರ್‌ಗಳಲ್ಲಿ ಅರ್ಜಿಗಳು ಲಭ್ಯವಿರುತ್ತವೆ. ಸಿಬ್ಬಂದಿ ತಮ್ಮ ಮತಗಳನ್ನು ಚಲಾಯಿಸಲು ಸಾಧ್ಯವಾಗುತ್ತದೆ, ಅದನ್ನು ಚುನಾವಣಾಧಿಕಾರಿಗಳಿಗೆ ಕಳುಹಿಸಲಾಗುತ್ತದೆ ಎಂದು ಹೇಳಿದರು.

ETPBS ವಿದ್ಯುನ್ಮಾನ ಮತಗಳ ಪ್ರಸರಣವನ್ನು ಸಕ್ರಿಯಗೊಳಿಸುತ್ತದೆ. ಚುನಾವಣಾಧಿಕಾರಿಗಳು ಕ್ಯೂಆರ್ ಕೋಡ್ ಮೂಲಕ ಮತಗಳನ್ನು ಮೌಲ್ಯಮಾಪನ ಮಾಡುತ್ತಾರೆ. ಡೆಸ್ಕ್‌ಟಾಪ್ ಅಪ್ಲಿಕೇಶನ್ ಎಲೆಕ್ಟ್ರಾನಿಕ್ ಮತಪತ್ರವನ್ನು ರಚಿಸುತ್ತದೆ. ಕ್ಷೇತ್ರಗಳ ಆಧಾರದ ಮೇಲೆ, ಬ್ಯಾಲೆಟ್ ಪೇಪರ್ ನ್ನು ವಿದ್ಯುನ್ಮಾನವಾಗಿ ಸೇವಾ ಮತದಾರರಿಗೆ ರವಾನಿಸಲಾಗುತ್ತದೆ.

ಪ್ರಭಾರಿ ಅಧಿಕಾರಿ ಮತದಾರರ ಪರವಾಗಿ ಬ್ಯಾಲೆಟ್ ಪೇಪರ್ ನ್ನು ಡೌನ್‌ಲೋಡ್ ಮಾಡುತ್ತಾರೆ. ಅಂತಹ ಡೌನ್‌ಲೋಡ್ ಮಾಡಿದ ಮತಪತ್ರಗಳನ್ನು ಸುರಕ್ಷಿತ ನೆಟ್‌ವರ್ಕ್ ಬಳಸಿ ಹಸ್ತಚಾಲಿತವಾಗಿ ಅಥವಾ ವಿದ್ಯುನ್ಮಾನವಾಗಿ ರವಾನಿಸಲಾಗುತ್ತದೆ. ಬ್ಯಾಲೆಟ್ ಪೇಪರ್ ತೆರೆಯಲು ಸೇವಾ ಮತದಾರರಿಗೆ ಪಿನ್ ಒದಗಿಸಲಾಗುವುದು ಎಂದು ವಿವರಿಸಿದರು.

ಇ-ಟ್ರಾನ್ಸ್ಮಿಟೆಡ್ ಬ್ಯಾಲೆಟ್ ಪೇಪರ್‌ಗಳನ್ನು ಯಾವುದೇ ಅಂಚೆ ಶುಲ್ಕವಿಲ್ಲದೆ ಬುಕ್ ಮಾಡಲಾಗುತ್ತದೆ. ಸಾಮಾನ್ಯ ಮತಗಳನ್ನು ಎಣಿಸಿದ ನಂತರ, ETPBS ಮತಗಳನ್ನು ಪ್ರತ್ಯೇಕವಾಗಿ ಎಣಿಕೆ ಮಾಡಲಾಗುತ್ತದೆ. ಎಲ್ಲಾ ಅಂಚೆ ಕಚೇರಿಗಳು ಇಟಿಪಿಬಿಎಸ್ ನ್ನು ಸ್ಪೀಡ್ ಪೋಸ್ಟ್ ಮೂಲಕ ಉಚಿತವಾಗಿ ಬುಕ್ ಮಾಡಬೇಕಾಗುತ್ತದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT