ಸಂಗ್ರಹ ಚಿತ್ರ TNIE
ರಾಜ್ಯ

ಪರ್ಯಾಯ ಅರಣ್ಯೀಕರಣ: 25 ಸಾವಿರ ಸಸಿಗಳನ್ನು ನೆಟ್ಟ BMRCL

ನಗರದಾದ್ಯಂತ ಸ್ಥಳಗಳನ್ನು ಗುರುತಿಸಲಾಗಿದ್ದು ಮೂರು ವಿಭಿನ್ನ ಹಂತಗಳಲ್ಲಿ, ಸ್ಥಳೀಯ ಮತ್ತು ಹವಾಮಾನವನ್ನು ತಡೆದುಕೊಳ್ಳುವ ಮರಗಳನ್ನು ನೆಡಲಾಗಿದೆ. ಬಿಬಿಎಂಪಿ ಅರಣ್ಯ ಇಲಾಖೆಯಿಂದ ಕಾಮಗಾರಿಯನ್ನು ಮೇಲ್ವಿಚಾರಣೆ ಮಾಡಲಾಯಿತು.

ಬೆಂಗಳೂರು: ಪರಿಹಾರ ಅರಣ್ಯೀಕರಣ (CA) ಅಡಿಯಲ್ಲಿ 25,720 ಸಸಿಗಳನ್ನು ಬೆಂಗಳೂರು ಮೆಟ್ರೊ ರೈಲ್‌ ಕಾರ್ಪೊರೇಶನ್‌ ಲಿಮಿಟೆಡ್‌ನ (ಬಿಎಂಆರ್‌ಸಿಎಲ್‌) ನೆಟ್ಟಿದೆ. ಬಿಬಿಎಂಪಿ ಅರಣ್ಯ ವಿಭಾಗದ ಪ್ರಕಾರ, ಈಗ ಬೆಂಗಳೂರು ನಗರದ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಮೆಟ್ರೋ ಮೂಲಕ ಸಂಪರ್ಕ ಕಲ್ಪಿಸಲು ಮುಂದಾಗಿರುವ ಬಿಎಂಆರ್‌ಸಿಎಲ್‌ ಅದಕ್ಕಾಗಿ ಸಾವಿರಾರು ಮರಗಳನ್ನು ಕಡಿಯಬೇಕಾಗಿರುವುದರಿಂದ ಅದಕ್ಕೆ ಪರಿಹಾರವಾಗಿ ಅರಣ್ಯೀಕರಣವನ್ನು ಕೈಗೊಂಡಿದೆ.

ನಗರದಾದ್ಯಂತ ಸ್ಥಳಗಳನ್ನು ಗುರುತಿಸಲಾಗಿದ್ದು ಮೂರು ವಿಭಿನ್ನ ಹಂತಗಳಲ್ಲಿ, ಸ್ಥಳೀಯ ಮತ್ತು ಹವಾಮಾನವನ್ನು ತಡೆದುಕೊಳ್ಳುವ ಮರಗಳನ್ನು ನೆಡಲಾಗಿದೆ. ಬಿಬಿಎಂಪಿ ಅರಣ್ಯ ಇಲಾಖೆಯಿಂದ ಕಾಮಗಾರಿಯನ್ನು ಮೇಲ್ವಿಚಾರಣೆ ಮಾಡಲಾಯಿತು. ಯೋಜನೆಯನ್ನು ಜೂನ್ 2023ರಲ್ಲಿ ಪ್ರಾರಂಭಿಸಲಾಗಿದ್ದು 2023ರ ಸೆಪ್ಟೆಂಬರ್ ವರೆಗೆ 25,000ಕ್ಕೂ ಹೆಚ್ಚು ಗಿಡಗಳನ್ನು ನೆಡಲಾಗಿದೆ. ಈಗ ಅವು ಉತ್ತಮವಾಗಿ ಬೆಳೆದಿದ್ದು, BMRCL ಅವುಗಳನ್ನು ಇನ್ನೂ ಎರಡು ವರ್ಷಗಳವರೆಗೆ ಮಾತ್ರ ನಿರ್ವಹಿಸುತ್ತದೆ ಎಂದು ಬಿಬಿಎಂಪಿ ಅರಣ್ಯ ಉಪ ಸಂರಕ್ಷಣಾಧಿಕಾರಿ ಬಿಎಲ್‌ಜಿ ಸ್ವಾಮಿ ಹೇಳಿದರು.

