ಕದಂಬ ನೌಕಾನೆಲೆ ಬಳಿ GPS ಟ್ರ್ಯಾಕರ್ ಹೊಂದಿದ್ದ ರಣಹದ್ದು ಪತ್ತೆ 
ರಾಜ್ಯ

ಕಾರವಾರ: ಕದಂಬ ನೌಕಾನೆಲೆ ಬಳಿ GPS ಟ್ರ್ಯಾಕರ್ ಹೊಂದಿದ್ದ ರಣಹದ್ದು ಪತ್ತೆ!

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕದಂಬ ನೌಕಾನೆಲೆಯ ಸಮೀಪ ಜಿಪಿಎಸ್ ಟ್ರ್ಯಾಕರ್ ಹೊಂದಿದ್ದ ರಣಹದ್ದು ಪತ್ತೆಯಾಗಿತ್ತು, ಹೀಗಾಗಿ ಪಕ್ಷಿಯನ್ನು ಬೇಹುಗಾರಿಕೆ ಉದ್ದೇಶಕ್ಕೆ ಬಳಸಲಾಗುತ್ತಿದೆಯೇ ಎಂಬ ಆತಂಕದಿಂದ ಎಂದು ಭದ್ರತಾ ಅಧಿಕಾರಿಗಳು ಗಲಿಬಿಲಿಗೊಂಡಿದ್ದರು.

ಕಾರವಾರ: ರಣಹದ್ದಿನ ಎರಡೂ ಕಾಲುಗಳಿಗೆ ಪ್ರತ್ಯೇಕ ಬಣ್ಣದಲ್ಲಿ ಇಂಗ್ಲಿಷ್ ಅಕ್ಷರ ಮತ್ತು ಸಂಖ್ಯೆ ಬರೆದಿರುವ ಟ್ಯಾಗ್​ ಕಟ್ಟಲಾಗಿದೆ. ಜೊತೆಗೆ ಬೆನ್ನ ಮೇಲೆ ಜಿಪಿಎಸ್ ಟ್ರ್ಯಾಕರ್​ ಇದೆ. ಹೀಗಾಗಿ ಸ್ಥಳೀಯರು ರಣಹದ್ದು ಬೇಹುಗಾರಿಕೆಗಾಗಿ ಶತ್ರು ದೇಶದಿಂದ ಬಂದಿರಬಹುದು ಎಂದು ಆತಂಕಗೊಂಡಿದ್ದರು. ಅಲ್ಲದೇ ಜಿಲ್ಲೆಯಲ್ಲಿ ಕೈಗಾ ಅಣು ವಿದ್ಯುತ್ ಕೇಂದ್ರ, ಕದಂಬ ನೌಕಾನೆಲೆ ಇದ್ದು, ಈ ರಣಹದ್ದು ಕಾಣಿಸಿಕೊಂಡಿದ್ದರಿಂದ ಹಲವು ಅನುಮಾನಗಳನ್ನು ಹುಟ್ಟುಹಾಕಿತ್ತು.

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕದಂಬ ನೌಕಾನೆಲೆಯ ಸಮೀಪ ಜಿಪಿಎಸ್ ಟ್ರ್ಯಾಕರ್ ಹೊಂದಿದ್ದ ರಣಹದ್ದು ಪತ್ತೆಯಾಗಿತ್ತು, ಹೀಗಾಗಿ ಪಕ್ಷಿಯನ್ನು ಬೇಹುಗಾರಿಕೆ ಉದ್ದೇಶಕ್ಕೆ ಬಳಸಲಾಗುತ್ತಿದೆಯೇ ಎಂಬ ಆತಂಕದಿಂದ ಎಂದು ಭದ್ರತಾ ಅಧಿಕಾರಿಗಳು ಗಲಿಬಿಲಿಗೊಂಡಿದ್ದರು.

