ಸಾಂದರ್ಭಿಕ ಚಿತ್ರ 
ರಾಜ್ಯ

OTS ಬಳಸಿ, ಇಲ್ಲವೇ ದುಪ್ಪಟ್ಟು ತೆರಿಗೆ ಪಾವತಿಸಿ: ಸುಸ್ತಿದಾರರಿಗೆ BBMP ಎಚ್ಚರಿಕೆ

ಒಟಿಎಸ್‌ ಮೂಲಕ ಬಡ್ಡಿ ಹಾಗೂ ದಂಡಕ್ಕೆ ವಿನಾಯಿತಿ ನೀಡಲಾಗಿದೆ. ಈ ಅವಕಾಶ ಮತ್ತೆ ಸಿಗುವುದಿಲ್ಲ. ಕೊನೆಯ ದಿನಗಳಲ್ಲಿ ಇನ್ನೆರಡು ದಿನ ಸಮಯ ಕೊಡಿ ಎಂದರೆ ಅದಕ್ಕೆ ಅವಕಾಶ ಇರುವುದಿಲ್ಲ.

ಬೆಂಗಳೂರು: ಒಂದು ಬಾರಿ ಪರಿಹಾರ (ಒಟಿಎಸ್) ಯೋಜನೆ ನವೆಂಬರ್‌ ಅಂತ್ಯಕ್ಕೆ ಕೊನೆಯಾಗಲಿದ್ದು, ನಂತರ ಸುಸ್ತಿದಾರರು ದುಪ್ಪಟ್ಟು ಮೊತ್ತದ ಆಸ್ತಿ ತೆರಿಗೆ ಪಾವತಿಸಬೇಕಾಗುತ್ತದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರು ಸೋಮವಾರ ಹೇಳಿದರು.

ಆಸ್ತಿ ತೆರಿಗೆ ಸಂಗ್ರಹ ಸೇರಿ ವಿವಿಧ ವಿಚಾರಗಳಿಗೆ ಸಂಬಂಧಿಸಿದಂತೆ ಸೋಮವಾರ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಮಾತನಾಡಿದ ಅವರು, ಒಟಿಎಸ್‌ ಮೂಲಕ ಬಡ್ಡಿ ಹಾಗೂ ದಂಡಕ್ಕೆ ವಿನಾಯಿತಿ ನೀಡಲಾಗಿದೆ. ಈ ಅವಕಾಶ ಮತ್ತೆ ಸಿಗುವುದಿಲ್ಲ. ಕೊನೆಯ ದಿನಗಳಲ್ಲಿ ಇನ್ನೆರಡು ದಿನ ಸಮಯ ಕೊಡಿ ಎಂದರೆ ಅದಕ್ಕೆ ಅವಕಾಶ ಇರುವುದಿಲ್ಲ ಎಂದು ಹೇಳಿದರು.

ನವೆಂಬರ್ ಅಂತ್ಯದವರೆಗೆ ಒನ್ ಟೈಮ್ ಸೆಟಲ್ಮೆಂಟ್ (ಒಟಿಎಸ್) ಯೋಜನೆಯನ್ನು ವಿಸ್ತರಿಸಿದ್ದರೂ ಬಿಬಿಎಂಪಿಯ 2024–25ನೇ ಸಾಲಿನ ಆಸ್ತಿ ತೆರಿಗೆ ಗುರಿಯಲ್ಲಿ ಶೇ 69.74ರಷ್ಟು ಸಾಧನೆ ಮಾಡಿ, ರೂ.3,633 ಕೋಟಿ ಸಂಗ್ರಹಿಸಿದ್ದರೂ ಸುಸ್ತಿದಾರರಿಂದ ಇನ್ನೂ ರೂ.397.29 ಕೋಟಿ ಸಂಗ್ರಹವಾಗಬೇಕಿದೆ. 2.34 ಲಕ್ಷ ಆಸ್ತಿಗಳ ಮಾಲೀಕರು ಸುಸ್ತಿದಾರರಾಗಿದ್ದಾರೆ. 2024ರ ಏಪ್ರಿಲ್‌ 1ರಂತೆ 3.97 ಲಕ್ಷ ಸುಸ್ತಿದಾರರು ರೂ.733.61 ಕೋಟಿ ಆಸ್ತಿ ತೆರಿಗೆ ಪಾವತಿಸಬೇಕಾಗಿತ್ತು. ಈ ಆರ್ಥಿಕ ವರ್ಷದಲ್ಲಿ 1.60 ಲಕ್ಷ ಸುಸ್ತಿದಾರರು ರೂ.336 ಕೋಟಿಯನ್ನು ಪಾವತಿಸಿದ್ದಾರೆ. ಆಸ್ತಿ ತೆರಿಗೆ ಸುಸ್ತಿದಾರರಿಗೆ ಹಲವು ಬಾರಿ ನೋಟಿಸ್‌ ಜಾರಿ ಮಾಡಲಾಗಿದ್ದರೂ, ತೆರಿಗೆ ಪಾವತಿಸಿಲ್ಲ. ಹೀಗಾಗಿ, ಪ್ರಸ್ತುತ ಆರ್ಥಿಕ ವರ್ಷದಲ್ಲಿ ಈವರೆಗೆ 82,602 ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಆಸ್ತಿ ತೆರಿಗೆ ಪಾವತಿಸದ 6,069 ವಾಣಿಜ್ಯ ಕಟ್ಟಡಗಳಿಗೆ ಪ್ರಸ್ತುತ ಆರ್ಥಿಕ ವರ್ಷದಲ್ಲಿ ಬೀಗಮುದ್ರೆ ಹಾಕಲಾಗಿದೆ. ಒಂದು ವಾರದಲ್ಲಿ 175 ಕಟ್ಟಡಗಳಿಗೆ ಬೀಗ ಹಾಕಲಾಗಿದೆ ಎಂದು ಮಾಹಿತಿ ನೀಡಿದರು.

