ಸಾಂದರ್ಭಿಕ ಚಿತ್ರ 
ರಾಜ್ಯ

ಲೋಕಸಭೆ ಚುನಾವಣೆ: ಹೆಂಡವಿಲ್ಲ, ಹಣವಿಲ್ಲ, ಮತದಾರನ ಓಲೈಕೆಗೆ ಹರಿದಿದೆ ಹೊನ್ನಿನ ಹೊಳೆ!

ಚುನಾವಣಾ ಸೀಜರ್ಸ್ ಮ್ಯಾನೇಜ್‌ಮೆಂಟ್ ಸಿಸ್ಟಮ್ (ಇಎಸ್‌ಎಂಎಸ್) ಪ್ರಕಾರ, ಮಾದರಿ ನೀತಿ ಸಂಹಿತೆ ಜಾರಿಯಾದಾಗಿನಿಂದ ಮೇ 30 ರವರೆಗೆ 5,94,01,07,567 ರೂಪಾಯಿ ಮೌಲ್ಯದ ನಗದು ಮತ್ತು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬೆಂಗಳೂರು: ಲೋಕಸಭೆ ಚುನಾವಣೆ ಫಲಿತಾಂಶಕ್ಕೆ ಇನ್ನೂ ಕೆಲವೇ ದಿನಗಳು ಬಾಕಿಯಿದ್ದು, ಚುನಾವಣಾ ಮಾದರಿ ನೀತಿ ಸಂಹಿತೆ (ಎಂಸಿಸಿ) ಅಂತ್ಯಗೊಳ್ಳಲು ಕೇವಲ ಆರು ದಿನಗಳು ಇರುವಾಗ, ಇಲ್ಲಿಯವರೆಗೆ ಆಯೋಗ ವಶಪಡಿಸಿಕೊಂಡಿರುವ ಹಣ ಮತ್ತು ಚಿನ್ನ ದಾಖಲೆ ಸೃಷ್ಟಿಸಿದೆ.

ಚುನಾವಣಾ ಸೀಜರ್ಸ್ ಮ್ಯಾನೇಜ್‌ಮೆಂಟ್ ಸಿಸ್ಟಮ್ (ಇಎಸ್‌ಎಂಎಸ್) ಪ್ರಕಾರ, ಮಾದರಿ ನೀತಿ ಸಂಹಿತೆ ಜಾರಿಯಾದಾಗಿನಿಂದ ಮೇ 30 ರವರೆಗೆ 5,94,01,07,567 ರೂಪಾಯಿ ಮೌಲ್ಯದ ನಗದು ಮತ್ತು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

2019 ರ ಲೋಕಸಭೆ ಚುನಾವಣೆಯಲ್ಲಿ 88 ಕೋಟಿ ರೂಪಾಯಿ ಮೌಲ್ಯದ ನಗದು ಮತ್ತು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು ಮತ್ತು 2023 ರ ವಿಧಾನಸಭಾ ಚುನಾವಣೆಯಲ್ಲಿ ಅದು 388 ಕೋಟಿ ರೂ.ವಶ ಪಡಿಸಿಕೊಳ್ಳಲಾಗಿತ್ತು. ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯ ಅಂಕಿಅಂಶಗಳ ಪ್ರಕಾರ, ಕರ್ನಾಟಕದಲ್ಲಿ ಮತದಾನ ಮುಗಿದ ಎರಡು ದಿನಗಳ ನಂತರ, ಮೇ 9 ರವರೆಗೆ, 5,58,01,45,697 ರೂಪಾಯಿಗಳ ಮೌಲ್ಯದ್ದಾಗಿದೆ. ಅದರಲ್ಲಿ 11,97,49,560 ರೂ. ಮೌಲ್ಯದ ಚಿನ್ನ ವಶಪಡಿಸಿಕೊಳ್ಳಲಾಗಿದೆ.

ಚುನಾವಣಾ ಅಧಿಕಾರಿಗಳ ಪ್ರಕಾರ, ಈ ಬಾರಿ ಚಿನ್ನದ ಹರಿವು ಹೆಚ್ಚು ಕಂಡುಬಂದಿದೆ. ಮಾಹಿತಿ ಪ್ರಕಾರ 1,01,10,62,204 ಮೌಲ್ಯದ 472.22 ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಇದು 2019 ರ ಚುನಾವಣೆಗಿಂತ (7.586 ಕೆಜಿ) ಮತ್ತು 2023 ರ ಚುನಾವಣೆಯಲ್ಲಿ (182.56 ಕೆಜಿ ಮೌಲ್ಯದ ರೂ 95.78 ಕೋಟಿ) ವಶಪಡಿಸಿಕೊಂಡದ್ದಕ್ಕಿಂತ ಹೆಚ್ಚಾಗಿದೆ.