ಆದರೆ ಹಕ್ಕಿಯ ಮೇಲಿನ ಜಿಪಿಎಸ್ ಟ್ಯಾಗ್ ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ (ಬಿಎನ್‌ಎಚ್‌ಎಸ್) ಅಳವಡಿಸಿರುವುದು ಕಂಡುಬಂದಿದ್ದರಿಂದ ಅವರ ಅನುಮಾನವು ಆಧಾರರಹಿತವಾಗಿತ್ತು. ಸಂಶೋಧನಾ ಉದ್ದೇಶಗಳಿಗಾಗಿ ರಣಹದ್ದಿಗೆ ಟ್ಯಾಗ್ ಮಾಡಲಾಗಿತ್ತು. ಕಾರವಾರದ ಸುತ್ತಲೂ ಅದೇ ರೀತಿಯ ಜಿಪಿಎಸ್ ಟ್ಯಾಗ್ ಮಾಡಿದ ಪಕ್ಷಿಗಳು ಹಾರಾಟ ನಡೆಸಿದ ದಾಖಲೆಗಳಿವೆ. ತಡೋಬಾ-ಅಂಧಾರಿ ಹುಲಿ ಸಂರಕ್ಷಿತ ಪ್ರದೇಶದಿಂದ ರಣಹದ್ದು ಬಿಡುಗಡೆಯಾಗಿದೆ ಎಂದು ಹೇಳಲಾಗಿದೆ. ಮಹಾರಾಷ್ಟ್ರದ ತಡೋಬಾ ರಾಷ್ಟ್ರೀಯ ಉದ್ಯಾನವನದಲ್ಲಿ ಬಾಂಬೆ ನ್ಯಾಚ್ಯುರಲ್ ಹಿಸ್ಟರಿ ಆಫ್ ಸೊಸೈಟಿಯಿಂದ ಸಂಶೋಧನೆ ನಡೆಯುತ್ತಿದ್ದು, 5 ರಣಹದ್ದಿಗೆ ಟ್ಯಾಗಿಂಗ್ ಮಾಡಿ ಸಂತಾನೋತ್ಪತ್ತಿ ಬಳಿಕ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಒಂದು ಇಲ್ಲಿಗೆ ಬಂದಿದೆ" ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಅದರ ಹಿಂಭಾಗದಲ್ಲಿರುವ ಟ್ರಾನ್ಸ್‌ಮಿಟರ್ ವೆಬ್‌ಸೈಟ್ ವಿಳಾಸ mahaforest.gov.in ಎಂದಿದೆೆ. ಪಕ್ಷಿಯನ್ನು ಪತ್ತೆಹಚ್ಚಿದ ನೌಕಾನೆಲೆಯ ಅಧಿಕಾರಿಗಳು ಭಾನುವಾರ, ಅವರು ಅದರ ಫೋಟೋಗಳು ಮತ್ತು ವೀಡಿಯೊಗಳನ್ನು ಮತ್ತು ಜಿಪಿಎಸ್ ಟ್ಯಾಗ್ ಅನ್ನು ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಕಾರವಾರದ ನದಿ ತೀರದ ಸ್ಥಳೀಯ ನಿವಾಸಿಗಳು ಹಕ್ಕಿಯ ಛಾಯಾಚಿತ್ರಗಳನ್ನು ತೆಗೆದು ನೌಕಾ ಅಧಿಕಾರಿಗಳಿಗೆ ಒಂದು ದಿನ ಮುಂಚಿತವಾಗಿ ಮಾಹಿತಿ ನೀಡಿದ್ದರು.

ನೌಕಾಪಡೆಯ ಅಧಿಕಾರಿಗಳು ಪಕ್ಷಿಯನ್ನು ಹಿಡಿಯಲು ಪ್ರಯತ್ನಿಸಿದರು, ಆದರೆ ಅದು ಹಾರಿಹೋಯಿತು. ಕದಂಬ ನೌಕಾನೆಲೆಯ 2 ನೇ ಹಂತದಲ್ಲಿ ಮತ್ತು ಯುದ್ಧನೌಕೆಗಳ 2 ನೇ ಹಂತದಲ್ಲಿ ಶತ್ರು ರಾಷ್ಟ್ರಗಳಿಗೆ ಸೂಕ್ಷ್ಮ ಮಾಹಿತಿಯನ್ನು ರವಾನಿಸಿದ್ದಕ್ಕಾಗಿ ಅಧಿಕಾರಿಗಳು ಮತ್ತು ಸ್ಥಳೀಯ ಕಾರ್ಮಿಕರು ಸೇರಿದಂತೆ ಐವರನ್ನು ಇತ್ತೀಚೆಗೆ ಬಂಧಿಸಲಾಗಿದ್ದು, ನೌಕಾನೆಲೆ ಅಧಿಕಾರಿಗಳು ಹೆಚ್ಚು ಅಲರ್ಟ್‌ ಆಗಿದ್ದಾರೆ. ಕೆಲ ದಿನಗಳ ಹಿಂದೆ ನೌಕಾನೆಲೆಯ ಮೇಲೆ ರಾತ್ರಿಯಲ್ಲಿ ಡ್ರೋನ್ ಹಾರುತ್ತಿರುವುದು ಕಂಡುಬಂದಿತ್ತು ಹೀಗಾಗಿ ರಣಹದ್ದು ಪತ್ತೆಯಾಗಿದ್ದರಿಂದ ಭದ್ರತಾ ಅಧಿಕಾರಿಗಳು ಮತ್ತಷ್ಚು ಆತಂಕಗೊಂಡಿದ್ದರು. ಕೈಗಾ ಅಣು ವಿದ್ಯುತ್ ಸ್ಥಾವರ ಮತ್ತು ನೌಕಾನೆಲೆ ಇಲ್ಲಿ ಇರುವುದರಿಂದ ಸ್ಥಳೀಯರು ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಕಾರವಾರ ಪೊಲೀಸರು, ಅರಣ್ಯ ಇಲಾಖೆ ಹಾಗೂ ರಾಜ್ಯ ಮತ್ತು ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ. ನಾವು ಕ್ಯಾಮೆರಾದೊಂದಿಗೆ ಟ್ರ್ಯಾಕರ್‌ನಲ್ಲಿ ಜೂಮ್ ಮಾಡಿದಾಗ, ಟ್ರ್ಯಾಕರ್‌ನಲ್ಲಿನ ವಿವರಗಳನ್ನು ನೋಡಿದೆವು ಎಂದು ಜಿಲ್ಲಾ ಅಧಿಕಾರಿಯೊಬ್ಬರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

Indian Stock Market: ಸತತ ಕುಸಿತ, ಬರೊಬ್ಬರಿ ಶೇ.1ರಷ್ಟು ಕುಸಿದ Sensex, Nifty 50, ರೂಪಾಯಿ ಮೌಲ್ಯ ಇಳಿಕೆ!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

Indian Navy ಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ! Video

SCROLL FOR NEXT