ಆಸ್ತಿ ತೆರಿಗೆಯನ್ನು ತಪ್ಪಾಗಿ ಪಾವತಿಸುತ್ತಿದ್ದ 15,731 ಸ್ವತ್ತುಗಳ ತೆರಿಗೆಯನ್ನು ಪುನರ್‌ ವಿಮರ್ಶೆ ಮಡಲಾಗಿದ್ದು, ರೂ.398.49 ಕೋಟಿ ವ್ಯತ್ಯಾಸ ಮೊತ್ತ ಪಾವತಿಯಾಗಬೇಕಿದೆ. 7,145 ಆಸ್ತಿಗಳಿಂದ ರೂ.101.94 ಕೋಟಿ ಸಂಗ್ರಹವಾಗಿದೆ. ಇನ್ನೂ 10,641 ಆಸ್ತಿಗಳಿಂದ ರೂ.192.66 ಕೋಟಿ ಪಾವತಿಯಾಗಬೇಕಿದೆ ಎಂದರು.

ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಸುಸ್ತಿದಾರರು ಹಾಗೂ ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿ (ಎಸ್ಎಎಸ್) ಅಡಿ ತಪ್ಪು ಮಾಹಿತಿ ನೀಡಿ ನಂತರ ಪರಿಷ್ಕರಣೆ ಮಾಡಿಕೊಂಡಿರುವ ಪ್ರಕರಣಗಳಲ್ಲಿ ತೆರಿಗೆ ವಸೂಲಿ ಪ್ರಮಾಣ ಹೆಚ್ಚಿಸಬೇಕು. ಅದಕ್ಕಾಗಿ ಆಯಾವಲಯ ವ್ಯಾಪ್ತಿಯಲ್ಲಿಯೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಒಂದು ಬಾರಿ ಪರಿಹಾರ ಯೋಜನೆಯಡಿ ಆಸ್ತಿ ತೆರಿಗೆಯ ಬಾಕಿದಾರರಿಗೆ ಬಡ್ಡಿ ಮತ್ತು ದಂಡ ಮನ್ನಾ ಮಾಡಲಾಗಿದ್ದು, ಈ ಯೋಜನೆಯು 30ನೇ ನವೆಂಬರ್ ವರೆಗೆ ಮಾತ್ರ ಜಾರಿಯಲ್ಲಿರಲಿದೆ. ಈ ಸಂಬಂಧ ಪ್ರತಿಯೊಬ್ಬರೂ ಬಾಕಿ ಆಸ್ತಿ ತೆರಿಗೆಯನ್ನು 30ನೇ ನವೆಂಬರ್ ಒಳಗಾಗಿ BBMPtax.karnataka.gov.in ಗೆ ಭೇಟಿ ನೀಡಿ ಪಾವತಿಸಬೇಕು. ಇಲ್ಲವಾದಲ್ಲಿ 1ನೇ ಡಿಸೆಂಬರ್ 2024 ರಿಂದ ಪಾವತಿಸಬೇಕಿರುವ ಬಾಕಿ ಆಸ್ತಿ ತೆರಿಗೆಯು ದುಪ್ಪಟ್ಟಾಗಲಿದೆ ಎಂಬುದರ ಬಗ್ಗೆ ನಾಗರೀಕರಿಲ್ಲಿ ಅರಿವು ಮೂಡಿಸಬೆಕೆಂದು ಸೂಚಿಸಿದರು.

ನಗರದಲ್ಲಿ ಇ-ಖಾತಾ ಪಡೆಯಲು ಅನುಕೂಲವಾಗುವ ನಿಟ್ಟಿನಲ್ಲಿ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಖಾತಾ ನೀಡುವ ವ್ಯವಸ್ಥೆ ಮಾಡಲಾಗಿದ್ದು, ಅಗತ್ಯ ದಾಖಲೆಗಳನ್ನು ತೆಗದುಕೊಂಡು ಹೋಗಿ 45 ರೂ. ಪಾವತಿಸಿದರೆ ಇ-ಖಾತಾ ಸಿಗಲಿದೆ, ನಾಗರೀಕರು ಇ-ಖಾತಾ ಪಡೆಯಲು ಅರ್ಜಿ ಹಾಕುವ ಹಾಗೂ ದಾಖಲೆಗಳನ್ನು ಅಪ್ಲೋಡ್ ಮಾಡುವ ಸಲುವಾಗಿ ಪಾಲಿಕೆಯ ಯುಟ್ಯೂಬ್ ಲಿಂಕ್ https://youtube.com/@bbmpcares?si=YStwr7xLhX5aRxFT ನಲ್ಲಿ ಕನ್ನಡ ಹಾಗೂ ಇಂಗ್ಲೀಷ್ ಎರಡೂ ಭಾಷೆಯ ವೀಡಿಯೋ ಅಪ್ಲೊಡ್ ಮಾಡಲಾಗಿದೆ. ಈ ವೀಡಿಯೋ ನೋಡಿಕೊಂಡು ಸುಲಭವಾಗಿ ಇ-ಖಾತಾ ಪಡೆಯಬಹುದಾಗಿದೆ. ಇ-ಖಾತಾ ಪಡೆಯಲು ತಾಂತ್ರಿಕ ಸಮಸ್ಯೆಯಿದ್ದರೆ ಅದನ್ನು ಬಗೆಹರಿಸುವ ನಿಟ್ಟಿನಲ್ಲಿ ವಲಯವಾರು 13 ಸಹಾಯ ತಂಡಗಳನ್ನು ರಚಿಸಲಾಗಿದೆ ಎಂದು ತಿಳಿಸಿದರು.

ಸಹಾಯವಾಣಿ ಸಂಖ್ಯೆ ಇಂತಿದೆ...

  • ಬೊಮ್ಮನಹಳ್ಳಿ ವಲಯ: 9480683182 / 9480683712

  • ದಾಸರಹಾಳ್ಳಿ ವಲಯ: 9480683710

  • ಮಹಾದೇವಪುರ ವಲಯ: 9480683718 / 9480683720

  • ಪೂರ್ವ ವಲಯ: 9480683203

  • ಪಶ್ಚಿಮ ವಲಯ: 9480683653 / 9480683204

  • ದಕ್ಷಿಣ ವಲಯ: 9480683638 / 9480683179

  • ರಾಜರಾಜೇಶ್ವರಿ ನಗರ ವಲಯ: 9480683576

  • ಯಲಹಂಕ ವಲಯ: 9480683645 / 9480683516

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ವಿಶ್ವಕಪ್ ವಿಜೇತ ಅಂಧ ಕರ್ನಾಟಕದ ಆಟಗಾರ್ತಿಯರಿಗೆ ತಲಾ 10 ಲಕ್ಷ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಮತ್ತೊಂದು ಹೆಣ್ಣಿನೊಂದಿಗೆ ಮೋಹ, ನಂಬಿಕೆ ದ್ರೋಹ; ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಅಯೋಧ್ಯ ಧ್ವಜಾರೋಹಣ: ಸ್ವಿಚ್ ಅಥವಾ ಹಗ್ಗ ಬಳಸದ ಪ್ರಧಾನಿ, ಹೇಗೆ ನೆರವೇರಿಸಿದ್ರು?ಈ ಅದ್ಭುತ Video ನೋಡಿ..

ಬರವಣಿಗೆಯಲ್ಲಿ ಖುಷಿ ಕಂಡ ಪೊಲೀಸ್ ಅಧಿಕಾರಿ: 'ಬಸವಣ್ಣನ ವಚನ' ಗಳನ್ನು ಇಂಗ್ಲೀಷ್ ಗೆ ಅನುವಾದ ಮಾಡ್ತಿರೋ DYSP ಬಸವರಾಜ್ ಯಲಿಗಾರ್!

SCROLL FOR NEXT