ಇಬ್ಲೂರು, ಸಿ.ಎಂ.ಪಿ. (ತರಬೇತಿ ಪ್ರದೇಶ) ನೀಲಸಂದ್ರ, ನಾಡಪ್ರಭು ಕೆಂಪೇಗೌಡ ಬಡಾವಣೆ, ಹಳೆ ಮಿಲಿಟರಿ ಡೈರಿ ಫಾರಂ, ಹೆಬ್ಬಾಳ ಮತ್ತು ಯುವ ತರಬೇತಿ ಕೇಂದ್ರ ಜೆ.ಪಿ. ನಗರದಂತಹ ಸ್ಥಳಗಳಲ್ಲಿ 17,690 ಸಸಿಗಳನ್ನು ನೆಡಲಾಗಿದೆ. ಅದೇ ರೀತಿ ಹಂತ-2ಎ ಅಡಿಯಲ್ಲಿ ಈ ಪ್ರದೇಶಗಳಲ್ಲಿ 8030 ಸಸಿಗಳನ್ನು ನೆಡಲಾಗಿದೆ. ಅಧಿಕಾರಿಗಳ ಪ್ರಕಾರ ಸಿ.ಎ. ಘಟಕ ಅಡಿಯಲ್ಲಿ 40,050 ಹೆಚ್ಚು ಸಸಿಗಳನ್ನು ನೆಡಲಾಗುವುದು ಮತ್ತು ಈಗ ಬಿ.ಎಂ.ಆರ್.ಸಿ.ಎಲ್. ಬದಲಾಗಿ ಅರಣ್ಯ ಇಲಾಖೆ ಈ ಕೆಲಸ ಮಾಡಲಿದೆ.

ಬಿಎಂಆರ್‌ಸಿಎಲ್‌ನ ಹಣಕಾಸು ವಿಭಾಗವು ಸಿಎ ಮತ್ತು ಅದರ ನಿರ್ವಹಣೆಗೆ ಅಗತ್ಯವಿರುವ ಮೊತ್ತವನ್ನು ಮೂರು ವರ್ಷಗಳವರೆಗೆ ಅರಣ್ಯ ಇಲಾಖೆಗೆ ವರ್ಗಾಯಿಸುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಸ್ಯಗಳ ನಿರ್ವಹಣೆಗೆ ಮೀಸಲಾದ ತಂಡವನ್ನು ಹೊಂದಿರುವ ಕಾರಣ ಮೊತ್ತವನ್ನು ಅರಣ್ಯ ಇಲಾಖೆಗೆ ವರ್ಗಾಯಿಸಲಾಗುತ್ತದೆ. 2024ರ ಡಿಸೆಂಬರ್‌ನಲ್ಲಿ ಪತ್ರವ್ಯವಹಾರ ಮತ್ತು ಇತರ ದಾಖಲೆಗಳನ್ನು ಮಾಡಲಾಗುವುದು ಮತ್ತು ಸಿಎ ಸೇರಿದಂತೆ ಮುಂದಿನ ಮಳೆಗಾಲದಲ್ಲಿ ದೊಡ್ಡ ಪ್ರಮಾಣದ ಸಸಿಗಳನ್ನು ನೆಡುವ ಅಭಿಯಾನವನ್ನು ಕೈಗೊಳ್ಳಲಾಗುವುದು ಎಂದು ಬಿಎಂಆರ್‌ಸಿಎಲ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

SCROLL FOR NEXT