ಮಾದರಿ ನೀತಿ ಸಂಹಿತೆ ಜಾರಿಗೆ ಬಂದ ತಕ್ಷಣ ಚಿನ್ನದ ವಶಪಡಿಸಿಕೊಳ್ಳುವ ಪ್ರವೃತ್ತಿಯು ಪ್ರಾರಂಭವಾಯಿತು. ಮಾರ್ಚ್ 16 ರಿಂದ 26 ರವರೆಗೆ 5.47 ಕೋಟಿ ಮೌಲ್ಯದ 9.74 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದ್ದೇವೆ. ಶೇ 182% ರಷ್ಟು ಹೆಚ್ಚಳ ಕಂಡುಬಂದಿದೆ. ಮೇ 9ರವರೆಗೆ 1,01,10,62,204 ರೂ. ಚಿನ್ನ ವಶಪಡಿಸಿಕೊಳ್ಳಲಾಗಿದೆ. ಇದು ಆಸಕ್ತಿದಾಯಕವಾಗಿದ್ದರೂ, ಆತಂಕಕಾರಿ ಪ್ರವೃತ್ತಿಯಾಗಿದೆ ಎಂದು ಚುನಾವಣಾ ಕಚೇರಿಯ ಅಧಿಕಾರಿಯೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು.

ರಾಜಕಾರಣಿಗಳು ಮತದಾರರನ್ನು ಓಲೈಸಲು ಬೆಲೆಬಾಳುವ ಲೋಹವನ್ನು ಬಳಸಿದ್ದಾರೆಂದು ತೋರುತ್ತಿದೆ ಎಂದು ವಶಪಡಿಸಿಕೊಂಡಿರುವ ಚಿನ್ನದ ಮೌಲ್ಯದಿಂದ ತಿಳಿದು ಬರುತ್ತದೆ. ಏಕೆಂದರೆ ಅದರ ಮಾರುಕಟ್ಟೆ ಮೌಲ್ಯವು ಹೆಚ್ಚುತ್ತಿದೆ. ಬೆಂಗಳೂರು, ಚಿಕ್ಕಮಗಳೂರು ಮತ್ತು ಕೋಲಾರದಂತಹ ನಗರಗಳಲ್ಲಿ ಹೆಚ್ಚು ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಪಾನ್ ಬ್ರೋಕರ್‌ಗಳು ಮತ್ತು ಇತರ ನೆಟ್‌ವರ್ಕ್‌ಗಳ ಮೂಲಕ ಚಿನ್ನದ ಹಂಚಿಕೆ ಮಾಡಲಾಗಿದೆ. ಈ ಬಾರಿಯ ದಾಳಿಯಲ್ಲಿ ಗುಪ್ತಚರ ಜಾಲಗಳು ನಿರ್ಣಾಯಕ ಪಾತ್ರ ವಹಿಸಿವೆ. ಭಾಗಿಯಾಗಿರುವ ಪ್ರತಿಯೊಬ್ಬರ ಹೆಸರನ್ನು ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಲ್ಲದೆ, ವಾಣಿಜ್ಯ ತೆರಿಗೆ ಇಲಾಖೆಯಿಂದ ತಂತ್ರಜ್ಞಾನ ಮತ್ತು ಬುದ್ಧಿವಂತಿಕೆಯನ್ನು ಬಳಸಲಾಗಿದೆ, ಖಾಸಗಿ ಏಜೆನ್ಸಿಗಳಿಂದ ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳ ಕೆಲವು ಪ್ರಮಾಣೀಕೃತ ವ್ಯಾಪಾರಸ್ಥರನ್ನು ದುರ್ಬಳಕೆ ಮಾಡಿಕೊಂಡಿರುವುದನ್ನು ಕಂಡುಹಿಡಿದಿದ್ದಾರೆ. ಇವರುಗಳಿಗೆ 1 ಲಕ್ಷದವರೆಗೆ ನಗದು ಸಾಗಿಸುವ ಮಿತಿ ನೀಡಲಾಗಿತ್ತು.

ಮತದಾರರನ್ನು ಓಲೈಸಲು ಖಾಸಗಿ ಸಂಸ್ಥೆಗಳು ಅವರುಗಳನ್ನು ಉಪಯೋಗಿಸಿಕೊಂಡಿರುವುದನ್ನು ಇಲಾಖೆ ಪತ್ತೆ ಮಾಡಿದೆ. ಈ ಸಂಬಂಧ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಮದ್ಯಕ್ಕಿಂತ ಮತ್ತು ಹಣಕ್ಕಿಂತ ಹೆಚ್ಚು ಚಿನ್ನದ ಹಂಚಿಕೆಯಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಾಹಿತಿ ಪ್ರಕಾರ, ಮೇ 9ರವರೆಗೆ 1,79,79,72,618.72 ಮೌಲ್ಯದ 1,47,30,448.18 ಲೀಟರ್ ಮದ್ಯ ಮತ್ತು 11,97,49,560 ರೂ ಮೌಲ್ಯದ ಮಾದಕ ದ್ರವ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ, 7,03,09,555 ರೂ. ಮೌಲ್ಯದ ಉಚಿತ ಹಂಚಿಕೆಯ ವಸ್ತುಗಳನ್ನು ಅಬಕಾರಿ ಇಲಾಖೆ ವಶಪಡಿಸಿಕೊಂಡಿದ್ದು, ವಾಣಿಜ್ಯ ತೆರಿಗೆ ಇಲಾಖೆಯಿಂದ 9,52,71,752 ರೂ.ಗಳನ್ನು ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT